ಈ ಮುನ್ನೆಚ್ಚರಿಕೆ ಇರಲಿ..! ಮಳೆಗಾಲದ ವೈರಲ್ ಫ್ಲೂ ನಿಂದ ಬಚಾವ್ ಆಗಿ

ಮಳೆಗಾಲ ಬಂದಿದೆ. ಬಿರಬಿರನೇ ಮಳೆ ಹೊಡೆಯುತ್ತಿದೆ. ಹನಿ ಕಡಿಯದಂತೆ ಧೋ ಎನ್ನುತ್ತಾ ಮಳೆ ಸುರಿಯುತ್ತಿದೆ. ಹವಾಮಾನ ಏನೋ ಚೆನ್ನಾಗಿದೆ. ಆದರೆ, ಇದೇ ಮಳೆ ನಿಮಗೆ ರೋಗಗಳನ್ನೂ ತನ್ನೊಂದಿಗೆ ತರುತ್ತದೆ.

Written by - Ranjitha R K | Last Updated : Jun 18, 2021, 02:04 PM IST
  • ಮಳೆಗಾಲ ಬಂದಿದೆ, ಧೋ ಎಂದು ಮಳೆ ಸುರಿಯುತ್ತಿದೆ.
  • ಮಳೆಗಾಲ ರೋಗಗಳೊಂದಿಗೆ ಬರುತ್ತದೆ. ಜ್ವರ, ಡೆಂಗ್ಯೂ, ಮಲೇರಿಯಾ ಸಾಮಾನ್ಯ
  • ಮಳೆಗಾಲದ ಜ್ವರದಿಂದ ಪಾರಾಗಲು ಒಂದಷ್ಟು ಟಿಪ್ಸ್ ಇದೆ
ಈ ಮುನ್ನೆಚ್ಚರಿಕೆ ಇರಲಿ..! ಮಳೆಗಾಲದ ವೈರಲ್ ಫ್ಲೂ ನಿಂದ ಬಚಾವ್ ಆಗಿ title=
ಮಳೆಗಾಲದ ಜ್ವರದಿಂದ ಪಾರಾಗಲು ಒಂದಷ್ಟು ಟಿಪ್ಸ್ ಇದೆ (file photo zee news)

ನವದೆಹಲಿ :  ಮಳೆಗಾಲ ಬಂದಿದೆ. ಬಿರಬಿರನೇ ಮಳೆ ಹೊಡೆಯುತ್ತಿದೆ. ಹನಿ ಕಡಿಯದಂತೆ ಧೋ ಎನ್ನುತ್ತಾ ಮಳೆ ಸುರಿಯುತ್ತಿದೆ. ಹವಾಮಾನ ಏನೋ ಚೆನ್ನಾಗಿದೆ. ಆದರೆ, ಇದೇ ಮಳೆ ನಿಮಗೆ ರೋಗಗಳನ್ನೂ ತನ್ನೊಂದಿಗೆ ತರುತ್ತದೆ. ಈಗಷ್ಟೇ ಕರೋನಾದ (Coronavirus) ಮಹಾ ಮಾರಕ ಹೊಡೆತದಿಂದ ಹೊರಬರುತ್ತಿದ್ದೇವೆ. ಕರೋನಾ ಕಡಿಮೆಯಾಗಿದೆ. ಸಂಪೂರ್ಣವಾಗಿ ನಿರ್ನಾಮವಾಗಿಲ್ಲ. ಹೀಗಿರುವಾಗಲೇ ಮಳೆಗಾಲದ (rainy season) ಎಂಟ್ರಿಯಾಗಿದೆ. ಇದರೊಂದಿಗೆ ಮಳೆಗಾಲದ ರೋಗಗಳೂ ಕೂಡಾ ಎಂಟ್ರಿಯಾಗಲಿವೆ. 

ಮಳೆಗಾಲದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ರೋಗ ಜ್ವರ (Fever) ಅಥವಾ ಫ್ಲೂ, ಕೆಮ್ಮು. ಕರೋನಾ ಕಾಲದಲ್ಲಿ (Coronavirus) ಸ್ವಲ್ಪ ಮೈ ಬಿಸಿಯಾದರೂ ಟೆನ್ಶನ್ ಶುರುವಾಗುತ್ತದೆ. ಹೀಗಿರುವಾಗ ಫ್ಲೂ (flu) ಬಂದು ಬಿಟ್ಟರೆ ಇನ್ನಷ್ಟು ಟೆನ್ಶನ್ ಆಗಿ ಬಿಡುತ್ತೇವೆ. ಫ್ಲೂ ಖಂಡಿತಾ ಕರೋನಾ ಅಲ್ಲ. ಆದರೆ, ಕರೋನಾದ ಒಂದು ಲಕ್ಷಣ ಜ್ವರ.  ಹಾಗಾಗಿ, ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದರೂ ನೀವು ವೈರಲ್ ಜ್ವರ ಅಥವಾ ಫ್ಲೂ ನಿಂದ ಪಾರಾಗಬಹುದು. ಹಾಗಾದರೆ ಮಳೆಗಾಲದಲ್ಲಿ ಫ್ಲೂ (rainy flu) ಬಾರದಂತೆ ನೀವು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು.

ಇದನ್ನೂ ಓದಿ :  Garlic For Men At Night: ಪುರುಷರು ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ಸೇವಿಸಿದರೆ ಸಿಗುತ್ತೆ ಅದ್ಭುತ ಪ್ರಯೋಜನ

ಮಳೆಗಾಲದಲ್ಲಿ ಹೀಗೆ ಮಾಡಿ. 
1. ಊಟ ಮಾಡುವ ಮೊದಲು ಚೆನ್ನಾಗಿ ಕೈ ತೊಳೆಯಿರಿ.
2. ಹಳಸಿದ ಊಟ, ಫ್ರಿಜ್ ನಲ್ಲಿರುವ ಊಟ ಖಂಡಿತಾ ತಿನ್ನಬೇಡಿ.
3. ಸಾಕಷ್ಟು ಬಿಸಿ ಬಿಸಿ ಊಟ, ತಿಂಡಿ ತಿನ್ನಿ. ತಣ್ಣಗೆ ಅಥವಾ ತಂಗಳು ತಿನ್ನಲು ಹೋಗಬೇಡಿ
4. ಫ್ರೆಶ್ ತರಕಾರಿ (Vegetables) , ಹಣ್ಣು ಹಂಪಲು ಸಾಕಷ್ಟುತಿನ್ನಿ
5. ಮಳೆಯಲ್ಲಿ ನೆನೆಯಲು ಹೋಗಬೇಡಿ. ಸಾಧ್ಯವಾದಷ್ಟೂ ಕೊಡೆ, ಅಥವಾ ರೈನ್ ಕೋಟ್ ಜೊತೆಗೆ ಹೊರಗೆ ಹೋಗಿ

ಇದನ್ನೂ ಓದಿ :  Foods Avoid With Milk: ಹಾಲು ಕುಡಿಯುವ ಮುನ್ನ ಐದು ಆಹಾರಗಳನ್ನು ಖಂಡಿತಾ ಸೇವಿಸಬೇಡಿ

6. ತುಂಬಾ ಹೊತ್ತು ಒದ್ದೆ ಬಟ್ಟೆಯಲ್ಲಿರಬೇಡಿ. ಕಚೇರಿಗೆ ಹೋಗುವಾಗ ಒಂದು ಸೆಟ್ ಬಟ್ಟೆ ಇಟ್ಟುಕೊಳ್ಳುವ ಅಭ್ಯಾಸ ಇಟ್ಟುಕೊಳ್ಳಿ. ಒಂದು ವೇಳೆ ಮಳೆಯಿಂದ ಬಟ್ಟೆ ಒದ್ದೆಯಾದರೆ, ಕಚೇರಿಯಲ್ಲಿ ಗರಂ ಗರಂ ಬಟ್ಟೆ ಹಾಕಿಕೊಳ್ಳಬಹುದು.
7. ಹೊರಗಡೆಯ ಊಟ ಖಂಡಿತಾ ತಿನ್ನಬೇಡಿ. ಕಚೇರಿಗೆ ಹೋಗುವಾಗ ಟಿಫಿನ್ ಬಾಕ್ಸ್ (tiffin box) ಕೈಯಲ್ಲಿರಲಿ. ಟಿಫಿನ್ ಬಿಸಿ ಮಾಡಿ ತಿನ್ನಿ
7. ಯಾವುದಕ್ಕೂ ಜನಜಂಗುಳಿಯಿಂದ ದೂರ ಇರಿ.
8. ಮಾಸ್ಕ್ (Mask) ಸದಾಕಾಲ ಧರಿಸಿ. ಸಾನಿಟೈಸರ್ (Sanitiser) ಒಂದು ಕೈಯಲ್ಲಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News