ಕಂತೆ ಕಂತೆ ಕೂದಲು ಉದುರುತ್ತಿದೆಯೇ ? ಹಾಗಿದ್ದರೆ ಇದುವೇ ಸರಿಯಾದ ಮನೆ ಮದ್ದು

ಅನೇಕ ಜನರು ಕೂದಲು ಉದುರುವಿಕೆಯಿಂದ ಬಳಲುತ್ತಿದ್ದಾರೆ, ಮತ್ತು ಇದಕ್ಕೆ ಹಲವು ಕಾರಣಗಳಿದ್ದರೂ, ಪೌಷ್ಟಿಕಾಂಶದ ಕೊರತೆಯೇ ಮುಖ್ಯ ಅಂಶವೆಂದು ಹೇಳಲಾಗುತ್ತದೆ. 

Written by - Ranjitha R K | Last Updated : Aug 1, 2023, 03:50 PM IST
  • ಕೂದಲು ಉದುರುವಿಕೆಗೆ ಪೌಷ್ಟಿಕಾಂಶದ ಕೊರತೆಯೂ ಪ್ರಮುಖ ಕಾರಣವಾಗಿದೆ.
  • ಕೂದಲು ಉದುರುವುದನ್ನು ತಡೆಯಲು ಹೆಚ್ಚು ಹಣ ಬೇಕಾಗಿಲ್ಲ.
  • ವಿಟಮಿನ್ ಡಿ ಕೂದಲಿಗೆ ಒಳಗಿನಿಂದ ಪೋಷಣೆ ನೀಡುತ್ತದೆ.
ಕಂತೆ ಕಂತೆ ಕೂದಲು ಉದುರುತ್ತಿದೆಯೇ ? ಹಾಗಿದ್ದರೆ ಇದುವೇ ಸರಿಯಾದ ಮನೆ  ಮದ್ದು  title=

ಬೆಂಗಳೂರು : ಗಂಡಸರೇ ಆಗಲಿ ಹೆಂಗಸರೇ ಆಗಲಿ ಕೂದಲು ಉದುರುವುದು ಪ್ರತಿಯೊಬ್ಬರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ. ಇದಕ್ಕೆ ಕಾರಣ ಹಲವಾರು ಇರಬಹುದು. ಅತಿಯಾದ ರಾಸಾಯನಿಕಗಳ ಬಳಕೆ, ಹೀಟ್ ಟ್ರೀಟ್ ಮೆಂಟ್ ಗಳು, ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳು, PCOS ಮತ್ತು ಹೈಪೋಥೈರಾಯ್ಡಿಸಮ್‌ನಂತಹ ಹಾರ್ಮೋನುಗಳ ಅಸಮತೋಲನ, ಪೌಷ್ಟಿಕಾಂಶದ ಕೊರತೆಗಳು ಕೂದಲು ಉದುರುವಿಕೆಗೆ ಮುಖ್ಯ ಕಾರಣಗಳಾಗಿವೆ. 

ಆರೋಗ್ಯಕರ ಕೂದಲು ಹೊಂದಲು ನಾವು ಬಳಸುವ ಎಣ್ಣೆ, ಮಸಾಜ್ ಗಳ ಸ್ಪಾ ಗಳ ಜೊತೆಗೆ ಸೇವಿಸುವ ಆಹಾರ ಕೂಡಾ ಮುಖ್ಯವಾಗಿರುತ್ತದೆ. ಕೂದಲು ಬೇರಿನಿಂದ  ಗಟ್ಟಿಯಾಗಲು ಮತ್ತು ಆರೋಗ್ಯಕರವಾಗಿರಲು ಅಗತ್ಯ ಪೋಷಕಾಂಶಗಳನ್ನು ಸೇವಿಸಬೇಕು. ಕೂದಲಿಗೆ ಅಗತ್ಯವಾಗಿರುವ ಪೋಷಕಾಂಶಗಳು ಈ ಕೆಳಗಿನ ಆಹಾರಗಳಲ್ಲಿ  ಲಭಿಸುತ್ತದೆ. 

ಇದನ್ನೂ ಓದಿ : ಪ್ಲಾಸ್ಟಿಕ್ ಬಾಟಲ್ ನೀರು ಸ್ಲೋಪಾಯ್ಸನ್‌ ಇದ್ದಂತೆ..ಬಳಸುವ ಮುನ್ನ ಎಚ್ಚರ ವಹಿಸಿ..!

ಪ್ರೋಟೀನ್ : ಕೂದಲು ಬುಡದಿಂದ ಗಟ್ಟಿಯಾಗಬೇಕಾದರೆ ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಇರಬೇಕು. ಇದು ಬೇಳೆ ಬೀನ್ಸ್, ಮೊಟ್ಟೆ , ಹಾಲು, ಕೋಳಿ, ಮೀನು ಮುಂತಾದ ಪದಾರ್ಥಗಳಲ್ಲಿ ಸಿಗುತ್ತದೆ. 

 ಐರನ್ : ಹಸಿರು  ಎಲೆಗಳ ತರಕಾರಿಗಳು, ಕಾಳುಗಳು, ಬೀಜಗಳು, ಕೋಳಿ ಮತ್ತು ಮಾಂಸ ನಮ್ಮ ದೇಹಕ್ಕೆ ಕಬ್ಬಿಣವನ್ನು ಒದಗಿಸುತ್ತದೆ.

ವಿಟಮಿನ್ ಡಿ : ಇದು ಸೂರ್ಯನ ಬೆಳಕು, ಮೊಟ್ಟೆ ಮತ್ತು ಸಮುದ್ರಡ ಮೀನಿನಿಂದ ಸಿಗುತ್ತದೆ. ಈ ಆಹಾರಗಳು ಕೂದಲಿಗೆ ಒಳಗಿನಿಂದ ಪೋಷಣೆ ನೀಡುತ್ತದೆ.

ಬಿ ಜೀವಸತ್ವಗಳು: ಇವು ಧಾನ್ಯಗಳು, ದ್ವಿದಳ ಧಾನ್ಯಗಳು, ಹಸಿರು ಎಲೆಗಳ ತರಕಾರಿಗಳು, ಮೊಟ್ಟೆ, ಹಾಲು, ಮೀನು, ಮಾಂಸ, ಬಾಳೆಹಣ್ಣು, ಬೀಜಗಳು, ಕಡಲೆಕಾಯಿ ಮತ್ತು ಕೋಳಿಗಳಲ್ಲಿ ಕಂಡುಬರುತ್ತವೆ.

ಇದನ್ನೂ ಓದಿ : Weight Loss Tips: ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು ಗೊತ್ತೇ ?

ವಿಟಮಿನ್ ಸಿ: ಇದನ್ನು ಸಿಟ್ರಸ್ ಹಣ್ಣುಗಳು, ನೆಲ್ಲಿಕಾಯಿ, ಪೇರಳೆ, ಸ್ಟ್ರಾಬೆರಿ,  ಶಿಮ್ಲಾ ಮಿರ್ಚ್, ಟೊಮ್ಯಾಟೊ, ಕಿವಿ ಮತ್ತು ಬ್ರೊಕೊಲಿಯಿಂದ ಪಡೆಯಬಹುದು.

ಸತು: ಮೊಟ್ಟೆ, ಚಿಕನ್, ಡಾರ್ಕ್ ಚಾಕೊಲೇಟ್, ಕುಂಬಳಕಾಯಿ ಬೀಜಗಳು, ಕಲ್ಲಂಗಡಿ ಬೀಜಗಳು, ಎಳ್ಳು, ಕಡಲೆಕಾಯಿಗಳು ಮತ್ತು ಸೋಯಾ ಸತುವಿನ ಉತ್ತಮ ಮೂಲಗಳಾಗಿವೆ.

ಸಲ್ಫರ್: ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ, ಎಲೆಕೋಸು, ಬೀನ್ಸ್, ಕಾಳುಗಳು ಮತ್ತು ಬೀಜಗಳಿಂದ ಪಡೆಯಬಹುದಾಗಿದೆ.  

ವಿಟಮಿನ್ ಇ: ವಿಟಮಿನ್ ಇ ಸೂರ್ಯಕಾಂತಿ ಬೀಜಗಳು, ಮೊಟ್ಟೆಗಳು, ಸಸ್ಯಜನ್ಯ ಎಣ್ಣೆಗಳು ಮತ್ತು ಆವಕಾಡೊಗಳಲ್ಲಿ ಕಂಡುಬರುತ್ತದೆ

ಇದನ್ನೂ ಓದಿ : ತೂಕ ಇಳಿಕೆಗೆ ಈ ಅದ್ಭುತ ಪರಿಹಾರ ಟ್ರೈ ಮಾಡಿ ನೋಡಿ!

ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಕೆಲವು ವಿಧಾನಗಳು ಇಲ್ಲಿವೆ:

- ಒಂದು ಪ್ಯಾನ್‌ನಲ್ಲಿ, ತೆಂಗಿನ ಎಣ್ಣೆ, ಕರಿಬೇವಿನ ಎಲೆಗಳು, ಮೆಂತ್ಯೆ ಬೀಜಗಳು, ಮತ್ತು ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ.

- ಈರುಳ್ಳಿ ಕಂದು ಬಣ್ಣಕ್ಕೆ ಬರುವವರೆಗೆ ಬಿಸಿ ಮಾಡಿ, ನಂತರ ಗ್ಯಾಸ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ

- ತಣ್ಣಗಾದ ನಂತರ, ತೆಂಗಿನ ಎಣ್ಣೆ ಜಾರ್‌ಗೆ ಅದರಲ್ಲಿರುವ ಎಣ್ಣೆಯನ್ನು ಸೋಸಿ.  

- ನಂತರ ಜಾರ್ ತುಂಬುವವರೆಗೆ ಕ್ಯಾಸ್ಟರ್ ಆಯಿಲ್ ಸೇರಿಸಿ, ಮುಚ್ಚಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ 

ಎರಡನೇ ವಿಧಾನ : 
 2 ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದನ್ನು ಒಂದು ಬೌಲ್‌ನಲ್ಲಿ 3 ಚಮಚ ಎಣ್ಣೆಯೊಂದಿಗೆ ಮಿಶ್ರಣ ಮಾಡಿ.

-  ಹೇರ್ ಪ್ಯಾಕ್ ರಚಿಸಲು ಚೆನ್ನಾಗಿ ಮಿಶ್ರಣ ಮಾಡಿ

- ನಿಮ್ಮ ಕೂದಲನ್ನು ತೊಳೆಯುವ ಕನಿಷ್ಠ ಒಂದು ಗಂಟೆ ಮೊದಲು ನಿಮ್ಮ ಕೂದಲಿಗೆ ಹೇರ್ ಪ್ಯಾಕ್ ಅನ್ನು ಹಚ್ಚಿ. 

- ಒಂದು ಗಂಟೆಯ ನಂತರ, ಎಂದಿನಂತೆ ನಿಮ್ಮ ಕೂದಲನ್ನು ತೊಳೆಯಿರಿ.   

ಈ ಎರಡು ವಿಧಾನಗಳನ್ನು ಅನುಸರಿಸುತ್ತಾ ಬಂದರೆ ಕ್ರಮೇಣ ಕೂದಲು ಉದುರುವುದು ಕಡಿಮೆಯಾಗುತ್ತದೆ. 

(ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News