Benefits Of Milk : ದಿನದ ಈ ಸಮಯದಲ್ಲಿ ಹಾಲು ಕುಡಿದರೆ ಆರೋಗ್ಯಕ್ಕಿದೆ ಈ 5 ಅದ್ಭುತ ಲಾಭಗಳು!

ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತಾ? ಹೌದು, ಹಾಲನ್ನು (Right Time To Drink Milk) ಸರಿಯಾದ ಸಮಯದಲ್ಲಿ ಸೇವಿಸಿದರೆ, ಅದರ ಪ್ರಯೋಜನಗಳು ಹಲವಾರು ಪಟ್ಟು ಹೆಚ್ಚಾಗುತ್ತವೆ.

Written by - Channabasava A Kashinakunti | Last Updated : Dec 18, 2021, 03:27 PM IST
  • ಆರೋಗ್ಯಕ್ಕೆ ಪ್ರಯೋಜನಕಾರಿ ಹಾಲು
  • 1 ಲೋಟ ಹಾಲನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರ
  • ಬೆಳಗಿನ ಉಪಾಹಾರದಲ್ಲಿ ಹಾಲಿನ ಅದ್ಭುತ ಪ್ರಯೋಜನಗಳು
Benefits Of Milk : ದಿನದ ಈ ಸಮಯದಲ್ಲಿ ಹಾಲು ಕುಡಿದರೆ ಆರೋಗ್ಯಕ್ಕಿದೆ ಈ 5 ಅದ್ಭುತ ಲಾಭಗಳು! title=

ಹಾಲು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ಒಂದು ಲೋಟ ಹಾಲನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಆದರೆ ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಗೊತ್ತಾ? ಹೌದು, ಹಾಲನ್ನು (Right Time To Drink Milk) ಸರಿಯಾದ ಸಮಯದಲ್ಲಿ ಸೇವಿಸಿದರೆ, ಅದರ ಪ್ರಯೋಜನಗಳು ಹಲವಾರು ಪಟ್ಟು ಹೆಚ್ಚಾಗುತ್ತವೆ.

ಹಾಲಿನಲ್ಲಿ ಕಂಡುಬರುವ ಪೋಷಕಾಂಶಗಳು

ಹಾಲಿನಲ್ಲಿ (Milk)ವಿಟಮಿನ್ ಎ, ವಿಟಮಿನ್ ಬಿ ಮತ್ತು ಡಿ ಜೊತೆಗೆ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಲ್ಯಾಕ್ಟಿಕ್ ಆಮ್ಲವು ಹಾಲಿನಲ್ಲಿ ಕಂಡುಬರುತ್ತದೆ, ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡಲು ಸಹಾಯ ಮಾಡುತ್ತದೆ. ಪ್ರತಿನಿತ್ಯ ಹಾಲಿನ ಸೇವನೆಯಿಂದ ನಿದ್ರೆಯನ್ನು ಸುಧಾರಿಸಬಹುದು.

ಇದನ್ನೂ ಓದಿ :  Health Tips: ದಾಳಿಂಬೆ ಸಿಪ್ಪೆಯಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆ

ಹಾಲಿನ ಸೇವನೆ ಆರೋಗ್ಯಕ್ಕೆ ಏಕೆ ವಿಶೇಷ?

ಆಹಾರ ತಜ್ಞ ಡಾ.ರಂಜನಾ ಸಿಂಗ್ ಮಾತನಾಡಿ, ನಿತ್ಯವೂ ಹಾಲು ಸೇವಿಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು. ಇದು ಬೊಜ್ಜು ನಿಯಂತ್ರಣಕ್ಕೆ(cholesterol control) ಸಹಾಯ ಮಾಡುತ್ತದೆ. ಅಲ್ಲದೆ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಅಷ್ಟೇ ಅಲ್ಲ, ಹಾಲು ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಬೆಳಗಿನ ಉಪಾಹಾರದಲ್ಲಿ ಹಾಲು ಕುಡಿಯುವುದರಿಂದ ಆಗುವ ಅದ್ಭುತ ಪ್ರಯೋಜನಗಳು

1. ನೀವು ಸ್ಥೂಲಕಾಯತೆಯಿಂದ ತೊಂದರೆಗೊಳಗಾಗಿದ್ದರೆ, ಹಾಲನ್ನು ಸೇವಿಸಿ. ಪ್ರೋಟೀನ್ ಸಮೃದ್ಧವಾಗಿರುವ ಹಾಲು ಹೆಚ್ಚಿನ ಪ್ರಮಾಣದಲ್ಲಿ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ಬೆಳಗ್ಗೆ ಹಾಲು ಸೇವಿಸಿದರೆ ರಾತ್ರಿ ಉತ್ತಮ ನಿದ್ದೆ ಬರುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುವುದಿಲ್ಲ.
2. ಹಾಲಿನಲ್ಲಿರುವ ಪ್ರೋಟೀನ್ ರಕ್ತದಲ್ಲಿ ಟ್ರಿಪ್ಟೊಫಾನ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಲಿನಲ್ಲಿರುವ ಗುಣಗಳು ಖಿನ್ನತೆಯ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಹಾಲು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
3. ಮೂಳೆಗಳ ರಚನೆಗೆ ಕ್ಯಾಲ್ಸಿಯಂ ಅಗತ್ಯವೆಂದು ಪರಿಗಣಿಸಲಾಗಿದೆ. ಬೆಳಗಿನ ಉಪಾಹಾರದ ಸಮಯದಲ್ಲಿ ಹಾಲು ಸೇವಿಸುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.

ಇದನ್ನೂ ಓದಿ :  ಗಡ್ಡ-ಮೀಸೆಯ ಕೂದಲು ಬೆಳ್ಳಗಾಗುತ್ತಾ?: ಈ 5 ಮನೆಮದ್ದುಗಳಿಂದ ಕಪ್ಪಾಗಿಸಬಹುದು

ಹಾಲು ಕುಡಿಯಲು ಸರಿಯಾದ ಸಮಯ

ಬೆಳಗಿನ ಉಪಾಹಾರದಲ್ಲಿ(Breakfast) ಹಾಲನ್ನು ಸೇವಿಸುವುದರಿಂದ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ನಿಮಗೆ ನಿದ್ರಾಹೀನತೆಯ ಸಮಸ್ಯೆ ಇದ್ದರೆ, ಬೆಳಗಿನ ಉಪಾಹಾರದ ಸಮಯದಲ್ಲಿ ಹಾಲನ್ನು ಸೇವಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News