ಹೀಗೆ ಮಾಡಿದ್ರೆ ಕೇವಲ 1 ತಿಂಗಳಲ್ಲಿ 10 ಕೆಜಿ ವರೆಗೆ ತೂಕ ಕಳೆದುಕೊಳ್ಳಬಹದು..! ಟಿಪ್ಸ್‌ ಇಲ್ಲಿವೆ

Weight loss tips : ಹೆಚ್ಚಿನ ಜನರು ಹೆಚ್ಚಿನ ತೂಕವನ್ನು ಕಳೆದುಕೊಳ್ಳುವಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ. ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ ಸಹ ತೂಕ ಕಡಿಮೆಯಾಗುವುದಿಲ್ಲ. ನಿವೂ ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಹೆಚ್ಚುವರಿ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಈ ಟಿಪ್ಸ್‌ ಪಾಲಿಸಿ. 

Written by - Krishna N K | Last Updated : Jan 26, 2024, 05:45 PM IST
  • ತೂಕವನ್ನು ಕಳೆದುಕೊಳ್ಳುವಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಾರೆ.
  • ಸಾಕಷ್ಟು ಜನರು ತೂಕವನ್ನು ಕಳೆದುಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
  • ಈ ಆಹಾರ ಕ್ರಮವನ್ನು ಅನುಸರಿಸಿದರೆ ಒಂದು ತಿಂಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.
ಹೀಗೆ ಮಾಡಿದ್ರೆ ಕೇವಲ 1 ತಿಂಗಳಲ್ಲಿ 10 ಕೆಜಿ ವರೆಗೆ ತೂಕ ಕಳೆದುಕೊಳ್ಳಬಹದು..! ಟಿಪ್ಸ್‌ ಇಲ್ಲಿವೆ title=

Diet chart in Kannada : ಒತ್ತಡದ ಜೀವನ ಶೈಲಿಯಿಂದಾಗಿ ಹೆಚ್ಚಿನ ಜನರಿಗೆ ತೂಕ ಹೆಚ್ಚಳ ದೊಡ್ಡ ಚಿಂತೆಯಾಗಿ ಕಾಡುತ್ತಿದೆ. ಸಾಕಷ್ಟು ಜನರು ತೂಕವನ್ನು ಕಳೆದುಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ ಅದರಿಂದ ಯಾವುದೇ ಫಲ ಪಡೆಯುತ್ತಿಲ್ಲ. ಒಂದು ವೇಳೆ ನೀವು ಈ ಕೆಳಗೆ ನೀಡಿರುವ ಆಹಾರ ಕ್ರಮವನ್ನು ಅನುಸರಿಸಿದರೆ ಒಂದು ತಿಂಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಬೆಳಗಿನ ಉಪಾಹಾರ : ಉಪಾಹಾರವನ್ನು ನಮ್ಮ ಆಹಾರದ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ. ಬೆಳಗಿನ ಉಪಾಹಾರ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ. ಅಲ್ಲದೆ, ತೂಕ ನಷ್ಟಕ್ಕೆ ಆರೋಗ್ಯಕರ ಉಪಹಾರ ಅತ್ಯಂತ ಮುಖ್ಯ. ನಿಮ್ಮ ಉಪಹಾರವು ನೀವು ತೂಕವನ್ನು ಹೆಚ್ಚಿಸುತ್ತೀರೋ ಅಥವಾ ಕಳೆದುಕೊಳ್ಳುತ್ತೀರೋ ಎಂಬುದನ್ನು ನಿರ್ಧರಿಸುತ್ತದೆ. ಆರೋಗ್ಯಕರ ಉಪಹಾರಕ್ಕಾಗಿ ನೀವು ಕೆಲವು ಒಣ ಹಣ್ಣುಗಳು, ಓಟ್ಸ್, ಇಡ್ಲಿ ಸಾಂಬಾರ್, ದೋಸೆ ಇತ್ಯಾದಿಗಳನ್ನು ಸೇವಿಸಬಹುದು. 

ಇದನ್ನೂ ಓದಿ:ನೈಸರ್ಗಿಕವಾಗಿ ರಕ್ತವನ್ನು ಶುದ್ಧಿ ಮಾಡುವ ಆಹಾರಗಳು ಯಾವುವು ಗೊತ್ತೆ..! ಇಲ್ಲಿದೆ ಮಾಹಿತಿ

ಮಧ್ಯಾಹ್ನದ ಊಟ : ದೇಹದ ತೂಕವನ್ನು ನಿಯಂತ್ರಿಸುವಲ್ಲಿ ಮಧ್ಯಾಹ್ನದ ಊಟ ಪರಿಣಾಮಕಾರಿ. ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ, ನಿಮ್ಮ ಊಟದಲ್ಲಿ ಆಯಾ ಕಾಲದಲ್ಲಿ ಲಭ್ಯವಿರುವ ತರಕಾರಿಗಳು, ಬೇಳೆಕಾಳುಗಳು, ಚಿಕನ್ ಮತ್ತು ಮೀನು (ನಾನ್ ವೆಜ್ ತಿನ್ನುವವರು) ಜೊತೆಗೆ ಒಂದು ಅಥವಾ ಎರಡು ರೊಟ್ಟಿಗಳನ್ನು ತಿನ್ನಬೇಕು. ಸಲಾಡ್‌ ಇದ್ದರೆ ಇನ್ನೂ ಉತ್ತಮ, ಏಕೆಂದರೆ ಇದು ನಿಮ್ಮ ದೇಹದಲ್ಲಿ ಫೈಬರ್ ಪ್ರಮಾಣವನ್ನು ಹೆಚ್ಚಿಸುತ್ತದೆ.

ರಾತ್ರಿ ಊಟ : ರಾತ್ರಿಯ ಊಟವು ಮಧ್ಯಾಹ್ನ ಮತ್ತು ಉಪಹಾರಕ್ಕಿಂತ ಹೆಚ್ಚು ಹಗುರವಾಗಿರಬೇಕು. ಲಘು ಭೋಜನವು ನಿಮ್ಮ ತೂಕ ನಷ್ಟದ ಪ್ರಯಾಣವನ್ನು ಸುಲಭಗೊಳಿಸುತ್ತದೆ. ರಾತ್ರಿಯ ಊಟಕ್ಕೆ ಖಿಚಡಿ ಮತ್ತು ದಹಿಯನ್ನು ಸೇವಿಸಬಹುದು. ಇದಲ್ಲದೇ ರಾತ್ರಿಯ ಊಟದಲ್ಲಿ ಕೆಲವು ತರಕಾರಿಗಳು ಮತ್ತು ಗ್ರಿಲ್ಡ್ ಫಿಶ್ (ನಾನ್ ವೆಜ್ ತಿನ್ನುವವರಿಗೆ) ಕೂಡ ಸೇವಿಸಬಹುದು. ಕಂದು ಅನ್ನವನ್ನೂ ಸಹ ತಿನ್ನಬಹುದು. 

ಇದನ್ನೂ ಓದಿ:ಆಸಿಡಿಟಿಗೆ ಮದ್ದು ಮಾಡುವ ಅಗತ್ಯವಿಲ್ಲ : ನಿತ್ಯ ಈ ಕೆಲಸ ಮಾಡಿದರೆ ಸಾಕು

(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada news ಅದನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News