ಅಡಿಯಿಂದ ಮುಡಿಯವರೆಗೆ ಪ್ರಯೋಜನಕಾರಿ ಪಪ್ಪಾಯದ ಬೀಜ ! ಬಳಸುವ ವಿಧಾನ ಹೀಗಿರಬೇಕು

ಪಪ್ಪಾಯ ಬೀಜಗಳನ್ನು ಸೇವಿಸುವುದರಿಂದ ಕೆಲವು ಅದ್ಭುತ ಪ್ರಯೋಜನಗಳಾಗುತ್ತವೆ. ಆದರೆ ಪಪ್ಪಾಯಿ ಬೀಜಗಳನ್ನು ನೇರವಾಗಿ ಸೇವಿಸುವಂತಿಲ್ಲ.  

Written by - Ranjitha R K | Last Updated : Aug 2, 2023, 12:52 PM IST
  • ಹಣ್ಣಿನ ಪ್ರಯೋಜನಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ.
  • ಹಣ್ಣುಗಳ ಬೀಜಗಳು ಆರೋಗ್ಯಕ್ಕೆ ರಾಮಬಾಣವಾಗಿಯೂ ಕಾರ್ಯನಿರ್ವಹಿಸುತ್ತವೆ
  • ಪಪ್ಪಾಯ ಮಾತ್ರವಲ್ಲ ಇದರ ಬೀಜಗಳು ಕೂಡಾ ಆರೋಗ್ಯಕ್ಕೆ ವರದಾನ
ಅಡಿಯಿಂದ ಮುಡಿಯವರೆಗೆ  ಪ್ರಯೋಜನಕಾರಿ ಪಪ್ಪಾಯದ ಬೀಜ ! ಬಳಸುವ ವಿಧಾನ ಹೀಗಿರಬೇಕು  title=

ಬೆಂಗಳೂರು : ಹಣ್ಣಿನ ಪ್ರಯೋಜನಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ.  ಅನೇಕ ಹಣ್ಣುಗಳ ಬೀಜಗಳು ಆರೋಗ್ಯಕ್ಕೆ ರಾಮಬಾಣವಾಗಿಯೂ ಕಾರ್ಯನಿರ್ವಹಿಸುತ್ತವೆ. ಇವುಗಳಲ್ಲಿ ಒಂದು ಪಪ್ಪಾಯಿ. ಈ ಹಣ್ಣು ಮಾತ್ರವಲ್ಲ ಇದರ ಬೀಜಗಳನ್ನು ಆರೋಗ್ಯಕ್ಕೆ ವರದಾನವೇ ಸರಿ. ಹೆಚ್ಚಿನವರು  ಪಪ್ಪಾಯ ಬೀಜಗಳನ್ನು ನಿಷ್ಪ್ರಯೋಜಕವೆಂದು ಎಸೆಯುತ್ತಾರೆ. ಆದರೆ  ಅದು ಅವರು ಮಾಡುವ ಅತಿ ದೊಡ್ಡ ತಪ್ಪು. 

ಪಪ್ಪಾಯ ಹಣ್ಣಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ.  ಇದು ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪಪ್ಪಾಯಿ ಬೀಜಗಳನ್ನು ಸೇವಿಸುವುದರಿಂದ ದೇಹದಿಂದ ವಿಷಕಾರಿ ಅಂಶವನ್ನು ಹೊರಹಾಕುವುದು ಸಾಧ್ಯವಾಗುತ್ತದೆ. ಪಪ್ಪಾಯ ಬೀಜಗಳನ್ನು ಸೇವಿಸುವುದರಿಂದ ಕೆಲವು ಅದ್ಭುತ ಪ್ರಯೋಜನಗಳಾಗುತ್ತವೆ. 

ಇದನ್ನೂ ಓದಿ : ರುಚಿಗೂ ಆರೋಗ್ಯಕ್ಕೂ ಬೆಸ್ಟ್‌ ಅಪರೂಪದ ಹಕ್ಕರಕಿ ಸೊಪ್ಪು..ಉತ್ತರ ಕರ್ನಾಟಕ ಕಡೆ ಹೋದ್ರ ತಿನ್ನೋದ್ನ ಮರಿಬ್ಯಾಡ್ರಿ

ಪಪ್ಪಾಯಿ ಬೀಜಗಳನ್ನು ನೇರವಾಗಿ ಸೇವಿಸುವಂತಿಲ್ಲ. ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಸೇವಿಸಬೇಕು. ಹೀಗೆ ತಯಾರಿಸಿಕೊಂಡ ಪುಡಿಯನ್ನು ವಿವಿಧ ರೀತಿಯಲ್ಲಿ ಬಳಸಬಹುದು. 

ಕೂದಲ ಬೆಳವಣಿಗೆಗೆ:
ಪಪ್ಪಾಯಿ ಬೀಜಗಳು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ. ಇದು ವಿಟಮಿನ್ ಎ ಅನ್ನು ಹೊಂದಿರುತ್ತದೆ. ಕೂದಲಿನ ಬೆಳವಣಿಗೆಗೆ ವಿಟಮಿನ್ ಎ ಅಗತ್ಯ. ಹಾಗಾಗಿ ಕೂದಲ ಬೆಳವಣಿಗೆಯಲ್ಲಿ ಇಒದು ಪ್ರಮುಖ ಪಾತ್ರ ವಹಿಸುತ್ತದೆ. 

ಕೂದಲಿನ  ಆರೋಗ್ಯಕ್ಕೆ ಬಳಕೆ ಹೀಗಿರಲಿ :
ಪಪ್ಪಾಯಿ ಬೀಜದ ಪುಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಹೇರ್ ಮಾಸ್ಕ್ ತಯಾರಿಸಿ. ಇದು ನಿಮ್ಮ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ :
ಪಪ್ಪಾಯಿ ಬೀಜಗಳು ತೂಕ ಇಳಿಸಲು ತುಂಬಾ ಸಹಕಾರಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಇದರಲ್ಲಿ ಕಂಡುಬರುವ ಕಿಣ್ವಗಳು ತೂಕವನ್ನು ಕಡಿಮೆ ಮಾಡುವುದಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : ತ್ವಚೆ ಮತ್ತು ಕೇಶ ಸೌಂದರ್ಯಕ್ಕಾಗಿ ದುಬಾರಿ ಪ್ರಾಡಕ್ಟ್ ಬದಲು ಕಾಫಿಯನ್ನು ಹೀಗೆ ಬಳಸಿ

ಯಕೃತ್ತಿನ ಆರೋಗ್ಯಕ್ಕೆ : 
ಪಪ್ಪಾಯಿ ಬೀಜಗಳು ಯಕೃತ್ತಿಗೆ ತುಂಬಾ ಪ್ರಯೋಜನಕಾರಿ. ಯಕೃತ್ತಿನ ಸಿರೋಸಿಸ್ನಲ್ಲಿ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಬೀಜಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

ಜೀರ್ಣಕ್ರಿಯೆಗಾಗಿ : 
ಪಪ್ಪಾಯಿ ಬೀಜಗಳು ಜೀರ್ಣಕ್ರಿಯೆಗೆ ಪ್ರಯೋಜನಕಾರಿ. ಜೀರ್ಣಕಾರಿ ಕಿಣ್ವಗಳಲ್ಲಿ ಇದು ಸಮೃದ್ಧವಾಗಿದೆ. ಇದು ಪ್ರೋಟೀನ್‌ಗಳನ್ನು ಒಡೆಯಲು ಸಹಾಯ ಮಾಡುವ ಮೂಲಕ ಅದರ ನೈಸರ್ಗಿಕ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. 

ಕೀಲು ನೋವಿನಲ್ಲಿ ಪರಿಹಾರ :
ಪಪ್ಪಾಯಿ ಬೀಜಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾಪೈನ್ ಮತ್ತು ಚೈಮೊಪಪೈನ್ ಕಿಣ್ವಗಳು ಕೀಲು ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ...?
 
ಪಪ್ಪಾಯಿ ಬೀಜಗಳನ್ನು ಹೀಗೆಯೂ ಸೇವಿಸಬಹುದು:
- ಪಪ್ಪಾಯಿ ಬೀಜಗಳನ್ನು ಸೇವಿಸಲು ಉತ್ತಮ ಮಾರ್ಗವೆಂದರೆ ಅವುಗಳನ್ನು ಪಪ್ಪಾಯಿಯೊಂದಿಗೆ ತಿನ್ನುವುದು.
- ಬೀಜಗಳನ್ನು ಪುಡಿಮಾಡಿ ಮತ್ತು ಸಲಾಡ್‌ಗಳು ಅಥವಾ ಸೂಪ್‌ಗಳಲ್ಲಿ ಬಳಸಿ.
- ದಿನಕ್ಕೆ 5 ರಿಂದ 8 ಗ್ರಾಂ ಬೀಜಗಳನ್ನು ಮಾತ್ರ ಸೇವಿಸಿ.
- ನಿಂಬೆ ರಸ ಅಥವಾ ಸಲಾಡ್ ನಲ್ಲಿ ಪಪ್ಪಾಯಿ ಬೀಜದ ಪುಡಿಯನ್ನು  ಬೆರೆಸಿ ಸೇವಿಸಬಹುದು. 

( ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News