ಬಾಯ್ಕಾಟ್ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ʼಬನಾರಸ್ʼ..!

ಝೈದ್ ಖಾನ್ ನಾಯಕನಾಗಿ ನಟಿಸಿರೋ ಬನಾರಸ್ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಬರ್ಜರಿ ಸದ್ದು ಮಾಡುತ್ತಿದೆ. ಕರ್ನಾಟಕ ಸೇರಿದಂತೆ, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದಿದೆ. ದಿನದಿಂದ ದಿನಕ್ಕೆ ಬರ್ಜರಿ ಪ್ರದರ್ಶನ ಕಾಣುತ್ತಿರುವ ಬನಾರಸ್‌ ಕಲೆಕ್ಷನ್‌ ಕುರಿತು ಚಿತ್ರತಂಡದ ಅಧಿಕೃತ ಮಾಹಿತಿ ಹೊರಹಾಕಿದೆ.

Written by - Krishna N K | Last Updated : Nov 5, 2022, 05:10 PM IST
  • ಬಾಯ್ಕಾಟ್ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ʼಬನಾರಸ್ʼ
  • ಝೈದ್‌ ಖಾನ್‌ ನಟನೆಗೆ ಪ್ರೇಕ್ಷಕ ಮಹಾಶಯ ಫಿದಾ
  • ಕರ್ನಾಟಕ ಸೇರಿದಂತೆ ದೇಶಾದ್ಯಂತ ಬನಾರಸ್‌ ಉತ್ತಮ ಪ್ರದರ್ಶನ
ಬಾಯ್ಕಾಟ್ ನಡುವೆಯೂ ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿದ ʼಬನಾರಸ್ʼ..! title=

ಬೆಂಗಳೂರು : ಝೈದ್ ಖಾನ್ ನಾಯಕನಾಗಿ ನಟಿಸಿರೋ ಬನಾರಸ್ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಬರ್ಜರಿ ಸದ್ದು ಮಾಡುತ್ತಿದೆ. ಕರ್ನಾಟಕ ಸೇರಿದಂತೆ, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದಿದೆ. ದಿನದಿಂದ ದಿನಕ್ಕೆ ಬರ್ಜರಿ ಪ್ರದರ್ಶನ ಕಾಣುತ್ತಿರುವ ಬನಾರಸ್‌ ಕಲೆಕ್ಷನ್‌ ಕುರಿತು ಚಿತ್ರತಂಡದ ಅಧಿಕೃತ ಮಾಹಿತಿ ಹೊರಹಾಕಿದೆ.

ಬಿಡುಗಡೆಯಾದ ಮೊದಲ ದಿನವೇ ಬನಾರಸ್ ಮೂರು ಕೋಟಿ ರೂ. ಬಾಚಿಕೊಂಡಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಉತ್ತಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಲ್ಲದೆ, ಎರಡನೇ ದಿನ ಬನಾರಸ್‌ ಕಲೆಕ್ಷನ್‌ ಮೊತ್ತ ದುಪ್ಪಟ್ಟಾಗುವ ನಿರೀಕ್ಷೆಗಳಿವೆ. ಒಟ್ಟಾರೆಯಾಗಿ ಜಯತೀರ್ಥ ನಿರ್ದೇಶನದ ಬನಾರಸ್ ಕಥೆ ಸೇರಿದಂತೆ ಎಲ್ಲ ದಿಕ್ಕಿನಿಂದಲೂ ಜನ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಅಂತೂ ಇಂತೂ ಬೆಣ್ಣೆ ನಗರಿಯ ಜವಾರಿ ಹುಡುಗಿ ಅಧಿತಿಗೆ ಮದ್ವೆ ಫಿಕ್ಸ್...! ಲಗ್ನ ಪತ್ರ ಹೇಗಿದೆ ಗೊತ್ತಾ?

ಇನ್ನು ಝೈದ್ ಖಾನ್‌ ನಟನೆಗೂ ಪ್ರೇಕ್ಷಕರು ಫಿದಾ ಆಗಿದ್ದಾರೆ. ಹೊಸ ನಟನೊಬ್ಬನ ಸಿನಿಮಾವೊಂದು ಇಷ್ಟು ಪ್ರಮಾಣದಲ್ಲಿ ದುಡ್ಡು ಮಾಡಿದ್ದು ಕನ್ನಡ ಸಿನಿಮಾ ರಂಗದಲ್ಲಿ ಹೊಸ ಭರವಸೆಗೆ ಕಾರಣವಾಗಿದೆ. ಅಲ್ಲದೆ, ಎರಡನೇ ದಿನ ಬನಾರಸ್‌ ಮೊತ್ತ ದುಪ್ಪಟ್ಟಾಗುವ ನಿರೀಕ್ಷೆಗಳಿವೆ ಎನ್ನಲಾಗಿದೆ. ಝೈದ್ ಖಾನ್ ಮೊದಲ ಸಿನಿಮಾಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News