AIIMS Update: ದೇಶಾದ್ಯಂತ ಇರುವ ರೋಗಿಗಳಿಗೆ AIIMS ನಲ್ಲಿ ಆರಂಭಗೊಳ್ಳುತ್ತಿದೆ ಈ ಸೇವೆ, ಮನೆಯಿಂದಲೇ ಚಿಕಿತ್ಸೆ ಪಡೆಯಬಹುದು

Delhi AIIMS Update - ದೇಶಾದ್ಯಂತ ಇತರ ರಾಜ್ಯಗಳಿಂದ ಏಮ್ಸ್‌ನಲ್ಲಿ  (AIIMS)  ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸಂತಸದ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪಕ್ಕದ ರಾಜ್ಯಗಳ ಜಿಲ್ಲಾ ಆಸ್ಪತ್ರೆಗಳನ್ನು ಟೆಲಿಮೆಡಿಸಿನ್  (Telemedicine) ಮೂಲಕ ಏಮ್ಸ್‌ನೊಂದಿಗೆ ಸಂಪರ್ಕಿಸಲು ನಿರ್ಧರಿಸಿದೆ. 

Written by - Nitin Tabib | Last Updated : Feb 11, 2022, 12:27 PM IST
  • ದೇಶಾದ್ಯಂತ ಇರುವ ರೋಗಿಗಳಿಗೆ ಶೀಘ್ರದಲ್ಲಿಯೇ ಹೊಸ ಸೇವೆ ಆರಂಭಿಸಲಿದೆ AIIMS.
  • ಟೆಲಿಮೆಡಿಸಿನ್ ಸೇವೆ ಆರಂಭಿಸಲು ಮುಂದಾದ ಕೇಂದ್ರ ಆರೋಗ್ಯ ಸಚಿವಾಲಯ.
  • ಈ ಕುರಿತು ಕೇಂದ್ರ ಆರೋಗ್ಯ ಸಚಿವರು ಹೇಳಿದ್ದೇನು?
AIIMS Update: ದೇಶಾದ್ಯಂತ ಇರುವ ರೋಗಿಗಳಿಗೆ AIIMS ನಲ್ಲಿ ಆರಂಭಗೊಳ್ಳುತ್ತಿದೆ ಈ ಸೇವೆ, ಮನೆಯಿಂದಲೇ ಚಿಕಿತ್ಸೆ ಪಡೆಯಬಹುದು title=
Delhi AIIMS Update (File Photo)

ನವದೆಹಲಿ: Delhi AIIMS Update - ದೇಶಾದ್ಯಂತ ಇತರ ರಾಜ್ಯಗಳಿಂದ ಏಮ್ಸ್‌ನಲ್ಲಿ  (AIIMS)  ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಸಂತಸದ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಪಕ್ಕದ ರಾಜ್ಯಗಳ ಜಿಲ್ಲಾ ಆಸ್ಪತ್ರೆಗಳನ್ನು ಟೆಲಿಮೆಡಿಸಿನ್  (Telemedicine)  ಮೂಲಕ ಏಮ್ಸ್‌ನೊಂದಿಗೆ ಸಂಪರ್ಕಿಸಲು ನಿರ್ಧರಿಸಿದೆ. ಏಮ್ಸ್‌ನಲ್ಲಿ ಬುಧವಾರ ನಡೆದ ಎಲ್ಲಾ ವಿಭಾಗಗಳ ಮುಖ್ಯಸ್ಥರ ಸಭೆಯ ನಂತರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಈ ನಿರ್ಧಾರ ಕೈಗೊಂಡಿದ್ದಾರೆ. ಸಾಮಾನ್ಯ ಕಾಯಿಲೆಗಳ ಚಿಕಿತ್ಸೆಗಾಗಿ ದೂರದ ಪ್ರದೇಶಗಳಿಂದ AIIMS ಗೆ ಭೇಟಿ ನೀಡುವ ರೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಅಂದರೆ, ಜಿಲ್ಲಾ ಆಸ್ಪತ್ರೆಗಳಲ್ಲಿಯೇ ಅವರು ತಮ್ಮ ಕಾಯಿಲೆಗೆ ಚಿಕಿತ್ಸೆ ಪಡೆಯಬಹುದು ಮತ್ತು ಈ ಸೇವೆಗಾಗಿ ಹೆಲ್ಪ್ ಲೈನ್ ನಂಬರ್ ಜಾರಿಗೊಳಿಸಲಾಗುವುದು.

ಒಂದು ವೇಳೆ ರೋಗಿ ಯಾವುದೇ ಒಂದು ಸಾಮಾನ್ಯ ಕಾಯಿಲೆಯಿಂದ ಬಳಲುತ್ತಿದ್ದರೆ, AIIMS ಅವರಿಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಲು ಸಲಹೆ ನೀಡಲಿದೆ. ಯಾವುದೇ ಒಂದು ತಜ್ಞ ವೈದ್ಯರ ಸಲಹೆ ಪಡೆಯಬೇಕೆಂದರೆ, ತಜ್ಞರು ಜಿಲ್ಲಾ ಆಸ್ಪತ್ರೆಗಳ ವೈದ್ಯರಿಗೆ ಚಿಕಿತ್ಸೆಯ ದಿಕ್ಕನ್ನು ತೋರಿಸುವರು ಮತ್ತು ಅವಶ್ಯಕತೆ ಬಿದ್ದಲ್ಲಿ ರೋಗಿಯನ್ನು ಚಿಕಿತ್ಸೆಗಾಗಿ AIIMSಗೆ ಕರೆಯಿಸಲಾಗುವುದು. 

ರಕ್ತದ ಮಾದರಿ ಸಂಗ್ರಹಣೆ ಮಾಡುವವರಿಗೆ ನೆಮ್ಮದಿ: ರಕ್ತ ತಪಾಸಣೆಗಾಗಿ ಲೈನ್ ನಲ್ಲಿ ನಿಲ್ಲುವ ರೋಗಿಗಳಿಗೂ ಕೂಡ ಆರೋಗ್ಯ ಸಚಿವರು ನೆಮ್ಮದಿಯ ಸುದ್ದಿ ನೀಡಿದ್ದಾರೆ. ಸೆಪ್ಟೆಂಬರ್‌ನಿಂದ ಏಮ್ಸ್‌ನಲ್ಲಿ ರಕ್ತ ಪರೀಕ್ಷೆಗೆ ಮಾದರಿ ನೀಡುವ ಸಮಯವನ್ನು ಐದೂವರೆ ಗಂಟೆಗಳವರೆಗೆ ವಿಸ್ತರಿಸಲಾಗಿದೆ ಎಂದು ಆರೋಗ್ಯ ಸಚಿವರು (Union Health Minister) ಹೇಳಿದ್ದಾರೆ. ಈಗ ಈ ಅವಧಿಯನ್ನು ಇನ್ನೂ ಮೂರು ಗಂಟೆಗಳ ಕಾಲ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಹೊಸ ಪ್ರಸ್ತಾವನೆ ಜಾರಿಯಾದ ಬಳಿಕ  ರೋಗಿಗಳು ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ರಕ್ತದ ಮಾದರಿಗಳನ್ನು ನೀಡಬಹುದಾಗಿದೆ.

ಫೋನ್ ಮೂಲಕ ಸಮಸ್ಯೆಗಳನ್ನು ಆಲಿಸಿ ಸಲಹೆ ನೀಡಲಾಗುವುದು
ಶೀಘ್ರದಲ್ಲಿಯೇ ಏಮ್ಸ್ ನಲ್ಲಿ ಟೆಲಿಮೆಡಿಸಿನ್ ಸೇವೆ ಆರಂಭಗೊಳ್ಳಲಿದೆ. ಇದರಲ್ಲಿ ತಜ್ಞರು AIIMSಗೆ ಭೇಟಿ ನೀಡಬಯಸುವ ರೋಗಿಗಳ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸೂಕ್ತ ಸಲಹೆ ನೀಡಲಿದ್ದಾರೆ. 

1. ನಂಬರ್ ಜಾರಿಯಾಗಲಿದೆ - AIIMS ಸಹಾಯವಾಣಿ ಸಂಖ್ಯೆ ಜಾರಿಗೊಳಿಸಲಿದೆ. ಇದರಲ್ಲಿ ವಿಡಿಯೋ ಕಾಲ್ ಸೌಲಭ್ಯವೂ ಇರಲಿದೆ. ಇದನ್ನು ರಾಜ್ಯಗಳ ಜಿಲ್ಲಾ ಆಸ್ಪತ್ರೆಗಳಿಗೆ ಜೋಡಿಸಲಾಗುವುದು. ಇದರಿಂದ AIIMS ಗೆ ಬರುವ ಮೊದಲು, ವ್ಯಕ್ತಿಯು  ನುರಿತ ತಜ್ಞರಿಗೆ ತಮ್ಮ ಸಮಸ್ಯೆಗಳನ್ನು ಹೇಳಿ ಅವರಿಂದ ಸಲಹೆ ಪಡೆಯಬಹುದು. 

ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ

2. ರೋಗಿಯ ಸ್ಥಿತಿಯ ಪರೀಕ್ಷೆ - ರೋಗಿಯ ಆರೋಗ್ಯ  ಸ್ಥಿತಿಯನ್ನು ಅವಲಂಬಿಸಿ, ತಜ್ಞರು ಅವನನ್ನು ದೆಹಲಿಗೆ ಕರೆಯಿಸಬಹುದು ಅಥವಾ ಜಿಲ್ಲಾ ಆಸ್ಪತ್ರೆಗೆ  ಕಳುಹಿಸಬಹುದು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾದರೆ ದೆಹಲಿವರೆಗೆ ಕರೆಸಿಕೊಳ್ಳುವ ಬದಲು ಹತ್ತಿರದಲ್ಲಿಯೇ ಅವರಿಗೆ ಚಿಕಿತ್ಸೆ ಕೊಡಿಸಲಾಗುವುದು.

ಇದನ್ನೂ ಓದಿ-ಹಿಜಾಬ್ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ, ಕೋರ್ಟ್ ಹೇಳಿದ್ದೇನು ?

3. ಸಲಹೆ ನೀಡಲಿದ್ದಾರೆ - ಏಮ್ಸ್‌ನ ತಜ್ಞರು ರೋಗಿಯ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಸಲಹೆ ನೀಡಲಿದ್ದಾರೆ. ಒಂದು ವೇಳೆ ರೋಗಿಯ ಸ್ಥಿತಿ ಹೆಚ್ಚು ಗಂಭೀರವಾಗಿದ್ದರೆ ಮತ್ತು ಅಲ್ಲಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದ ಸಂದರ್ಭಗಳಲ್ಲಿ ಆತನನ್ನು ಏಮ್ಸ್ ಅಥವಾ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಲಾಗುವುದು.

ಇದನ್ನೂ ಓದಿ-Cryptocurrency ಕಾನೂನುಬಾಹೀರವಲ್ಲ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News