ಬೇಸಿಗೆಯಲ್ಲಿ ಈ ಒಂದು ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ!

ನೀವು ಬೇಸಿಗೆಯಲ್ಲಿ ಪ್ರತಿದಿನ ಬೇಲದ ಹಣ್ಣಿನ ಜ್ಯೂಸ್ ಅನ್ನು ಕುಡಿಯುತ್ತಿದ್ದರೆ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. ತಾಪದ ವಿರುದ್ಧ ರಕ್ಷಿಸಿಕೊಳ್ಳಲು ಈ ಜ್ಯೂಸ್‌ ತುಂಬಾ ಪ್ರಯೋಜನಕಾರಿಯಾಗಿದೆ. ಇದಲ್ಲದೇ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಈ ಜ್ಯೂಸ್‌ ಕುಡಿಯುವುದರಿಂದ ತುಂಬಾ ಪ್ರಯೋಜನಕಾರಿಯಾಗಿದೆ. 

Written by - Chetana Devarmani | Last Updated : Apr 17, 2022, 03:34 PM IST
  • ಬೇಲದ ಜ್ಯೂಸ್ ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ
  • ತಾಪದ ವಿರುದ್ಧ ರಕ್ಷಿಸಿಕೊಳ್ಳಲು ಈ ಜ್ಯೂಸ್‌ ತುಂಬಾ ಪ್ರಯೋಜನಕಾರಿಯಾಗಿದೆ
  • ಬೇಲದ ಜ್ಯೂಸ್ ಕುಡಿಯುವುದರಿಂದ ಏನು ಪ್ರಯೋಜನ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ
ಬೇಸಿಗೆಯಲ್ಲಿ ಈ ಒಂದು ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ! title=
ಬೇಲದ ಜ್ಯೂಸ್

Bael Juice Benefit In Summer: ಬೇಲದ ಜ್ಯೂಸ್ ಬೇಸಿಗೆಯಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ತಾಪದ ವಿರುದ್ಧ ರಕ್ಷಿಸಿಕೊಳ್ಳಲು ಈ ಜ್ಯೂಸ್‌ ತುಂಬಾ ಪ್ರಯೋಜನಕಾರಿಯಾಗಿದೆ. ದೇಹದ ತಾಪವನ್ನು ಕಡಿಮೆ ಮಾಡಲು ಇದನ್ನು ಪ್ಯಾನೇಸಿಯಾ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಇದರೊಂದಿಗೆ ಮಲಬದ್ಧತೆ ಸಮಸ್ಯೆಯಿಂದ ಹಿಡಿದು ರಕ್ತ ಶುದ್ಧೀಕರಣದವರೆಗೆ ಬೇಲದ ಜ್ಯೂಸ್ ಕೂಡ ತುಂಬಾ ಉಪಯುಕ್ತವಾಗಿದೆ. ಇದರ ಹೊರತಾಗಿ ಬೇಲದ ಜ್ಯೂಸ್ ಕುಡಿಯುವುದರಿಂದ ಏನು ಪ್ರಯೋಜನ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಇದನ್ನೂ ಓದಿ: Diabetes : ಮಧುಮೇಹಿಗಳೆ ಈ ಪದಾರ್ಥಗಳಿಂದ ದೂರವಿರಿ : ಇಲ್ಲದಿದ್ದರೆ ಅಪಾಯ ತಪ್ಪಿದಲ್ಲ!

ನೀವು ಬೇಸಿಗೆಯಲ್ಲಿ ಬೇಲದ ಜ್ಯೂಸ್ ಕುಡಿಯುತ್ತಿದ್ದರೆ, ನಿಮ್ಮ ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ. ಉತ್ತಮ ರೋಗನಿರೋಧಕ ಶಕ್ತಿಯು ರೋಗಗಳ ವಿರುದ್ಧ ಹೋರಾಡಲು ದೇಹವನ್ನು ಶಕ್ತಗೊಳಿಸುತ್ತದೆ. ಪ್ರೋಟೀನ್, ಬೀಟಾ-ಕ್ಯಾರೋಟಿನ್, ಥಯಾಮಿನ್, ರೈಬೋಫ್ಲಾವಿನ್ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳು ಬೇಲದ ಜ್ಯೂಸ್‌ನಲ್ಲಿ ಇರುತ್ತವೆ.

ರಕ್ತವನ್ನು ಶುದ್ಧೀಕರಿಸುವಲ್ಲಿ ಬೇಲದ ಜ್ಯೂಸ್‌ ತುಂಬಾ ಪ್ರಯೋಜನಕಾರಿಯಾಗಿದೆ. ರಕ್ತವನ್ನು ಶುದ್ಧೀಕರಿಸಲು ಹಲವಾರು ರೀತಿಯ ಔಷಧಿಗಳು ಲಭ್ಯವಿದ್ದರೂ, ಬೇಲದ ಜ್ಯೂಸ್ ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ.

ಬೇಲದ ಹಣ್ಣಿನ ಜ್ಯೂಸ್‌ ಹೃದಯದ ಆರೋಗ್ಯಕ್ಕೆ ತುಂಬಾ ಉಪಕಾರಿ. ಇದರ ಹೊರತಾಗಿ ಬೇಲದ ಜ್ಯೂಸ್‌ನಲ್ಲಿ ತುಪ್ಪವನ್ನು ಬೆರೆಸಿ ನಿರ್ದಿಷ್ಟ ಪ್ರಮಾಣದಲ್ಲಿ ಸೇವಿಸಿದರೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತವೆ. ಇದು ಹೃದಯಾಘಾತದ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ನಿಮಗೆ BP ಸಮಸ್ಯೆ ಇದೆಯಾ? ಹಾಗಿದ್ರೆ ಸೌತೆಕಾಯಿ ಜ್ಯೂಸ್ ಕುಡಿಯಿರಿ!

ಬೇಲದ ಜ್ಯೂಸ್‌ ಸೇವನೆಯು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ವಾಸ್ತವವಾಗಿ, ಇದು ಸ್ತನ ಕ್ಯಾನ್ಸರ್‌ನಿಂದ ರಕ್ಷಿಸುತ್ತದೆ. ಇದರೊಂದಿಗೆ, ಹಾಲುಣಿಸುವ ಮಹಿಳೆಯರಿಗೆ ಬೇಲದ ಜ್ಯೂಸ್ ಸಹ ಉಪಯುಕ್ತವಾಗಿದೆ. ಇದರ ಸೇವನೆಯಿಂದ ಎದೆಹಾಲು ಉತ್ಪಾದನೆ ಹೆಚ್ಚುತ್ತದೆ.

ಬೇಲದ ಜ್ಯೂಸ್‌ ಅನ್ನು ಯಾವಾಗ ಕುಡಿಯಬೇಕು?

ಬೆಳಿಗ್ಗೆ ಅಥವಾ ಮಧ್ಯಾಹ್ನ ಖಾಲಿ ಹೊಟ್ಟೆಯಲ್ಲಿ ಬೇಲದ ಜ್ಯೂಸ್ ಅನ್ನು ಕುಡಿಯಬಹುದು. ಆದರೆ ಬೇಲದ ಜ್ಯೂಸ್‌ ಅನ್ನು ಕುಡಿದ ತಕ್ಷಣ ಅಥವಾ ಚಹಾ ಮತ್ತು ಕಾಫಿಯ ಸೇವನೆ ನಂತರ ಕುಡಿಯಬಾರದು ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಹಾಗೆ ಮಾಡುವುದರಿಂದ ನಿಮಗೆ ಅನುಕೂಲಗಳ ಬದಲಾಗಿ ಅನಾನುಕೂಲಗಳು ಉಂಟಾಗಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News