Apple Cider Vinegar: ಈ ಕಾಯಿಲೆಗಳಿಗೆ ರಾಮಬಾಣ ಆಪಲ್ ಸಿಡರ್ ವಿನೆಗರ್, ನಿತ್ಯ 1 ಚ. ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಸಿಗಲಿವೆ ಈ 5 ಅದ್ಭುತ ಲಾಭಗಳು

Health Benefits Of Apple Cider Vinegar - ಆಪಲ್ ಸಿಡರ್ ವಿನೆಗಾರ್ ಹಲವು ಕಾಯಿಲೆಗಳಿಗೆ ರಾಮಬಾಣ ಚಿಕಿತ್ಸೆಯಾಗಿದೆ. ನಿತ್ಯ ಬೆಳಗ್ಗೆ ಇದನ್ನು ಸೇವಿಸುವುದರಿಂದ ಅನೇಕ ಕಾಯಿಲೆಗಳಲ್ಲಿ ಇದು ನಿಮಗೆ ಲಾಭ ನೀಡುತ್ತದೆ.   

Written by - Nitin Tabib | Last Updated : Dec 4, 2021, 10:31 AM IST
  • ತೂಕ ಇಳಿಕೆಗೆ ಸಹಕಾರಿ.
  • ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ.
  • ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
Apple Cider Vinegar: ಈ ಕಾಯಿಲೆಗಳಿಗೆ ರಾಮಬಾಣ ಆಪಲ್ ಸಿಡರ್ ವಿನೆಗರ್, ನಿತ್ಯ 1 ಚ. ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಸಿಗಲಿವೆ ಈ 5 ಅದ್ಭುತ ಲಾಭಗಳು  title=
Health Benefits Of Apple Cider Vinegar (File Photo)

ನವದೆಹಲಿ: ಆಪಲ್ ಸೈಡರ್ ವಿನೆಗರ್ (Apple Cider Vinegar) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಪಲ್ ಸೈಡರ್ ವಿನೆಗರ್ ಅನ್ನು ಸೇಬಿನ ರಸವನ್ನು ಫಾರ್ಮ್ಯಾಟ್ (Formated Apple Juice) ಮಾಡುವ ಮೂಲಕ ತಯಾರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಚಮಚ ಸೇಬು ವಿನೆಗರ್ ಅನ್ನು ಉಗುರುಬೆಚ್ಚಗಿನ ನೀರಿನಲ್ಲಿ  ಸೇವಿಸುವುದರಿಂದ ಅನೇಕ ಆರೋಗ್ಯ (Health Tips) ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ. ಆಪಲ್ ಸೈಡರ್ ವಿನೆಗರ್ ಅಸಿಟಿಕ್ ಆಮ್ಲ ಮತ್ತು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ. ಇದಲ್ಲದೆ, ಇದು ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಇದರ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ (Digestion Problem)
ಆಪಲ್ ಸೈಡರ್ ವಿನೆಗರ್ ಆಮ್ಲೀಯ ಗುಣವನ್ನು ಹೊಂದಿದೆ. ನೀವು ಜೀರ್ಣಕ್ರಿಯೆ ಅಥವಾ ಗ್ಯಾಸ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ, ಆಪಲ್ ವಿನೆಗರ್ ಸೇವನೆಯು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಇದು ಆಹಾರದ ಪಚನ  ಮತ್ತು ಜೀರ್ಣಕ್ರಿಯೆ ಸರಿಪಡಿಸಲು ಸಹಾಯ ಮಾಡುತ್ತದೆ.

ಕೀಲು ನೋವು (Arthraitis)
ನಿಮಗೆ ಕೀಲು ನೋವಿನ ಸಮಸ್ಯೆ ಇದ್ದರೆ, ಪ್ರತಿದಿನ ಒಂದು ಚಮಚ ಸೇಬು ವಿನೆಗರ್ ಅನ್ನು ಸೇವಿಸುವುದು ಸಹ ನಿಮಗೆ ಪ್ರಯೋಜನ ಸಿಗುತ್ತದೆ. ಆಪಲ್ ಸೈಡರ್ ವಿನೆಗರ್‌ನಲ್ಲಿರುವ ಪೋಷಕಾಂಶಗಳು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ.

ಚರ್ಮ ಮತ್ತು ಕೂದಲು (Skin And Hair Problem)
ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಡಲು ನೀವು ವಿನೆಗರ್ ಅನ್ನು ಸೇವಿಸಬಹುದು. ಇದರಲ್ಲಿರುವ ಪೋಷಕಾಂಶಗಳು ಚರ್ಮ ಮತ್ತು ಕೂದಲನ್ನು ಹಾನಿಯಾಗದಂತೆ ರಕ್ಷಿಸುತ್ತದೆ.

ಇದನ್ನೂ ಓದಿ-Clove Tea:ಚಳಿಗಾಲದ ಋತುವಿನಲ್ಲಿ ನಿತ್ಯ ಬೆಳಗ್ಗೆ ಒಂದು ಕಪ್ ಈ ಚಹಾ ಸೇವಿಸಿ, ಹಲವು ಕಾಯಿಲೆಗಳಿಂದ ದೂರ ಉಳಿಯಿರಿ

ಮಧುಮೇಹ (Diabetes)
ಆಪಲ್ ಸೈಡರ್ ವಿನೆಗರ್ ಸೇವನೆಯು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಒಂದು ಚಮಚ ಉಗುರುಬೆಚ್ಚನೆಯ ನೀರಿನಿಂದ ಆಪಲ್ ಸೈಡರ್ ವಿನೆಗರ್ ತೆಗೆದುಕೊಳ್ಳಿ. ಇದು ಅಧಿಕ ರಕ್ತದಲ್ಲಿನ ಸಕ್ಕರೆಯನ್ನು (High Blood Suger) ನಿಯಂತ್ರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Pressure Cooked Rice : ನೀವು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನ ಸೇವಿಸುತ್ತೀರಾ? ಇದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ತಿಳಿಯಿರಿ

ತೂಕ ಇಳಿಕೆಗೆ ಸಹಕಾರಿ (Weight Loss)
ನೀವು ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಬೆಳಗ್ಗೆ ಒಂದು ಚಮಚ ವಿನೆಗರ್ ಅನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಸೇವಿಸಿ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

(Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅನುಸರಿಸುವ ಮೊದಲು ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಝೀ ಹಿಂದೂಸ್ತಾನ್ ಕನ್ನಡ ಇದನ್ನು ಖಚಿತಪಡಿಸುವುದಿಲ್ಲ)

ಇದನ್ನೂ ಓದಿ-Bed Tea Side Effects : ಅಪ್ಪಿತಪ್ಪಿಯೂ ಕುಡಿಯಬೇಡಿ ಬೆಳಗ್ಗೆ ಎದ್ದ ತಕ್ಷಣ ಟೀ : ಇದರಿಂದ ಆರೋಗ್ಯಕ್ಕೆ ತಪ್ಪಿದಲ್ಲ ಅಪಾಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News