ಡಯಟ್ ಪಥ್ಯ ಏನೂ ಬೇಡ ! ಬೆಳಗಿನ ಉಪಹಾರಕ್ಕೆ ಇದನ್ನು ಸೇವಿಸಿ ತೂಕ ಇಳಿಸಿಕೊಳ್ಳಿ

ಬೆಳಗಿನ ಉಪಾಹಾರದಲ್ಲಿ ದೇಹವನ್ನು ಪೋಷಿಸುವ ಕೆಲವು ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆಯಾಗುತ್ತದೆ. ಬೊಜ್ಜು  ಕಡಿಮೆಯಾಗುತ್ತದೆ. 

Written by - Ranjitha R K | Last Updated : Oct 30, 2023, 11:09 AM IST
  • ಜನರು ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ.
  • ಜಿಮ್‌ನಲ್ಲಿ ಹಲವಾರು ಗಂಟೆಗಳ ಕಾಲ ಬೆವರಿಳಿಸುತ್ತಾರೆ.
  • ಉಪಾಹಾರದಲ್ಲಿ ಈ ಆಹಾರಗಳನ್ನು ಸೇವಿಸಿ
ಡಯಟ್ ಪಥ್ಯ ಏನೂ ಬೇಡ ! ಬೆಳಗಿನ ಉಪಹಾರಕ್ಕೆ ಇದನ್ನು ಸೇವಿಸಿ ತೂಕ ಇಳಿಸಿಕೊಳ್ಳಿ  title=

ಬೆಂಗಳೂರು : ಜನರು ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಾರೆ. ಜಿಮ್‌ನಲ್ಲಿ ಹಲವಾರು ಗಂಟೆಗಳ ಕಾಲ ಬೆವರಿಳಿಸುತ್ತಾರೆ. ಕೆಲವರು ಕಟ್ಟುನಿಟ್ಟಾದ ಡಯೆಟ್ ಫಾಲೋ ಮಾಡುತ್ತಾರೆ. ಆದರೆ, ಅನೇಕರಿಗೆ ಇವುಗಳಿಂದ ಯಾವುದೇ ರೀತಿಯ ಪರಿಹಾರ ಸಿಗುವುದಿಲ್ಲ. ತೂಕವನ್ನು ಕಳೆದುಕೊಳ್ಳುವ ಬಗ್ಗೆ ಕೆಲವು ತಪ್ಪು ಕಲ್ಪನೆಗಳೂ ಇವೆ. ತೂಕ ಇಳಿಸಿಕೊಳ್ಳಲು ಬೆಳಗಿನ ತಿಂಡಿಯನ್ನು ಬಿಡುವ ಅಭ್ಯಾಸವೂ ಕೆಲವರಲ್ಲಿದೆ. ಆದರೆ ಇದು ತಪ್ಪು ಅಭ್ಯಾಸ. ಇದರಿಂದ ತೂಕ ಇಳಿಯುವ ಬದಲು ತೂಕ ಹೆಚ್ಚಾಗಬಹುದು. ಮತ್ತು ಇದು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 

ಬೆಳಗಿನ ಉಪಾಹಾರದಲ್ಲಿ ದೇಹವನ್ನು ಪೋಷಿಸುವ ಕೆಲವು ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆಯಾಗುತ್ತದೆ. ಬೊಜ್ಜು  ಕಡಿಮೆಯಾಗುತ್ತದೆ. ದೇಹಕ್ಕೆ ಹೆಚ್ಚುವರಿ ಪೋಷಕಾಂಶಗಳನ್ನು ಒದಗಿಸುವ ಮೂಲಕ ತೂಕ ಇಳಿಯಲು ಸಹಾಯ ಮಾಡುವ ಅತ್ಯುತ್ತಮ ಉಪಹಾರಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ : ಬ್ಯೂಟಿ ಸ್ಲೀಪ್ ಮಾಡುವುದರಿಂದ ನಿಮಗಾಗುವ ಪ್ರಯೋಜನಗಳೇನು ಗೊತ್ತೇ?

ತೂಕ ನಷ್ಟಕ್ಕೆ ಬೆಳಗಿನ ಐದು ಉಪಾಹಾರ : 
ಅವಲಕ್ಕಿ : 

ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರಕ್ಕೆ  ಅವಲಕ್ಕಿ ಸೇವಿಸಬಹುದು. ಇದು ತಿನ್ನಲು ತುಂಬಾ ಹಗುರ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರ. ಇದರ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸಲು, ಹೆಚ್ಚು ತರಕಾರಿಗಳನ್ನು ಸೇರಿಸಬಹುದು. ಅಲ್ಲದೆ, ಅವಲಕ್ಕಿಯನ್ನು ಹಾಲಿನಲ್ಲಿ ನೆನೆಸಿಟ್ಟು ತಿನ್ನಬಹುದು. ಈ ರೀತಿಯಲ್ಲಿ ಅವಲಕ್ಕಿ ಸೇವಿಸುವುದರಿಂದ  ದೇಹದ ತೂಕ ಕಡಿಮೆಯಾಗುತ್ತದೆ. 

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೇಳೆ ತೂಕ ನಷ್ಟಕ್ಕೆ ಉತ್ತಮ ಉಪಹಾರ ಆಯ್ಕೆಯಾಗಿದೆ. ಇದರಲ್ಲಿ ಫೈಬರ್ ಮತ್ತು ಪ್ರೊಟೀನ್ ಹೇರಳವಾಗಿದ್ದು ತೂಕ ಇಳಿಸಲು ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆಯು ಹೆಚ್ಚು ಕಾಲದವರೆಗೆ ತುಂಬಿರುತ್ತದೆ. ಇದನ್ನು ಸೇವಿಸುವುದರಿಂದ ದಿನವಿಡೀ ಚೈತನ್ಯದಿಂದ ಇರುತ್ತೀರಿ. ಈ ಖಾದ್ಯವನ್ನು ತಯಾರಿಸುವಾಗ ತರಕಾರಿಗಳನ್ನು ಸೇರಿಸಿದರೆ, ಅದರ ಪೌಷ್ಟಿಕಾಂಶದ ಮೌಲ್ಯವು ಇನ್ನಷ್ಟು ಹೆಚ್ಚಾಗುತ್ತದೆ. 

ಇದನ್ನೂ ಓದಿ : ಕೆಲವೇ ದಿನಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಿ, ತೂಕ ಇಳಿಸಿಕೊಳ್ಳಬೇಕೆ? ಈ ಅದ್ಭುತ ಪಾನೀಯ ಟ್ರೈಮಾಡಿ!

ಮೊಟ್ಟೆ  : 
ಪ್ರೋಟೀನ್ ಸಮೃದ್ಧವಾಗಿರುವ ಮೊಟ್ಟೆ ತೂಕ ಇಳಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರಕ್ಕಾಗಿ ಬೇಯಿಸಿದ ಮೊಟ್ಟೆ, ಮೊಟ್ಟೆ ಸ್ಯಾಂಡ್‌ವಿಚ್, ಆಮ್ಲೆಟ್ ಅಥವಾ ಬುರ್ಜಿಯನ್ನು ಸೇವಿಸಿ. ಬೆಳಗಿನ ಉಪಾಹಾರಕ್ಕೆ ಮೊಟ್ಟೆಯನ್ನು ತಿನ್ನುವುದರಿಂದ ತೂಕ ಮತ್ತು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. 

ಓಟ್ಸ್ :  
ಓಟ್ಸ್ ಫೈಬರ್ ನಲ್ಲಿ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲದೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆಯು ಹೆಚ್ಚು ಕಾಲ ತುಂಬಿರುತ್ತದೆ ಮತ್ತು ಹಸಿವನ್ನು ತಡೆಯುತ್ತದೆ. ಓಟ್ಸ್ ಅನ್ನು ಕಡಿಮೆ ಕೊಬ್ಬಿನ ಹಾಲು, ಕೆಲವು ಹಣ್ಣುಗಳು ಮತ್ತು ಡ್ರೈ ಫ್ರುಟ್ಸ್ ನೊಂದಿಗೆ ತಿನ್ನಬಹುದು. ಇದಲ್ಲದೆ, ನ ಒಟ್ಸ್ ನಲ್ಲಿ ತರಕಾರಿಗಳು ಮತ್ತು ಮಸಾಲೆಗಳನ್ನು ಕೂಡಾ ಸೇರಿಸಬಹುದು.  

ಇದನ್ನೂ ಓದಿ : ನೋಡಲು ಗಾತ್ರದಲ್ಲಿ ಚಿಕ್ಕದಾದರೂ ಆರೋಗ್ಯದ ಪಾಲಿಗೆ ವರದಾನ ಈ ಚಿಕ್ಕ ಬೀಜಗಳು!

ಇಡ್ಲಿ :
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ನಮ್ಮ ಸಾಂಪ್ರದಾಯಿಕ ಆಹಾರ ಇಡ್ಲಿ ಅತ್ಯುತ್ತಮ ಆಯ್ಕೆಯಾಗಿದೆ . ಇದು ಜೀವಸತ್ವಗಳು, ಫೈಬರ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ತಿನ್ನಲು ತುಂಬಾ ಹಗುರ ಮತ್ತು ಜೀರ್ಣಿಸಿಕೊಳ್ಳಲು ಸುಲಭ. ಕ್ಯಾರೆಟ್, ಬೆಲ್ ಪೆಪರ್, ಈರುಳ್ಳಿ ಮತ್ತು ಟೊಮೆಟೊಗಳಂತಹ ತರಕಾರಿಗಳನ್ನು ಇಡ್ಲಿಗೆ ಸೇರಿಸಿದರೆ ಅದು ಇನ್ನಷ್ಟು ಆರೋಗ್ಯಕರವಾಗಿರುತ್ತದೆ.

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News