High Cholesterol: ನಿಮಗೂ ಈ ಲಕ್ಷಣಗಳು ಗೋಚರಿಸುತ್ತವೆಯೇ? ಇದು ಅಧಿಕ ಕೊಲೆಸ್ಟ್ರಾಲ್ ಅಪಾಯವಿರಬಹುದು ಎಚ್ಚರ!

High Cholesterol: ಅಧಿಕ ಕೊಲೆಸ್ಟ್ರಾಲ್ ಮಧುಮೇಹ, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಈ ಹಿಂದೆ 40 ವರ್ಷದ ನಂತರ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದ್ದವು, ಆದರೆ ಈಗ ಯುವಕರು ಕೂಡ ಈ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ.

Written by - Yashaswini V | Last Updated : Mar 14, 2022, 01:03 PM IST
  • ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚುತ್ತಿದೆ
  • ಅಧಿಕ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಅಪಾಯಕಾರಿ
  • ಅಧಿಕ ಕೊಲೆಸ್ಟ್ರಾಲ್ ಮಧುಮೇಹ, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
High Cholesterol: ನಿಮಗೂ ಈ ಲಕ್ಷಣಗಳು ಗೋಚರಿಸುತ್ತವೆಯೇ? ಇದು ಅಧಿಕ ಕೊಲೆಸ್ಟ್ರಾಲ್ ಅಪಾಯವಿರಬಹುದು ಎಚ್ಚರ! title=
High Cholesterol Symptoms

High Cholesterol: ಪ್ರಸ್ತುತ, ತಮ್ಮ ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ, ಜನರು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಹೃದಯ ಸಮಸ್ಯೆಗಳು, ಮೆದುಳಿನ ಸಮಸ್ಯೆಗಳು, ಮಧುಮೇಹ, ಕೊಲೆಸ್ಟ್ರಾಲ್ನಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯುವಜನರು ತಮ್ಮ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಸಮಸ್ಯೆ ಬಗ್ಗೆ ಚಿಂತಿತರಾಗಿದ್ದಾರೆ. ಕೊಲೆಸ್ಟ್ರಾಲ್ ಹೆಚ್ಚಳವು ಆರೋಗ್ಯಕ್ಕೆ ಹಾನಿಕಾರಕ. ಇಂತಹ ಪರಿಸ್ಥಿತಿಯಲ್ಲಿ 25ರಿಂದ 35 ವರ್ಷದ ಯುವಕರಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಲಕ್ಷಣಗಳು ಕಂಡು ಬಂದರೆ ಎಚ್ಚರ ಅಗತ್ಯ. ಈ ಲೇಖನದಲ್ಲಿ  ಯೌವನದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ನ ಲಕ್ಷಣಗಳು ಯಾವುವು ಎಂದು ತಿಳಿಯೋಣ.

ಯೌವನದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಲಕ್ಷಣಗಳಿವು:
1. ಪಾದಗಳಲ್ಲಿ ಜುಮ್ಮೆನಿಸುವಿಕೆ:

ಯಾವುದೇ ಒಬ್ಬ ವ್ಯಕ್ತಿಗೆ ಯಾವುದೇ ಕೆಲಸ ಮಾಡುವಾಗ ಕೈ ಕಾಲುಗಳಲ್ಲಿ ಜುಮ್ಮೆನ್ನುವುದು ಅಥವಾ ಇರುವೆ ಕಚ್ಚಿದಂತೆ ಭಾಸವಾಗುತ್ತಿದ್ದರೆ, ಅದು ಕೊಲೆಸ್ಟ್ರಾಲ್ ಲಕ್ಷಣವಾಗಿರಬಹುದು (Cholesterol Symptoms). ಆಮ್ಲಜನಕಯುಕ್ತ ರಕ್ತವು ಅಂಗಗಳಿಗೆ ತಲುಪದಿದ್ದಾಗ ಈ ರೀತಿ ಅನುಭವವಾಗುತ್ತದೆ. 

ಇದನ್ನೂ ಓದಿ- ಸೌತೆ ಕಾಯಿ ತಿಂದ ಕೂಡಲೇ ನೀರು ಕುಡಿಯುವ ತಪ್ಪನ್ನು ಎಂದು ಮಾಡಬೇಡಿ

2. ಚಡಪಡಿಕೆ ಮತ್ತು ಬೆವರುವುದು:
ಸಾಮಾನ್ಯವಾಗಿ ಏನೂ ವಿಷಯ ಇಲ್ಲದಿದ್ದರೂ ಸುಮ್ಮ ಸುಮ್ಮನೆ ಪ್ರಕ್ಷುಬ್ಧತೆ ಮತ್ತು ಬೆವರುವಿಕೆಯ ಅನುಭವವಾಗುವುದೂ ಕೂಡ ಕೊಲೆಸ್ಟ್ರಾಲ್ (Cholesterol) ಹೆಚ್ಚಳದ ಲಕ್ಷಣವಾಗಿರಬಹುದು. ರಕ್ತವು ಸಾಕಷ್ಟು ಪ್ರಮಾಣದಲ್ಲಿ ಹೃದಯವನ್ನು ತಲುಪದಿದ್ದರೆ ಮತ್ತು ಹೃದಯವು ಕಡಿಮೆ ರಕ್ತವನ್ನು ಪಂಪ್ ಮಾಡಲು ಪ್ರಾರಂಭಿಸಿದಾಗ, ಆಗ ಚಡಪಡಿಕೆ, ಬೆವರುವಿಕೆಯಂತಹ ಪರಿಸ್ಥಿತಿ ಉದ್ಭವಿಸಬಹುದು.

3. ಕಣ್ಣುಗಳ ಮೇಲೆ ಹಳದಿ ದದ್ದು:
ಕಣ್ಣುಗಳ ಮೇಲೆ ಹಳದಿ ಕಲೆಗಳು ಕಂಡುಬಂದರೆ, ಅದು ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷಣ ಆಗಿರಬಹುದು. ರಕ್ತದಲ್ಲಿನ ಕೊಬ್ಬಿನ ಪ್ರಮಾಣ ಹೆಚ್ಚಾದಾಗ ಈ ರೀತಿ ಆಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Health Tips: ಹಾಗಲಕಾಯಿ ಮತ್ತದರ ಎಲೆಗಳು ಹೇಗೆ ಪ್ರಯೋಜನಕಾರಿ, ಇಲ್ಲಿದೆ ಮಾಹಿತಿ

4. ಮೈ ಕೈ ನೋವು:
ಇದಲ್ಲದೆ ಯಾವುದೇ ವ್ಯಕ್ತಿಗೆ ಸದಾ ಕುತ್ತಿಗೆ, ದವಡೆ, ಹೊಟ್ಟೆ ಮತ್ತು ಬೆನ್ನಿನಲ್ಲಿ ನೋವು ಕಂಡು ಬರುವುದು ಕೂಡ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳದ ಲಕ್ಷನವಾಗಿರಬಹುದು ಎಂದು ಹೇಳಲಾಗುತ್ತದೆ.

ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:
ಜನರು ಸಾಮಾನ್ಯವಾಗಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್‌ನ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಕೊಲೆಸ್ಟ್ರಾಲ್‌ ಹೆಚ್ಚಳವು ಹಲವು ರೋಗಗಳಿಗೆ ಆಹ್ವಾನ ನೀಡಿದಂತೆ. ಈ ಕಾರಣದಿಂದಾಗಿ ಇತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಯಾವುದೇ ರೋಗ ಲಕ್ಷಣಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ಚಿಕ್ಕದಿರುವಾಗಲೇ ಚಿಕಿತ್ಸೆ ಪಡೆಯುವುದು ಒಳಿತು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News