Ginger in summer : ಬೇಸಿಗೆಯಲ್ಲಿ ಶುಂಠಿ ತಿನ್ನಬಹುದೇ..! ಯಾಕೆ ತಿನ್ನಬಾರದು..?

ಇದು ಕರೋನಾ ಮಹಾಮಾರಿ  ವಕ್ಕರಿಸಿರುವ ಕಾಲ. ದೇಹದ  ಇಮ್ಯೂನಿಟಿ  ಸಾಕಷ್ಟು ಸದೃಢವಾಗಿಡಲೇ ಬೇಕಾದ ಸಮಯ. ಅದಕ್ಕಾಗಿಯೇ ಜನ ಶುಂಠಿಟೀ, ಶುಂಠಿ ಸೂಪ್, ಜೇನು ತುಪ್ಪ ಜೊತೆ ಶುಂಠಿ, ಶುಂಠಿಯ ಕಷಾಯ ಇತ್ಯಾದಿ ಸೇವಿಸುತ್ತಲೇ ಇರುತ್ತೇವೆ. 

Written by - Ranjitha R K | Last Updated : Apr 16, 2021, 12:36 PM IST
  • ಚಳಿ ಇರುವಾಗ ನಾವು ಸಹಜವಾಗಿ ಶುಂಠಿಯನ್ನು ಸ್ವಲ್ಪ ಹೆಚ್ಚಿಗೆ ತಿನ್ನುತ್ತೇವೆ.
  • ಶುಂಠಿಯಲ್ಲಿ ಉಷ್ಣ ಪ್ರವೃತ್ತಿ ಇದೆ.
  • ಬೇಸಿಗೆ ಬಂದಾಗ ಶುಂಠಿ ತಿನ್ನಬಹುದೇ..? ತಿಂದರೆ ಲಾಭ, ನಷ್ಟ ಏನು..?
 Ginger in summer : ಬೇಸಿಗೆಯಲ್ಲಿ ಶುಂಠಿ ತಿನ್ನಬಹುದೇ..! ಯಾಕೆ ತಿನ್ನಬಾರದು..? title=
ಶುಂಠಿಯಲ್ಲಿ ಉಷ್ಣ ಪ್ರವೃತ್ತಿ ಇದೆ. (file photo)

ನವದೆಹಲಿ : ಚಳಿ ಇರುವಾಗ ನಾವು ಸಹಜವಾಗಿ ಶುಂಠಿಯನ್ನು (Ginger) ಸ್ವಲ್ಪ ಹೆಚ್ಚಿಗೆ ತಿನ್ನುತ್ತೇವೆ. ಶುಂಠಿಯಲ್ಲಿ ಉಷ್ಣ ಪ್ರವೃತ್ತಿ ಇದೆ. ಹಾಗಾಗಿ ಚಳಿಗಾಲದಲ್ಲಿ ಶುಂಠಿ ತಿಂದರೆ ಶರೀರ ಗರಂ ಆಗಿರುತ್ತದೆ ಅನ್ನೋದು ಸಹಜ ಭಾವನೆ. ಬೇಸಿಗೆ ಬಂದಾಗ ಶುಂಠಿ ಕಡಿಮೆ ತಿನ್ನುತ್ತೇವೆ. ಹೊರಗೆ ಬಿಸಿ ಇದ್ದಾಗ ದೇಹ ತಂಪಾಗಿರಬೇಕು ಎಂಬ ಕಾರಣಕ್ಕೆ ಶುಂಠಿ ವರ್ಜಿಸುತ್ತೇವೆ. ಆದರೆ, ಇದು ಕರೋನಾ ಮಹಾಮಾರಿ (Coronavirus) ವಕ್ಕರಿಸಿರುವ ಕಾಲ. ದೇಹದ  ಇಮ್ಯೂನಿಟಿ (immunity) ಸಾಕಷ್ಟು ಸದೃಢವಾಗಿಡಲೇ ಬೇಕಾದ ಸಮಯ. ಅದಕ್ಕಾಗಿಯೇ ಜನ ಶುಂಠಿಟೀ, ಶುಂಠಿ ಸೂಪ್, ಜೇನು ತುಪ್ಪ ಜೊತೆ ಶುಂಠಿ, ಶುಂಠಿಯ ಕಷಾಯ ಇತ್ಯಾದಿ ಸೇವಿಸುತ್ತಲೇ ಇರುತ್ತೇವೆ. 

ಬಿರು ಬೇಸಿಗೆಯಲ್ಲಿ ಶುಂಠಿ ಯಾಕೆ ತಿನ್ನಬಾರದು.?
1. ಬಿರುಬೇಸಿಗೆಯಲ್ಲಿ (Summer) ಶುಂಠಿ ಹೆಚ್ಚಿಗೆ ತಿಂದರೆ ದೇಹದ ಉಷ್ಣ ಪ್ರವೃತ್ತಿ ಜಾಸ್ತಿಯಾಗಬಹುದು. ಇದರಿಂದ ಆರೋಗ್ಯಕ್ಕೆ (Health) ಅಪಾಯ ಇದೆ.
2.  ಬೇಸಿಗೆಯಲ್ಲಿ ಹೆಚ್ಚಿಗೆ ಶುಂಠಿ (Ginger) ತಿಂದರೆ ಭೇದಿ ಉಂಟಾಗಬಹುದು.
3.  ಅಧಿಕ ಶುಂಠಿ ತಿಂದರೆ ಎದೆ ಉರಿ ಉಂಟಾಗಬಹುದು
4. ಶುಂಠಿ ಹೊಟ್ಟೆಯಲ್ಲಿ ಅಸಿಡಿಟಿ (Accidity) ಸೃಷ್ಟಿಸಬಹುದು.
5. ಹೈ ಬಿಪಿ ಇರುವವರು ಶುಂಠಿ ತಿನ್ನುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ
6. ಹೆಚ್ಚಿಗೆ ಶುಂಠಿ ತಿಂದರೆ ಪಿರಿಯಡ್ಸ್ ಹೊತ್ತಿನಲ್ಲಿ ಬ್ಲೀಡಿಂಗ್ ಜಾಸ್ತಿ ಆಗಬಹುದು. 

ಇದನ್ನೂ ಓದಿ : Fried Green Chilli Recipe: ನಿಮಗೂ ಮಸಾಲೆಯುಕ್ತ ಆಹಾರ ಇಷ್ಟವೇ, ಹಾಗಿದ್ದರೆ ತಪ್ಪದೇ ಟ್ರೈ ಮಾಡಿ ಫ್ರೈಡ್ ಗ್ರೀನ್ ಚಿಲ್ಲಿ

ಬಿರುಬೇಸಿಗೆಯಲ್ಲಿ ಶುಂಠಿಯಿಂದಾಗುವ ಲಾಭ..!
1. ಬೇಸಿಗೆಯಲ್ಲಿ ನಿತ್ಯ 2-4 ಗ್ರಾಂ ಶುಂಠಿ ಸೇವನೆ ಮಾಡಬಹುದು ಎಂದು ವೈದ್ಯರು ಸಲಹೆ  ನೀಡುತ್ತಾರೆ. 
2. ಶುಂಠಿ ನರಗಳನ್ನು ಶಾಂತವಾಗಿಡುತ್ತದೆ.  ಹಾಗಾಗಿ ಬೆಳಗೆದ್ದು ಅಥವಾ ರಾತ್ರಿ ಮಲಗುವ ಮುನ್ನ ಸ್ವಲ್ಪ ಶುಂಠಿ ತಿನ್ನಬಹುದು
3. ಊಟಕ್ಕೆ ಹದಿನೈದು ನಿಮಿಷ ಮೊದಲು ಶುಂಠಿಯುಕ್ತ ಟೀ (Ginger Tea) ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. 
4. ಬೇಸಿಗೆಯಲ್ಲಿ ಹಸಿವಾಗುವುದಿಲ್ಲ. ಶುಂಠಿ ತಿಂದರೆ ಅದು ಹಸಿವೆಯನ್ನು (Hunger) ಹೆಚ್ಚಿಸುತ್ತದೆ.
5. ದೇಹದ ಇಮ್ಯೂನಿಟಿಯನ್ನು (Immunity) ಹೆಚ್ಚಿಸುತ್ತದೆ
6. ದೇಹಕ್ಕೆ ಯಾವುದೇ ಸೋಂಕು ಉಂಟಾಗದಂತೆ ರಕ್ಷಿಸುತ್ತದೆ. 

ಇದನ್ನೂ ಓದಿ : Home Care for Corona Patient: ಮನೆಯಲ್ಲಿ ಕರೋನಾಗೆ ಚಿಕಿತ್ಸೆ ಪಡೆಯುತ್ತೀರಾ ಹಾಗಾದ್ರೆ, ಈ ನಿಯಮಗಳನ್ನು ಅನುಸರಿಸಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News