Yash Next Movie: ನವೆಂಬರ್ 1ಕ್ಕೆ ಯಶ್ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ!

Rocking Star Yash New Movie: ಈ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಲಿದ್ದು, ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾದ ಕತೆ ಹಾಗೂ ಚಿತ್ರಕಥೆ ಎಲ್ಲವೂ ರೆಡಿಯಾಗಿದ್ದು, ಚಿತ್ರದ ಫಸ್ಟ್‍ಲುಕ್‌ ಸಮೇತ ಚಿತ್ರವನ್ನು ಘೋಷಣೆ ಮಾಡಲಿದ್ದಾರೆನ್ನುವ ಮಾಹಿತಿ ಸಿಕ್ಕಿದೆ.

Written by - Puttaraj K Alur | Last Updated : Oct 30, 2023, 05:16 PM IST
  • ನ.1ರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಯಶ್ ಅವರ 19ನೇ ಸಿನಿಮಾ ಅಧಿಕೃತವಾಗಿ ಘೋಷಣೆ ಸಾಧ್ಯತೆ
  • ಗೀತು ಮೋಹನ್ ದಾಸ್ ನಿರ್ದೇಶಿಸಲಿರುವ ಈ ಸಿನಿಮಾವನ್ನು ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ
  • ಕತೆ ಹಾಗೂ ಚಿತ್ರಕಥೆ ಎಲ್ಲವೂ ರೆಡಿಯಾಗಿದ್ದು, ಚಿತ್ರದ ಫಸ್ಟ್‍ಲುಕ್‌ ಸಮೇತ ಚಿತ್ರ ಘೋಷಣೆ ಸಾಧ್ಯತೆ
Yash Next Movie: ನವೆಂಬರ್ 1ಕ್ಕೆ ಯಶ್ ಹೊಸ ಸಿನಿಮಾ ಘೋಷಿಸುವ ಸಾಧ್ಯತೆ! title=
Yash Next Movie

ಬೆಂಗಳೂರು: ಕೆಜಿಎಫ್ ಚಾಪ್ಟರ್ 1 & 2ರ ಯಶಸ್ಸಿನ ಬಳಿಕ ರಾಕಿಂಗ್ ಸ್ಟಾರ್ ಯಶ್ ಫುಲ್ ಬ್ಯುಸಿಯಾಗಿದ್ದಾರೆ. ಯಶ್ ನಟನೆಯ ಹೊಸ ಸಿನಿಮಾಗಾಗಿ ಅವರ ಲಕ್ಷಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಶ್ ಹೊಸ ಸಿನಿಮಾ ಯಾವಾಗ ಘೋಷಣೆಯಾಗುತ್ತೆ ಅನ್ನೋ ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ.

ಹೌದು, ನವೆಂಬರ್ 1ರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ರಾಕಿ ಬಾಯ್ ಯಶ್ ಅವರ 19ನೇ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಲಿದ್ದು, ಕೆವಿಎನ್ ಸಂಸ್ಥೆ ನಿರ್ಮಿಸುತ್ತಿದೆ. ಈ ಸಿನಿಮಾದ ಕತೆ ಹಾಗೂ ಚಿತ್ರಕಥೆ ಎಲ್ಲವೂ ರೆಡಿಯಾಗಿದ್ದು, ಚಿತ್ರದ ಫಸ್ಟ್‍ಲುಕ್‌ ಸಮೇತ ಚಿತ್ರವನ್ನು ಘೋಷಣೆ ಮಾಡಲಿದ್ದಾರೆನ್ನುವ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: Yuva Movie: ಚಿಕ್ಕಪ್ಪನ ಹುಟ್ಟುಹಬ್ಬಕ್ಕೆ ಯುವ ಚಿತ್ರದ ಅದ್ದೂರಿ ಇವೆಂಟ್‌

ಈ ಬಗ್ಗೆ ಈ ಹಿಂದೆಯೇ ಮಾತನಾಡಿದ್ದ ಕೆವಿಎಎನ್‌ ಸಂಸ್ಥೆಯ ಸುಪ್ರಿತ್‌, ‘ಯಶ್‌ 19’ ಹೆಸರಿನಲ್ಲಿರುವ ಸುದ್ದಿಯಾಗಿರುವ ಚಿತ್ರವನ್ನು ಕೆವಿಎನ್‌ ಸಂಸ್ಥೆಯೇ ನಿರ್ಮಿಸಲಿದೆ ಎಂಬುದು ನಿಜ. ಗೀತು ಮೋಹನ್‌ ದಾಸ್‌ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಚಿತ್ರದ ಘೋಷಣೆ ಯಾವಾಗ ಎಂದು ಈಗಲೇ ಹೇಳಲಾಗದು’ ಅಂತಾ ಹೇಳಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ನವೆಂಬರ್ 1ಕ್ಕೆ ‘ಯಶ್‌ 19’ ಸಿನಿಮಾ ಪಕ್ಕಾ ಸೆಟ್ಟೇರಲಿದೆಯಂತೆ. ಈ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ತಮ್ಮ  ದೇಹದ ತೂಕವನ್ನು ಇಳಿಸಿಕೊಳ್ಳುತ್ತಿದ್ದಾರಂತೆ. ಇದಕ್ಕಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿರುವ ಯಶ್ ಜಿಮ್‍ನಲ್ಲಿ ಬೆವರು ಹರಿಸುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾಗಾಗಿ ಹೊಸ ಅವತಾರದಲ್ಲಿ ಮಿಂಚಲು ರಾಕಿಂಗ್ ಸ್ಟಾರ್ ಸಜ್ಜಾಗುತ್ತಿದ್ದಾರೆ.

ಇದನ್ನೂ ಓದಿ: Jawan: ಇನ್ನೆರಡು ದಿನಗಳಲ್ಲಿ ಒಟಿಟಿಗೆ ಶಾರುಕ್‌ ನ್ಯೂ ಸಿನಿಮಾ..! 

ಯಶ್ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡಮಟ್ಟದ ಕ್ರೇಜ್ ಹುಟ್ಟಿಕೊಂಡಿದೆ. ಯಾವಾಗ ಯಶ್ ಸಿನಿಮಾ ಅನೌನ್ಸ್ ಆಗುತ್ತೋ, ಯಾವಾಗ ಅವರ ಸಿನಿಮಾ ಥಿಯೇಟರ್‍ಗೆ ಬಿಡುಗಡೆಯಾಗುತ್ತೋ ಅಂತಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದಲ್ಲದೇ ಕೆಜಿಎಫ್ ಚಾಪ್ಟರ್ 3ಗಾಗಿಯೂ ಅಭಿಮಾನಿಗಳು ದೊಡ್ಡಮಟ್ಟದ ನಿರೀಕ್ಷೆಯನ್ನಿಟ್ಟುಕೊಂಡು ಕಾಯುತ್ತಿದ್ದಾರೆ. ಹೀಗಾಗಿ ನವೆಂಬರ್ 1ಕ್ಕೆ ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುತ್ತಾರಾ ಅಂತಾ ಕಾದು ನೋಡಬೇಕಿದೆ.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News