Back Pain Remedies: ಹಳೆ ಬೆನ್ನುನೋವಿನಿಂದ ಬಳಲುತ್ತಿರುವಿರಾ? ಈ ಉಪಾಯಗಳನ್ನು ಅನುಸರಿಸಿ ನೋಡಿ

Back Pain Remedies :ಕಳೆದ ವರ್ಷ ಲಾಕ್ ಡೌನ್ ಜಾರಿಗೆ ಬಂದಿತ್ತು. ಇದೀಗ ಲಾಕ್ ಡೌನ್ ಜಾರಿಗೆ ಬಂದು ಸಂಪೂರ್ಣ ಒಂದು ವರ್ಷ ಪೂರ್ಣಗೊಂಡಿದೆ. ಆದರೆ, ಬಹುತೇಕರ ವಿಷಯದಲ್ಲಿ ಯಾವುದೇ ಬದಲಾವಣೆ ಬಂದಿಲ್ಲ. Back Pain Remediesಕಳೆದ ವರ್ಷ ಲಾಕ್ ಡೌನ್ ಜಾರಿಗೆ ಬಂದಿತ್ತು. ಇದೀಗ ಲಾಕ್ ಡೌನ್ ಜಾರಿಗೆ ಬಂದು ಸಂಪೂರ್ಣ ಒಂದು ವರ್ಷ ಪೂರ್ಣಗೊಂಡಿದೆ. ಆದರೆ, ಬಹುತೇಕರ ವಿಷಯದಲ್ಲಿ ಯಾವುದೇ ಬದಲಾವಣೆ ಬಂದಿಲ್ಲ. 

Written by - Nitin Tabib | Last Updated : Mar 29, 2021, 05:25 PM IST
  • ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಒಂದು ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ.
  • ವಿಟಮಿನ್ ಡಿ ಕೊರತೆ ಇದರ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು.
  • ಬೆನ್ನು ನೋವು ನಿವಾರಣೆಗೆ ಈ ಉಪಾಯಗಳನ್ನು ಒಮ್ಮೆ ಅನುಸರಿಸಿ ನೋಡಿ.
Back Pain Remedies: ಹಳೆ ಬೆನ್ನುನೋವಿನಿಂದ ಬಳಲುತ್ತಿರುವಿರಾ? ಈ ಉಪಾಯಗಳನ್ನು ಅನುಸರಿಸಿ ನೋಡಿ title=
Back Pain Remedies (File Photo)

ನವದೆಹಲಿ: Back Pain Remedies - ಕಳೆದ ವರ್ಷ ಲಾಕ್ ಡೌನ್ ಜಾರಿಗೆ ಬಂದಿತ್ತು. ಇದೀಗ ಲಾಕ್ ಡೌನ್ ಜಾರಿಗೆ ಬಂದು ಸಂಪೂರ್ಣ ಒಂದು ವರ್ಷ ಪೂರ್ಣಗೊಂಡಿದೆ. ಆದರೆ, ಬಹುತೇಕರ ವಿಷಯದಲ್ಲಿ ಯಾವುದೇ ಬದಲಾವಣೆ ಬಂದಿಲ್ಲ. ಕಳೆದ ವರ್ಷದಿಂದ ಮನೆಯಿಂದಲೇ ಕೆಲಸ ನಿರ್ವಹಿಸುವ ಕೆಲ ಜನರು ಇಂದಿಗೂ ಕೂಡ ತಮ್ಮ ತಮ್ಮ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ ಹಾಗೂ ಇದು ನಮ್ಮ ಜೀವನವನ್ನು ಸಂಪೂರ್ಣ ಬದಲಾಯಿಸಿದೆ. ಮನೆಯಿಂದಲೇ ಕೆಲಸ ಮಾಡುವ ಹಲವರು ಹೆಚ್ಚಾಗಿರುವ ತೂಕವನ್ನು ಕಡಿಮೆ ಮಾಡಲು ಇನ್ನೂ ಸಂಘರ್ಷ ನಡೆಸುತ್ತಿದ್ದಾರೆ.

ಬೆನ್ನು ನೋಡು ಓಡಿಸಲು ಈ ಉಪಾಯಗಳನ್ನು ಅನುಸರಿಸಿ
ಕಡಿಮೆ ಶಾರೀರಿಕ ಚಟುವಟಿಕೆ ಹಾಗೂ ಕೆಲಸದ ಜೀವನಗಳ ನಡುವೆ ಸಂತುಲನ ಇರದೇ ಇರುವ ಕಾರಣ ಹಲವರು ಬೆನ್ನುನೋವಿನೊಂದಿಗೆ ಸಂಘರ್ಷ ನಡೆಸುತ್ತಿದ್ದಾರೆ. ಒಂದು ವೇಳೆ ನೀವು ಮನೆಯಲ್ಲಿಯೇ ಕೆಲಸ ಮಾಡುವ ಉಚಿತ ಡೆಸ್ಕ್ ಸಿದ್ಧಪಡಿಸದೇ ಹೋದಲ್ಲಿ ನೀವೂ ಕೂಡ ನಿತ್ಯ ಬೆಳಗ್ಗೆ ಬೆನ್ನುನೋವಿನಿಂದ (Chronic Back Pain) ಏಳುವ ಸಾಧ್ಯತೆ ಇದೆ. ಒಂದು ವೇಳೆ ನಿಮಗೆ ಈ ನೋವು ಹಳೆಯದಾದರೇ, ಇದಕ್ಕೆ ನೀವು ಉಪಾಯ (Health Tips) ಹುಡುಕಲೇಬೇಕು.

ಬೆನ್ನುನೋವು ನಮ್ಮ ನಿತ್ಯ ಕಾರ್ಯಚಟುವಟಿಕೆಗಳನ್ನು ಪ್ರಭಾವಿತಗೊಳಿಸುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಲೇ ಬೇಕು ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ನಿಶ್ಚಿತವಾಗಿ ಅದರ ಕಡೆಗೆ ಗಮನಹರಿಸಲೇಬೇಕು.

>> ನೀವೂ ಖಾಲಿ ಹೊಟ್ಟೆ ಇರುವಾಗ ಇದು ನಿಮ್ಮ ಕ್ಯಾಲೋರಿ ಹಾಗೂ ಶಕ್ತಿಯನ್ನು ಸುಡುತ್ತದೆ ಮತ್ತು ಇದು ಕೆಲಸದ ಸಂದರ್ಭದಲ್ಲಿ ಒಂದು ಅತ್ಯಾವಶ್ಯಕ ಸಂಗತಿಯಾಗಿದೆ. ಹಸಿವು ಸ್ನಾಯುಗಳಿಗೆ ಹಾನಿ ತಲುಪಿಸುತ್ತದೆ ಮತ್ತು ನಂತರ ಬೆನ್ನುಮೂಳೆಯ ಮೇಲೆ ಹೆಚ್ಚಿನ ಒತ್ತಡ ಹೇರುತ್ತದೆ. ಬೆನ್ನುಮೂಳೆಯ ಮೇಲಿನ ಒತ್ತಡ ಬೆನ್ನು ನೋವನ್ನು (Back Pain)ಇನ್ನಷ್ಟು ಹೆಚ್ಚಿಸುತ್ತದೆ. ಎಂದು ತಜ್ಞರು ಹೇಳುತ್ತಾರೆ.

>> ಇತ್ತೀಚಿನ ದಿನಗಳಲ್ಲಿ ವಿಟಮಿನ್ ಡಿ ಕೊರತೆ (Nutrition) ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಹಾಗೂ ಬೆನ್ನುನೋವಿನ ಒಂದು ಸಾಮಾನ್ಯ ಕಾರಣ ಕೂಡ ಹೌದು. ಹೀಗಾಗಿ ನಿಮ್ಮ ಶರೀರದಲ್ಲಿನ ವಿಟಮಿನ್ ಡಿ ಪರೀಕ್ಷಿಸಿ. ರಕ್ತತಪಾಸಣೆ ಮೂಲಕ ನೀವು ಇದನ್ನು ಮಾಡಬಹುದು.

ಇದನ್ನೂ ಓದಿ- Health Benefits Of Green Cardamom: ಹಸಿರು ಏಲಕ್ಕಿ ಸೇವನೆಯ ಈ ಆರೋಗ್ಯಕರ ಲಾಭಗಳು ನಿಮಗೆ ತಿಳಿದಿವೆಯೇ?

>> ನಿಮ್ಮ ದಿನನಿತ್ಯದ ಡಯಟ್ ನಲ್ಲಿ ಎರಡು ಚಮಚೆ ಕರಿ ಎಳ್ಳು ಶಾಮೀಲುಗೊಳಿಸಿ. ಏಕೆಂದರೆ ಬಿಳಿ ಎಳ್ಳು ಕ್ಯಾಲ್ಸಿಯಂ ಅವಶೇಷಗಳನ್ನು ಕಡಿಮೆ ಮಾಡುತ್ತವೆ ಹಾಗೂ ಕರಿ ಎಳ್ಳಿನ ಬೀಜಗಳು ಇದನ್ನು ಸುಧಾರಿಸುತ್ತದೆ. ಇದರಿಂದ ಮೂಳೆಗಳು ಆರೋಗ್ಯಪೂರ್ಣವಾಗಿರುತ್ತವೆ.

ಇದನ್ನೂ ಓದಿ- Scientific Reason Behind Lip Kiss: ಚುಂಬನದ ಹಿಂದಿನ ಈ ವಿಜ್ಞಾನ ನಿಮಗೆ ತಿಳಿದಿದೆಯೇ?

>> ಶಾರೀರಿಕವಾಗಿ ದಿನವಿಡೀ ಸಕ್ರೀಯರಾಗಿರಿ ಹಾಗೂ ಒಂದು ವೇಳೆ ನಿಮ್ಮ ಕೆಲಸ ಡೆಸ್ಕ್ ಕೆಲಸವಾಗಿದ್ದರೆ, ನೆಲದ ಮೇಲೆ ಕುಳಿತು ಕೆಲಸ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ ಅಥವಾ ನಿಮ್ಮ ಬೆನ್ನಲಬು ನೆರವಾಗಿಡುವ ಡೆಸ್ಕ್ ಮೇಲೆ ಹಣ ಹೂಡಿಕೆ ಮಾಡಿ. ಇದರಿಂದ ಬೆನ್ನು ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ-ವ್ಯಾಯಾಮವಿಲ್ಲದೆ Weight control ಮಾಡಬೇಕಾದರೆ ಡಯೆಟ್ ನಲ್ಲಿರಲಿ ಫೈಬರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News