Health Tips: ಧೂಮಪಾನವು ಅಸ್ವಸ್ಥತೆ ಮತ್ತು ಮರಣಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಮತ್ತು ಪುರುಷ ಬಂಜೆತನದ ಮೇಲೆ ವಿವಿಧ ರೀತಿಯಲ್ಲಿ ದುಷ್ಪರಿಣಾಮವನ್ನು ಬೀರುತ್ತದೆ. ಪುರುಷ ಫಲವತ್ತತೆ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರಬಹುದು. ಏಕೆಂದರೆ, ಕೆಲವು ಆರೋಗ್ಯಕರವಾದ ಪರಿಸ್ಥಿತಿಗಳು ಮತ್ತು ಜೀವನಶೈಲಿಯ ಆಯ್ಕೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಫಲವತ್ತತೆಯನ್ನು ದುರ್ಬಲಗೊಳಿಸಬಹುದು. ಪುರುಷ ಫಲವತ್ತತೆಗೆ ಕಾರಣವಾಗುವ ಅಂಶಗಳಾದ ವೀರ್ಯ ಚಲನಶೀಲತೆಯಲ್ಲಿ ಕಡಿಮೆಯಾಗುವುದ, ಕಳಪೆ ವೀರ್ಯ ಮಾರ್ಫೋಲಾಜಿ, ಆನುವಂಶಿಕ ದೋಷಗಳು ಮತ್ತು ಇತರ ಸಮಸ್ಯೆಗಳಿಗೆ ಈ ಧೂಮಪಾನ ಕಾರಣವಾಗುತ್ತದೆ. ಇವುಗಳು ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುತ್ತವೆ. ಧೂಮಪಾನದಿಂದಾಗಿ ವೀರ್ಯದ ಗುಣಮಟ್ಟ ಕಳಪೆಯಾಗುವುದು, ವೀರ್ಯದ ಸಾಂದ್ರತೆಯನ್ನು ಶೇ.23 ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಸೆಮಿನಲ್ ಫ್ಲ್ಯೂಯಿಡ್ ಮತ್ತು ಸ್ಪರ್ಮ್ ಕೌಂಟ್: ವೀರ್ಯವು ಸೆಮಿನಲ್ ಪ್ಲಾಸ್ಮಾದಿಂದ ಉತ್ಪತ್ತಿಯಾಗುತ್ತದೆ. ಇದು ದ್ರವವನ್ನು ಸ್ಖಲನ ಮಾಡುತ್ತದೆ. ಈ ಸೆಮಿನಲ್ ಫ್ಲ್ಯುಯಿಡ್ ಅಂದರೆ ಸೆಮಿನಲ್ ದ್ರವವು ಪುರುಷ ಫಲವತ್ತತೆಗೆ ಅವಶ್ಯಕವಾಗಿರುತ್ತದೆ. ಏಕೆಂದರೆ ಇದು ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯ ಮೂಲಕ ಹೋಗುವಾಗ ವೀರ್ಯ ಕೋಶಗಳನ್ನು ಪೋಷಣೆ ಮತ್ತು ರಕ್ಷಣೆ ಮಾಡುತ್ತದೆ. ಸಿಗರೇಟಿನ ಹೊಗೆಯಲ್ಲಿನ ಜೀವಾಣು ವಿಷವಯ ವೀರ್ಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಸೆಮಿನಲ್ ದ್ರವದ ರಕ್ಷಣಾತ್ಮಕ ಅಂಶವನ್ನೂ ಕಡಿಮೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಧೂಮಪಾನಿಗಳ ವೀರ್ಯ ಕೋಶಗಳು ಮೊಟ್ಟೆಯನ್ನು ತಲುಪುವ ಮತ್ತು ಬದುಕುಳಿಯುವ ಸಾಧ್ಯತೆಗಳು ಕಡಿಮೆ ಇರುತ್ತವೆ.
ಇದನ್ನೂ ಓದಿ: ಆತಂಕವನ್ನು ಮರೆಮಾಚುವುದು ಮಾನಸಿಕ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಗೊತ್ತಾ..?
ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ: ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಅಥವಾ ಇತರ ಲೈಂಗಿಕ ಮಿತಿಗಳಿಂದ ವ್ಯಕ್ತಿಯ ಲೈಂಗಿಕ ಜೀವನವು ಹೆಚ್ಚು ಪರಿಣಾಮ ಬೀರಬಹುದಾಗಿದೆ. ಇದು ಗರ್ಭಿಣಿಯಾಗಲು ಹೆಚ್ಚು ಸಮಸ್ಯೆಯನ್ನು ತಂದೊಡ್ಡಬಹುದು. ಹಲವಾರು ಸಂಶೋಧನೆಗಳು ಧೂಮಪಾನ ಮತ್ತು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ (ED) ಅಪಾಯದ ನಡುವಿನ ಸಂಪರ್ಕವನ್ನು ತೋರಿಸುತ್ತದೆ. 40 ರಿಂದ 70 ವರ್ಷ ವಯಸ್ಸಿನ ಶೇ.52 ರಷ್ಟು ಪುರುಷರು ಮತ್ತು ಎಲ್ಲಾ ಪುರುಷರು ಶೇ.20 ರಷ್ಟು ED ಯಿಂದ ಬಳಲುತ್ತಿದ್ದಾರೆ. ಆರೋಗ್ಯಕರವಾದ ರಕ್ತನಾಳಗಳು ವಿಸ್ತರಣೆಯಾದಾಗ ಮತ್ತು ರಕ್ತದಿಂದ ತುಂಬಿದಾಗ ನಿಮಿರುವಿಕೆ ಉಂಟಾಗುತ್ತದೆ. ನಾವು ಸಿಗರೇಟ್ ಸೇದುವ ಸಂದರ್ಭದಲ್ಲಿ ನಮ್ಮ ಶ್ವಾಸಕೋಶಗಳು ಹೊಗೆಯಲ್ಲಿನ ವಿಷವನ್ನು ಹೀರಿಕೊಳ್ಳುತ್ತವೆ.
ಈ ಜೀವಾಣುಗಳು ಶಿಶ್ನದಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತವೆ. ಅದೇ ರೀತಿ ರಕ್ತದ ಹರಿವಿನ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಇದರ ಪರಿಣಾಮ ED ಉಂಟಾಗುತ್ತದೆ. ED ಯಿಂದಾಗಿ ಲೈಂಗಿಕ ಕ್ರಿಯೆಯ ಮೇಲೆ ಒತ್ತಡ ಉಂಟಾಗಬಹುದು. ಇದು ವ್ಯಕ್ತಿಯ ಜೀವನದ ಇತರ ಅಂಶಗಳ ಮೇಲೆಯೂ ಪರಿಣಾಮ ಬೀರಬಹುದು. ಆದರೂ, ಯಾವಾಗಲೂ ಕೆಟ್ಟ ವೀರ್ಯವನ್ನು ಉತ್ಪಾದನೆಗೆ ಕಾರಣವಾಗುತ್ತದೆ ಎಂದು ಅರ್ಥವಲ್ಲ.
ಈ ಎಲ್ಲಾ ಅಂಸಗಳಿಂದ ಧೂಮಪಾನವನ್ನು ತ್ಯಜಿಸುವುದು ಮತ್ತು ವೀರ್ಯಕೋಶಗಳಿಗೆ ಹಾನಿಯಾಗದಂತೆ ತಡೆಯುವುದಕ್ಕೆ ಇನ್ನೂ ತಡವಾಗಿಲ್ಲ. ಏಕೆಂದರೆ, ಅನೇಕ ಪುರುಷರಲ್ಲಿ ಧೂಮಪಾನದ ಪರಿಣಾಮಗಳು ಬಹಳಷ್ಟು ಪ್ರಕರಣಗಳಲ್ಲಿ ಮರುಕಳಿಸುತ್ತವೆ. ಪ್ರತಿ 70 ರಿಂದ 90 ದಿನಗಳಿಗೊಮ್ಮೆ ಹೊಸ ವೀರ್ಯಕೋಶಗಳು ರಚನೆಯಾಗುತ್ತವೆ. ಧೂಮಪಾನವನ್ನು ನಿಲ್ಲಿಸಿದ ಸುಮಾರು ಮೂರು ತಿಂಗಳ ನಂತರ ವೀರ್ಯದ ಗುಣಮಟ್ಟದಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಧೂಮಪಾನವು ಮನುಷ್ಯನ ಲೈಂಗಿಕ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಸ್ಥಳೀಯ ವೈದ್ಯರನ್ನು ಭೇಟಿ ಮಾಡಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವುದು ಸೂಕ್ತ.
ಲೇಖಕರು - ಡಾ. ಪಲ್ಲವಿ ಪ್ರಸಾದ್, ಫರ್ಟಿಲಿಟಿ ಕನ್ಸಲ್ಟೆಂಟ್, ನೋವಾ ಐವಿಎಫ್ ಫರ್ಟಿಲಿಟಿ, ಬಸವೇಶ್ವರ ನಗರ, ಬೆಂಗಳೂರು
ಇದನ್ನೂ ಓದಿ: ತಲೆನೋವಿಗೆ ಕಾರಣಗಳು; ಅದರ ಪರಿಹಾರಕ್ಕಾಗಿ ಮನೆಮದ್ದುಗಳು !
;
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.