Health Tips: ಕೆಟ್ಟ ಕೊಲೆಸ್ಟ್ರಾಲ್ ನಿರ್ಮೂಲನೆಗೆ ಇಲ್ಲಿದೆ ಆಯುರ್ವೇದದ ಪರಿಹಾರ!

ಕೊಲೆಸ್ಟ್ರಾಲ್‌ಗೆ ಆಯುರ್ವೇದ ಪರಿಹಾರಗಳು: ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸದಿದ್ದರೆ ಅದು ನಿಮ್ಮ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು.

Written by - Puttaraj K Alur | Last Updated : Feb 9, 2023, 03:07 PM IST
  • ಬೆಳ್ಳುಳ್ಳಿಯಲ್ಲಿರುವ ಸಲ್ಫರ್ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ
  • ಅರಿಶಿನವು ರಕ್ತನಾಳಗಳಲ್ಲಿರುವ ಕೊಲೆಸ್ಟ್ರಾಲ್ ಅನ್ನು ದೇಹದಿಂದ ಹೊರಹಾಕಲು ಸಹಕಾರಿ
  • ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮೆಂತ್ಯ ಬೀಜಗಳು ಸಹಾಯ ಮಾಡುತ್ತವೆ
Health Tips: ಕೆಟ್ಟ ಕೊಲೆಸ್ಟ್ರಾಲ್ ನಿರ್ಮೂಲನೆಗೆ ಇಲ್ಲಿದೆ ಆಯುರ್ವೇದದ ಪರಿಹಾರ! title=
ಕೆಟ್ಟ ಕೊಲೆಸ್ಟ್ರಾಲ್‍ಗೆ ಮನೆಮದ್ದುಗಳು

ನವದೆಹಲಿ: ಅನಾರೋಗ್ಯಕರ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ ಮತ್ತು ನಿಯಮಿತ ವ್ಯಾಯಾಮ ಮಾಡದಿರುವುದು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸದಿದ್ದರೆ ಅದು ನಿಮ್ಮ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇಂದು ನಾವು ನಿಮಗೆ ಕೆಲವು ಆಯುರ್ವೇದ ಪರಿಹಾರಗಳ ಬಗ್ಗೆ ಹೇಳುತ್ತೇವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕೆಲವೇ ದಿನಗಳಲ್ಲಿ ಮೂಲದಿಂದ ನಿರ್ಮೂಲನೆ ಮಾಡುತ್ತದೆ.

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಸಲ್ಫರ್ ಇದೆ, ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ಲವಂಗದೊಂದಿಗೆ ರುಬ್ಬಿರಿ, ನಂತರ 1 ಕಪ್ ಹಾಲು ಮತ್ತು 1 ಲೋಟ ನೀರಿನಲ್ಲಿ ಕುದಿಸಿ ಬಳಿಕ ಸೇವಿಸಬೇಕು.

ಅರಿಶಿನ: ಅರಿಶಿನವು ರಕ್ತನಾಳಗಳಲ್ಲಿ ಸಂಗ್ರಹವಾಗಿರುವ ಕೊಲೆಸ್ಟ್ರಾಲ್ ಅನ್ನು ಒಡೆಯಲು ಮತ್ತು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಉಗುರುಬೆಚ್ಚಗಿನ ಹಾಲಿಗೆ ಒಂದು ಚಿಟಿಕೆ ಅರಿಶಿನ ಪುಡಿ ಸೇರಿಸಿ ಸೇವಿಸಿ.

ಜೇನುತುಪ್ಪ: ಜೇನುತುಪ್ಪವು ರಕ್ತನಾಳಗಳ ಒಳಪದರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಒಂದು ಕಪ್ ಬೆಚ್ಚಗಿನ ನೀರಿನಲ್ಲಿ 1 ಚಮಚ ಜೇನುತುಪ್ಪ, ನಿಂಬೆ ರಸ ಮತ್ತು ಕೆಲವು ಹನಿ ಆಪಲ್ ಸೈಡರ್ ವಿನೆಗರ್ ಬೆರೆಸಿ ಕುಡಿಯಿರಿ.

ಇದನ್ನೂ ಓದಿ: Piles Remedy: ಪೈಲ್ಸ್ ನೋವಿನಿಂದ ಭಾರಿ ಪರಿಹಾರ ಒದಗಿಸುತ್ತದೆ ಮನೆಮದ್ದು

ಮೆಂತ್ಯ ಬೀಜಗಳು: ಇವು ಪೊಟ್ಯಾಸಿಯಮ್, ಕಬ್ಬಿಣ, ಸತು ಸೇರಿದಂತೆ ಅನೇಕ ಪ್ರಮುಖ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಇವು ಸಹಾಯ ಮಾಡುತ್ತವೆ. ಒಂದು ಟೀ ಚಮಚ ಮೆಂತ್ಯ ಪುಡಿಯನ್ನು ಉಗುರುಬೆಚ್ಚಗಿನ ನೀರಿನಲ್ಲಿ ದಿನಕ್ಕೆ 2 ಬಾರಿ ತೆಗೆದುಕೊಳ್ಳಿ.

ಬೀಟ್‍ರೂಟ್‍: ಬೀಟ್ರೂಟ್ನಲ್ಲಿ ಕ್ಯಾರೊಟಿನಾಯ್ಡ್ಗಳು ಮತ್ತು ಫ್ಲೇವನಾಯ್ಡ್ಗಳು ಕಂಡುಬರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ಇದು ಸಕ್ಕರೆಯ ಮಟ್ಟ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನೀವು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಬಹುದು.

ಆಪಲ್ ವಿನೆಗರ್: ಆಪಲ್ ವಿನೆಗರ್ ಅನ್ನು ದಿನಕ್ಕೆ 2-3 ಬಾರಿ ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು . ಇದನ್ನು ತೆಗೆದುಕೊಳ್ಳುವ ವಿಧಾನ 1 ಟೀ ಚಮಚ ಆಪಲ್ ವಿನೆಗರ್ ಅನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಕುಡಿಯಿರಿ.

ಸೇಬು ಹಣ್ಣು: ಫ್ಲೇವನಾಯ್ಡ್ಸ್ ಎಂಬ ಆಂಟಿಆಕ್ಸಿಡೆಂಟ್ ಸೇಬುಗಳಲ್ಲಿ ಕಂಡುಬರುತ್ತದೆ. ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ ಇದು ನಿಮ್ಮ ಶ್ವಾಸಕೋಶ ಮತ್ತು ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಅದಕ್ಕಾಗಿಯೇ ವೈದ್ಯರು ಪ್ರತಿದಿನ ಸೇಬು ತಿನ್ನಲು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ: Onion Benefits : ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಪ್ರತಿದಿನ ಸೇವಿಸಿ ಹಸಿ ಈರುಳ್ಳಿ..!

ಕೊತ್ತಂಬರಿ: ಸೊಪ್ಪು ಮಧುಮೇಹ ರೋಗಿಗಳಿಗೆ ಪರಿಣಾಮಕಾರಿ ಮತ್ತು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೊತ್ತಂಬರಿ ಬೀಜಗಳು ಅಧಿಕ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪನ್ನು ಅಡುಗೆ ಮಾಡುವಾಗ ಭಕ್ಷ್ಯಗಳಿಗೆ ಸೇರಿಸುವ ಮೂಲಕ ಸೇವಿಸಬಹುದು. ನೀವು ನಿಮ್ಮ ಆಹಾರದಲ್ಲಿ ಪಾಲಕವನ್ನು ಸೇರಿಸಿಕೊಳ್ಳಬಹುದು ಮತ್ತು ದಾಲ್ಚಿನ್ನಿಯಿಂದ ಮಾಡಿದ ಚಹಾವನ್ನು ಕುಡಿಯಬಹುದು. ಈ 2 ಪರಿಹಾರಗಳಿಂದ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿ ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News