ಬೆಳಿಗ್ಗೆ ಎದ್ದ ಕೂಡಲೇ ನೀವೂ ಈ ತಪ್ಪು ಮಾಡುತ್ತಿದ್ದರೆ ತಕ್ಷಣ ತಿದ್ದಿಕೊಳ್ಳಿ

ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ.  ಹೀಗೆ ಮಾಡುವುದರಿಂದ ದೇಹ ಹೈಡ್ರೇಟ್ ಆಗಿ ಉಳಿಯುತ್ತದೆ.  ಅಲ್ಲದೆ, ಇದು ಚಯಾಪಚಯವನ್ನೂ ಹೆಚ್ಚಿಸುತ್ತದೆ

Written by - Ranjitha R K | Last Updated : May 26, 2021, 05:12 PM IST
  • ಮುಂಜಾನೆ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ
  • ಬೆಳಗ್ಗೆ ಎದ್ದ ಕೂಡಲೇ ನೀರಿ ಕುಡಿಯುವುದು ಬಹಳ ಉತ್ತಮ
  • ಎದ್ದ ತಕ್ಷಣ ಯಾವುದೇ ಕಾರಣಕ್ಕೂ ಮೊಬೈಲ್ ವೀಕ್ಷಣೆ ಬೇಡ
ಬೆಳಿಗ್ಗೆ ಎದ್ದ ಕೂಡಲೇ ನೀವೂ ಈ ತಪ್ಪು ಮಾಡುತ್ತಿದ್ದರೆ ತಕ್ಷಣ ತಿದ್ದಿಕೊಳ್ಳಿ title=
ಮುಂಜಾನೆ ಈ ತಪ್ಪುಗಳಾಗದಂತೆ ನೋಡಿಕೊಳ್ಳಿ (file photo zee)

ನವದೆಹಲಿ : ಮುಂಜಾನೆ ಆರಂಭ ಬಹಳ ಮುಖ್ಯ. ಮುಂಜಾನೆ ಶುಭವಾಗಿದ್ದರೆ ದಿನಪೂರ್ತಿ ಶುಭವಾಗಿರುತ್ತದೆ. ನಮ್ಮ ದಿನ ಹೇಗೆ ಆರಂಭವಾಗುತ್ತದೆ ಎನ್ನುವುದು ತುಂಬಾ ಮುಖ್ಯ. ಆದರೆ ಹೆಚ್ಚಿನವರು ಬೆಳಿಗ್ಗೆ ಎದ್ದ ಕೂಡಲೇ ಆರೋಗ್ಯಕ್ಕೆ ಸಂಬಂಧಪಟ್ಟ ಈ ತಪ್ಪುಗಳನ್ನು ಮಾಡಿ ಬಿಡುತ್ತಾರೆ. ಇದರಿಂದ ಅವರ ಇಡೀ ದಿನವೇ ಗೊಂದಲದಿಂದ ಕೂಡಿರುತ್ತದೆ. ಹಾಗಿದ್ದರೆ ಮುಂಜಾನೆ ನಮ್ಮಿಂದ ಸಾಮಾನ್ಯವಾಗಿ ಘಟಿಸುವ ಯಾವ ತಪ್ಪುಗಳನ್ನು (Morning mistakes) ತಿದ್ದಿಕೊಳ್ಳಬೇಕು ನೋಡೋಣ. 

ಬೆಳಿಗ್ಗೆ ಎದ್ದ ಕೂಡಲೇ ನೀರು ಕುಡಿಯದಿರುವುದು : 
ಬೆಳಿಗ್ಗೆ ಎದ್ದ ಕೂಡಲೇ ನೀರು (Water) ಕುಡಿಯುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ.  ಹೀಗೆ ಮಾಡುವುದರಿಂದ ದೇಹ ಹೈಡ್ರೇಟ್ ಆಗಿ ಉಳಿಯುತ್ತದೆ.  ಅಲ್ಲದೆ, ಇದು ಚಯಾಪಚಯವನ್ನೂ ಹೆಚ್ಚಿಸುತ್ತದೆ. ಬೆಳಿಗ್ಗೆ ಎದ್ದ ಕೂಡಲೇ ಅಂದರೆ ಹಲ್ಲುಜ್ಜದೆ, ಬಾಯಿ ಮುಕ್ಕಳಿಸದೆ ನೀರು ಕುಡಿಯಬೇಕು. ಹೀಗೆ ಯಾಕೆ ಮಾಡಬೇಕು ಅಂದರೆ, ರಾತ್ರಿ ಬಾಯಿಯಲ್ಲಿ ಅನೇಕ ಬ್ಯಾಕ್ಟೀರಿಯಾಗಳು (Bacteria) ಸಂಗ್ರಹವಾಗುತ್ತದೆ. ಬೆಳಿಗ್ಗೆ ಬಾಯಿ ಮುಕ್ಕಳಿಸದೆ ನೀರು ಕುಡಿದರೆ, ಬಾಯಿಯಲ್ಲಿ ಸಂಗ್ರಹವಾಗಿರುವ ಬ್ಯಾಕ್ಟೀರಿಯಾಗಳು ನಮ್ಮ ಹೊಟ್ಟೆಗೆ ಹೋಗುತ್ತವೆ. ಈ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆಗೆ (digestion) ಸಹಾಯ ಮಾಡುತ್ತವೆ. ಬೆಳಿಗ್ಗೆ ನೀರು ಕುಡಿಯುವುದರಿಂದ ನಮ್ಮ ದೇಹವು ಡಿಟಾಕ್ಸ್ ಆಗುತ್ತದೆ. ಒಂದು ವೇಳೆ ಬೆಳಿಗ್ಗೆಎದ್ದ ಕೂಡಲೇ ನೀರು ಕುಡಿಯದೇ ಹೋದರೆ ಮುಂದೆ ಅನೇಕ ರೋಗಗಳಿಗೆ ತುತ್ತಾಗಬೇಕಾಗಬಹುದು. 

ಇದನ್ನೂ ಓದಿ : Benefits Of Triphala: ಅಸಿಡಿಟಿ ಸಮಸ್ಯೆ ಕಾಡುತ್ತಿದೆಯೇ ನಿತ್ಯ ತ್ರಿಫಲವನ್ನು ಸೇವಿಸಿ

ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ವೀಕ್ಷಣೆ :
ಇದು ತಂತ್ರಜ್ಞಾನದ ಯುಗ. ಮೊಬೈಲ್ (Mobile) ನಮ್ಮ ಜೀವನದ ಅವಿಭಾಜ್ಯ ಅಂಗವಾಗಿಯೇ ಬಿಟ್ಟಿದೆ. ಈ ಕಾರಣದಿಂದಾಗಿ, ಕೆಲವರಿಗೆ ಬೆಳಿಗ್ಗೆ ಕಣ್ಣು ಬಿಟ್ಟ ಕೂಡಲೇ ಮೊದಲು ಮೊಬೈಲ್ ಚೆಕ್ ಮಾಡಿಕೊಳ್ಳುವ ಅಭ್ಯಾಸವಿರುತ್ತದೆ. ಇದು ದೃಷ್ಟಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾಕೆಂದರೆ, ರಾತ್ರಿ ಮಲಗುವಾಗ ಬಹಳ ಹೊತ್ತಿನವರೆಗೆ ಕಣ್ಣಿಗೆ (Eye) ಬೆಳಕು ಬೀಳುವುದಿಲ್ಲ. ಹಾಗಿರುವಾಗ ಬೆಳಗ್ಗೆ ಎದ್ದ ತಕ್ಷಣ, ಮೊಬೈಲ್ ನೋಡುವುದು ದೃಷ್ಟಿ ಮೇಲೆ ಪರಿಣಾಮ ಬೀರುತ್ತದೆ. 

ಬೆಳಿಗ್ಗೆ ಎದ್ದ ಕೂಡಲೇ ಚಹಾ ಕುಡಿಯುವುದು :
ಅನೇಕ ಜನರು ಬೆಳಿಗ್ಗೆ ಎದ್ದ ಕೂಡಲೇ ಚಹಾ (Tea) ಕುಡಿಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದರೆ ಇದು ಬಹಳ ತಪ್ಪು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ದೇಹದಲ್ಲಿ ಆಮ್ಲ ಉತ್ಪತ್ತಿಯಾಗುತ್ತದೆ. ಅಲ್ಲದೆ, ಹೊಟ್ಟೆಯಲ್ಲಿ ಗ್ಯಾಸ್ ಕೂಡಾ ಉತ್ಪತ್ತಿಯಾಗುತ್ತದೆ. ಇದು ಮಲಬದ್ಧತೆಗೆ (Constipation) ಕಾರಣವಾಗಬಹುದು ಮತ್ತು ತಲೆನೋವುಗೂ ಕಾರಣವಾಗಬಹುದು. ಬೆಳಿಗ್ಗೆ ಚಹಾ ಕುಡಿಯುವ ಬದಲು ನೀರು ಕುಡಿಯುವುದು ಅತ್ಯಂತ ಪ್ರಯೋಜನಕಾರಿ.

ಇದನ್ನೂ ಓದಿ : ಇದು ಕರೋನಾ ಕಾಲ..! ಅಡುಗೆ ಮನೆಯಲ್ಲಿಈ ಮುನ್ನೆಚ್ಚರಿಕೆ ಇರಲಿ..!

ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡುವುದು : 
ಬೆಳಿಗ್ಗೆಯೇ ಸ್ನಾನ (Taking bath) ಮಾಡುವುದು ಒಳ್ಳೆಯ ಅಭ್ಯಾಸವೇ. ಆದರೆ, ಎದ್ದ ಕೂಡಲೇ ಸ್ನಾನಕ್ಕೆ ಹೋಗುವುದು ತಪ್ಪು. ಹೀಗೆ ಮಾಡುವುದರಿಂದ ದೇಹದ ತಾಪಮಾನದ ಮೇಲೆ ಪರಿಣಾಮವಾಗುತ್ತದೆ. ಈ ಕಾರಣದಿಂದಾಗಿ, ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡುವುದು ಹಾನಿಕಾರಕ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News