Indian Men: ಭಾರತದಲ್ಲಿ ಪ್ರತಿ 5 ಪುರುಷರಲ್ಲಿ ಒಬ್ಬರು ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ

Health News: ಭಾರತದಲ್ಲಿ ಪ್ರತಿ ಐವರು ಪುರುಷರಲ್ಲಿ ಒಬ್ಬರು ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯಿಂದ ಹೇಗೆ ಮುಕ್ತಿ ಪಡೆಯಬೇಕು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Dec 17, 2022, 07:50 PM IST
  • ಗರ್ಭಧಾರಣೆ ಮತ್ತು ಹೆರಿಗೆಯ ನಂತರ ಮಹಿಳೆಯರಿಗೆ ಚಳಿಗಾಲ ಕಡಿಮೆ ಸಮಸ್ಯೆಯಿಂದ ಕೂಡಿರುವುದಿಲ್ಲ.
  • ಹೆರಿಗೆಯ ನಂತರ ಮಹಿಳೆಯರ ತೂಕ ಹೆಚ್ಚಾಗುತ್ತದೆ.
  • ದೇಹದಲ್ಲಿ ಅನೇಕ ರೀತಿಯ ಪೋಷಕಾಂಶಗಳು-ಖನಿಜಗಳ ಕೊರತೆ ಎದುರಾಗುತ್ತದೆ.
Indian Men: ಭಾರತದಲ್ಲಿ ಪ್ರತಿ 5 ಪುರುಷರಲ್ಲಿ ಒಬ್ಬರು ಈ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ title=
Health Care Tips

Health Care Tips: ವೈದ್ಯರ ಪ್ರಕಾರ, ನೀವು ನಿಮ್ಮ ಜೀವನದಲ್ಲಿ ನಾಲ್ಕು ವಿಷಯಗಳನ್ನು ಶಾಮೀಲುಗೊಳಿಸಿದರೆ,  ನೀವು ಎಲ್ಲಾ ಕಾಯಿಲೆಗಳಿಂದ ದೂರವಿರಬಹುದು. ಈ ನಾಲ್ಕು ವಿಷಯಗಳು ಯಾವುವು ಎಂದರೆ, ಸೂರ್ಯನ ಬೆಳಕು, ಉತ್ತಮ ಆಹಾರ, ಸಂಪೂರ್ಣ ನಿದ್ರೆ ಮತ್ತು ದೈನಂದಿನ ವ್ಯಾಯಾಮ. ಈ ನಾಲ್ಕು ವಿಷಯಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ನೀವು ಈ ಸಂಗತಿಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳದೆ ಹೋದಲ್ಲಿ, ನೀವು ಅನೇಕ ರೋಗಗಳನ್ನು ಆಹ್ವಾನ ನೀಡಿದಂತೆ. ಚಳಿಗಾಲದಲ್ಲಿ ಕೀಲುಗಳಲ್ಲಿ ಆಗಾಗ್ಗೆ ನೋವು ಹೊಂದಿರುವ ಜನರ ಸ್ಥಿತಿಯು ಶೋಚನೀಯವಾಗಿರುತ್ತದೆ. ಬೆರಳುಗಳು, ಮೊಣಕಾಲುಗಳು ಮತ್ತು ಬೆನ್ನಿನ ನೋವಿನಿಂದ ಬಳಲುತ್ತಿರುವ ಜನರು ತಾಪಮಾನ ಇಳಿಕೆಯಾಗಲು ಆರಂಭಿಸಿದಾಗ, ಹೆಚ್ಚು ಚಿಂತೆಗೆ ಒಳಗಾಗುತ್ತಾರೆ. ಚಳಿಗಾಲದಲ್ಲಿ ನೀವು ಈ ಸಮಸ್ಯೆಗಳನ್ನು ತಪ್ಪಿಸಲು ಬಯಸುತ್ತಿದ್ದರೆ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳುವುದು ತುಂಬಾ ಮುಖ್ಯ. ಕಳಪೆ ಜೀವನಶೈಲಿ ಮತ್ತು ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ, ಯೂರಿಕ್ ಆಮ್ಲದ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಕಾರ್ಟಿಲೆಜ್ನ ಪದರು ಮತ್ತು ಕೀಲುಗಳಲ್ಲಿ ಲೂಬ್ರಿಕಂಟ್ ಕೊರತೆಯಿಂದಾಗಿ, ಮೂಳೆಗಳ ಮೇಲೆ ಒತ್ತಡ ಬೀಳಲಾರಂಭಿಸುತ್ತದೆ.

ಗರ್ಭಧಾರಣೆ ಮತ್ತು ಹೆರಿಗೆಯ ನಂತರ ಮಹಿಳೆಯರಿಗೆ ಚಳಿಗಾಲ ಕಡಿಮೆ ಸಮಸ್ಯೆಯಿಂದ ಕೂಡಿರುವುದಿಲ್ಲ. ಹೆರಿಗೆಯ ನಂತರ ಮಹಿಳೆಯರ ತೂಕ ಹೆಚ್ಚಾಗುತ್ತದೆ. ದೇಹದಲ್ಲಿ ಅನೇಕ ರೀತಿಯ ಪೋಷಕಾಂಶಗಳು-ಖನಿಜಗಳ ಕೊರತೆ ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೊದಲಿನಿಂದಲೂ ಯೋಗ ಮಾಡುವವರಿಗೆ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ನಂತರ ಯಾವುದೇ ಸಮಸ್ಯೆ ಎದುರಾಗುವುದಿಲ್ಲ, ಆದರೆ ಯೋಗ ಮಾಡದ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.

ಭಾರತದಲ್ಲಿ ಸಂಧಿವಾತ  ಒಂದು ದೊಡ್ಡ ಅಪಾಯ 
>> ಭಾರತದಲ್ಲಿ 18 ಕೋಟಿ ಸಂಧಿವಾತ ರೋಗಿಗಳಿದ್ದಾರೆ.

>> ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಸಂಧಿವಾತವಿದೆ

>> ಪ್ರತಿ 5 ನೇ ಪುರುಷರಿಗೆ ಸಂಧಿವಾತವಿದೆ

>> ಯುವಕರಲ್ಲಿಯೂ ಕೂಡ ಸಂಧಿವಾತ ವೇಗವಾಗಿ ಹೆಚ್ಚುತ್ತಿದೆ

ಸಂಧಿವಾತಕ್ಕೆ ಕಾರಣಗಳು ಇಲ್ಲಿವೆ

>> ವಿಟಮಿನ್ ಡಿ ಕೊರತೆ

>> ಕ್ಯಾಲ್ಸಿಯಂ ಕೊರತೆ

>> ಅಧಿಕ ತೂಕ

>> ಕೀಲು ಗಾಯ

>> ದುರ್ಬಲ ರೋಗನಿರೋಧಕ ಶಕ್ತಿ

>> ಆನುವಂಶಿಕ

>> ಖನಿಜಗಳ ಕೊರತೆ

>> ಹಾರ್ಮೋನುಗಳು

>> ಹೆಚ್ಚಿದ ಯೂರಿಕ್ ಆಮ್ಲ

>> ಔಷಧದ ಅಡ್ಡ ಪರಿಣಾಮಗಳು

ಇದನ್ನೂ ಓದಿ-Herbal Tea: ಚಳಿಗಾಲದಲ್ಲಿ ನಿತ್ಯ ಈ ಟೀ ಸೇವಿಸಿ, ಹಲವು ಲಾಭಗಳನ್ನು ಗಳಿಸಿ

ಭಾರತದಲ್ಲಿ ಸಂಧಿವಾತದಿಂದ ಉಂಟಾಗುವ ಸಮಸ್ಯೆಗಳು

>> ಪ್ರತಿ ಐವರಲ್ಲಿ ಒಬ್ಬರಿಗೆ ಮೂಳೆ ರೋಗ ಇರುತ್ತದೆ.
>> ವೃದ್ಧರು ಸೇರಿದಂತೆ ಯುವಕರು ಕೂಡ ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ.

ಇದನ್ನೂ ಓದಿ-Diabetes: ಗೋಧಿ-ಅಕ್ಕಿಯ ಬದಲು ಈ ಧಾನ್ಯದ ರೊಟ್ಟಿ ಸೇವಿಸಿ ಮಧುಮೇಹವನ್ನು ನಿಯಂತ್ರಿಸಬಹುದು

ಸಂಧಿವಾತದ ತೀವ್ರ ಲಕ್ಷಣಗಳು
>> ಕೀಲುಗಳಲ್ಲಿ ತೀವ್ರವಾದ ನೋವು, ಎದ್ದು ಕುಳಿತುಕೊಳ್ಳಲು ತೊಂದರೆ

>> ಕೀಲುಗಳಲ್ಲಿ ಬಿಗಿತ

>> ಮೊಣಕಾಲುಗಳಲ್ಲಿ ಅತಿಯಾದ ಊತ

>> ಚರ್ಮದ ಮೇಲೆ ಕೆಂಪು ಕಲೆಗಳು

>> ಮೂಳೆ ಮುರಿತ

>> ನಡೆದಾಡುವಾಗ ತೊಂದರೆ

>> ಚರ್ಮದ ಮೇಲೆ ಕೆಂಪು ಕಲೆಗಳು ಕಾಣಿಸಿಕೊಳ್ಳುವಿಕೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News