ಇಂದು ನಾವು ನಿಮಗಾಗಿ ಹೆಸರು ಕಾಳು ಪ್ರಯೋಜನಗಳನ್ನು ತಂದಿದ್ದೇವೆ. ಹೌದು ಭಾರತೀಯ ಆಹಾರದಲ್ಲಿ ಹೆಸರು ಕಾಳನ್ನ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಂದಹಾಗೆ, ಎಲ್ಲಾ ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಮತ್ತು ಆರೋಗ್ಯದ ಸಂಪತ್ತಿನಿಂದ ಸಮೃದ್ಧವಾಗಿವೆ. ಆದರೆ ಹೆಸರು ಕಾಳು ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರಲ್ಲಿ ವಿಟಮಿನ್ 'ಎ', 'ಬಿ', 'ಸಿ' ಮತ್ತು 'ಇ' ಕಂಡು ಬರುತ್ತದೆ.
ಆಹಾರ ತಜ್ಞೆ ಡಾ.ರಂಜನಾ ಸಿಂಗ್ ಅವರ ಪ್ರಕಾರ, ಮೊಳಕೆಯೊಡೆದ ಹೆಸರು ಕಾಳು(Mung Bean)ಗಳನ್ನ ಬೆಳಿಗ್ಗೆ ತಿಂದರೆ, ಅದರಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್, ಅಮೈನೋ ಆಸಿಡ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿದ್ದು, ದೇಹವನ್ನು ಹಲವು ಗಂಭೀರ ರೋಗಗಳಿಂದ ರಕ್ಷಿಸಲು ಸಹಾಯಕವಾಗಿದೆ.
ಇದನ್ನೂ ಓದಿ : Oily Skin Care: ಆಯಿಲಿ ಸ್ಕಿನ್ ಗೆ ಇವುಗಳನ್ನು ಹಚ್ಚಿದರೆ ತಕ್ಷಣವೇ ಸಿಗಲಿದೆ ಪರಿಹಾರ
ಹೆಸರು ಕಾಲಿನಲ್ಲಿ ಪೋಷಕಾಂಶಗಳು ಕಂಡುಬರುತ್ತವೆ
ಹೆಸರು ಕಾಲಿನಲ್ಲಿ ಕಾರ್ಬೋಹೈಡ್ರೇಟ್, ಫೈಬರ್(Fiber), ವಿಟಮಿನ್ ಬಿ 9, ಮೆಗ್ನೀಸಿಯಮ್, ಮ್ಯಾಂಗನೀಸ್, ವಿಟಮಿನ್ ಬಿ 4, ರಂಜಕ, ಪೊಟ್ಯಾಸಿಯಮ್, ಸತು, ಕಬ್ಬಿಣ, ವಿಟಮಿನ್ ಬಿ 2, ಬಿ 3, ಬಿ 5, ಬಿ 6 ಕಂಡುಬರುತ್ತವೆ. ಇದನ್ನು ಪ್ರೋಟೀನ್ ಕಂಡು ಬರುತ್ತದೆ.
ಹೆಸರು ಕಾಳು ಪ್ರಯೋಜನಗಳು
ತೂಕ ಇಳಿಸು ಹೆಸರು ಕಾಳು
ಹೆಸರು ಕಾಳು ಸೇವನೆಯಿಂದ ತೂಕ ಕೂಡ(Weight Loss) ಕಡಿಮೆಯಾಗುತ್ತದೆ. ಇದರಲ್ಲಿ ಹೆಚ್ಚಿನ ಫೈಬರ್ ಮತ್ತು ಪ್ರೋಟೀನ್ ಕಂಡು ಬರುತ್ತವೆ. ಇದರ ಸೇವನೆಯಿಂದಾಗಿ, ಹಸಿವಿನ ಹಾರ್ಮೋನುಗಳು ಅಷ್ಟು ಸಕ್ರಿಯವಾಗುವುದಿಲ್ಲ ಮತ್ತು ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ.
ಇದನ್ನೂ ಓದಿ : Super Food For Diabetics: ಡಯಾಬಿಟಿಸ್ ರೋಗಿಗಳು ಶುಗರ್ ನಿಯಂತ್ರಣದಲ್ಲಿಡಲು ಈ 4 ಆಹಾರಗಳನ್ನು ಸೇವಿಸಲೇಬೇಕು
ರಕ್ತದೊತ್ತಡವನ್ನು ಸರಿಯಾಗಿ ಇರಿಸಿಕೊಳ್ಳಲು
ಹೆಸರು ಕಾಳು ರಕ್ತದೊತ್ತಡ(BP)ವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ, ಮೆಗ್ನೀಸಿಯಮ್ ಮತ್ತು ಫೈಬರ್ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಉಪಯುಕ್ತವಾಗಿದೆ.
ಹೊಟ್ಟೆಗೆ ಪ್ರಯೋಜನಕಾರಿ ಹೆಸರು ಕಾಳು
ಹೆಸರು ಕಾಲಿನಲ್ಲಿರುವ ಫೈಬರ್ ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇದರಲ್ಲಿರುವ ಕಾರ್ಬ್ ಇತರ ವಸ್ತುಗಳಿಗಿಂತ ಹೆಚ್ಚು ಆರೋಗ್ಯ(Healthy)ಕರವಾಗಿದ್ದು, ಇದು ಹೊಟ್ಟೆಯನ್ನು ನಿರ್ವಿಷಗೊಳಿಸಲು ಮತ್ತು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Diabetes Patients Foods : ಮಧುಮೇಹ ರೋಗಿಗಳು ಈ 4 ಆಹಾರಗಳನ್ನ ತಪ್ಪದೆ ಸೇವಿಸಿ : ನಿಯಂತ್ರಣದಲ್ಲಿರುತ್ತದೆ ರೋಗ
ಹೆಸರು ಕಾಳು ಈ ರೋಗಗಳಿಂದ ರಕ್ಷಿಸುತ್ತದೆ
ವಿವಿಧ ರೀತಿಯ ಉತ್ಕರ್ಷಣ ನಿರೋಧಕ ಅಂಶಗಳು ಹೆಸರು ಕಾಳಿನಲ್ಲಿ ಕಂಡುಬರುತ್ತವೆ, ಇದು ದೇಹವನ್ನು ಫ್ರೀ ರಾಡಿಕಲ್‌ಗಳಿಂದ ರಕ್ಷಿಸುತ್ತದೆ. ಅತಿಯಾದ ಫ್ರೀ ರಾಡಿಕಲ್ ಗಳು ದೇಹದಲ್ಲಿ ಕ್ಯಾನ್ಸರ್, ಉರಿಯೂತ, ಹೃದ್ರೋಗ ಇತ್ಯಾದಿ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಹೃದಯವನ್ನು ಚೆನ್ನಾಗಿ ಇರಿಸುತ್ತದೆ
ಸಂಶೋಧನೆಯ ಪ್ರಕಾರ, ಇದು ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯಕಾವಾಗಿದೆ, ಈ ಕಾರಣದಿಂದಾಗಿ ಹೃದಯದ ತೊಂದರೆಗಳನ್ನು ದೂರವಿರಿಸಲು ಇದನ್ನು ಸೇವಿಸಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ