ಅನುಷ್ಕಾ ಶೆಟ್ಟಿ ಯಾವಾಗ ಮದುವೆಯಾಗುತ್ತಾರೆ ಗೊತ್ತಾ? ಭವಿಷ್ಯ ನುಡಿದ ಜ್ಯೋತಿಷಿ..!

ನಟಿ ಅನುಷ್ಕಾ ಶೆಟ್ಟಿಯವರದು Down to Earth ವ್ಯಕ್ತಿತ್ವ, ಅವರಲ್ಲಿ ಕೊಂಚವೂ ಅಂಹಕಾರವಿಲ್ಲ.  2023ರೊಳಗೆ ಅವರ ಮದುವೆ ನಡೆಯುತ್ತದೆ ಅಂತಾ ಪಂಡಿತರು ಭವಿಷ್ಯ ಹೇಳಿದ್ದಾರೆ.

Written by - Puttaraj K Alur | Last Updated : Sep 26, 2021, 07:56 AM IST
  • ಟಾಲಿವುಡ್ ಚಿತ್ರರಂಗದ ಚೆಲುವೆ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ
  • Down to Earth ವ್ಯಕ್ತಿತ್ವದ ಅನುಷ್ಕಾ ಶೆಟ್ಟಿಯವರ ಮದುವೆ 2023ರೊಳಗೆ ನಡೆಯುತ್ತದಂತೆ
  • ಅನುಷ್ಕಾ ಶೆಟ್ಟಿ ಸಿನಿಮಾ ಉದ್ಯಮದ ಬದಲು ಬೇರೆ ಕ್ಷೇತ್ರದ ವ್ಯಕ್ತಿಯನ್ನು ಮದುವೆಯಾಗುತ್ತಾರಂತೆ
ಅನುಷ್ಕಾ ಶೆಟ್ಟಿ ಯಾವಾಗ ಮದುವೆಯಾಗುತ್ತಾರೆ ಗೊತ್ತಾ? ಭವಿಷ್ಯ ನುಡಿದ ಜ್ಯೋತಿಷಿ..!   title=
ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಜ್ಯೋತಿಷಿ ಭವಿಷ್ಯ

ನವದೆಹಲಿ: ಟಾಲಿವುಡ್ ಚಿತ್ರರಂಗದ ಚೆಲುವೆ, ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ ಮದುವೆ(Anushka Shettys Marriage) ಬಗ್ಗೆ ಹಿಂದಿನಿಂದಲೂ ಗಾಸಿಪ್ ಗಳು ಕೇಳಿಬರುತ್ತಿವೆ. ಪ್ರತಿಬಾರಿಯೂ ಮದುವೆ ಬಗ್ಗೆ ಕೇಳಿದಾಗ ಸದ್ಯಕ್ಕಿಲ್ಲ ಅಂತಲೇ ನಟಿ ಪ್ರತಿಕ್ರಿಯಿಸುತ್ತಿದ್ದರು. ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಹರಡಿದಷ್ಟು ಸುದ್ದಿಗಳು ಮತ್ತ್ಯಾವ ನಟಿಯರ ಬಗ್ಗೆಯೂ ಹರಡಿಲ್ಲ. ತಮ್ಮ ನೆಚ್ಚಿನ ನಟಿಯ ಮದುವೆ ಯಾವಾಗ ಆಗುತ್ತೆ ಅಂತಾ ಕಾಯುತ್ತಿರುವ ಅಭಿಮಾನಿಗಳ ಕುತೂಹಲವಿಗ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ಕಾರಣ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಾರಂತೆ.

ಬಾಹುಬಲಿ ಮೂಲಕ ಫ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್(Prabhas) ಅವರೊಂದಿಗೆ ಅನುಷ್ಕಾ ಮದುವೆಯಾಗಲಿದ್ದಾರೆಂದು ಈ ಹಿಂದೆ ಗಾಳಿಸುದ್ದಿಗಳು ಹರಡಿದ್ದವು. ಆದರೆ ಈ ಬಗ್ಗೆ ಸ್ವತಃ ನಟ-ನಟಿಯರೇ ಸ್ಪಷ್ಟನೆ ನೀಡಿ ಈ ಸುದ್ದಿಗಳನ್ನು ಅಲ್ಲಗಳೆದಿದ್ದರು. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ, ನಮ್ಮ ಮದುವೆ ಬಗ್ಗೆ ಹರಡಿರುವ ಸುದ್ದಿಗಳು ಸುಳ್ಳು ಅಂತಾ ಹೇಳಿಕೊಂಡಿದ್ದರು. ಆದರೆ ಅಭಿಮಾನಿಗಳು ಮಾತ್ರ ಇವರಿಬ್ಬರೂ ಮದುವೆಯಾಗುತ್ತಾರೆಂದು ಈಗಲೂ ನಂಬಿದ್ದಾರೆ. ಪ್ರಭಾಸ್ ಬಳಿಕ ಉದ್ಯಮಿಯೊಬ್ಬರ ಜೊತೆಗೆ ಅನುಷ್ಕಾ ಮದುವೆಯಾಗುತ್ತಾರೆಂದು ದೊಡ್ಡ ಸುದ್ದಿಯಾಗಿತ್ತು. ಆದರೆ ಇದು ಕೂಡ ಸುಳ್ಳು ಎಂದು ಸ್ವತಃ ನಟಿಯೇ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ವಿಚ್ಚೇದನದ ವದಂತಿ ಬೆನ್ನಲ್ಲೇ ನಾಗರ್ಜುನ್, ನಾಗಾಚೈತನ್ಯರ ಪಾರ್ಟಿ ತಪ್ಪಿಸಿಕೊಂಡ ಸಮಂತಾ

ಅನುಷ್ಕಾ(Anushka shetty) ಅಂತಿಮವಾಗಿ 2020ರಲ್ಲಿ ತೆರೆಕಂಡ ‘ಸೈಲೆನ್ಸ್’ ಚಿತ್ರದಲ್ಲಿ ಮಿಂಚಿದ್ದರು. ಆದರೆ ಈ ಸಿನಿಮಾ ಫ್ಲಾಪ್ ಆಯಿತು. ಮತ್ತೊಂದೆಡೆ ಜಾತಿರತ್ನಲು ಖ್ಯಾತಿಯ ನವೀನ್ ಪೋಲಿಸೆಟ್ಟಿ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈವರೆಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣ ಚಿತ್ರ ನಿಂತು ಹೋಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಲ್ಲದೆ ಅನುಷ್ಕಾ ಶೆಟ್ಟಿ ಈಗ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲವಂತೆ. ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡದಿರುವ ಕಾರಣ ನಟಿಯ ಮದುವೆಯ ಬಗ್ಗೆ ಮತ್ತೊಮ್ಮೆ ವದಂತಿಗಳು ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ಸದ್ದು ಮಾಡುತ್ತಿವೆ.    

ಈ ಮಧ್ಯೆ ಅನುಷ್ಕಾ ಶೆಟ್ಟಿ(Anushka shetty) ಮದುವೆ ಬಗ್ಗೆ ಪ್ರಮುಖ ಜೋತಿಷಿ(Celebrity Astrologer)ಯೊಬ್ಬರು ಭವಿಷ್ಯ ನುಡಿದಿದ್ದಾರಂತೆ. ಪಂಡಿತ್ ಜಗನ್ನಾಥ್ ಗುರೂಜಿ ಎಂಬುವರು ನಟಿ ಮದುವೆ ಬಗ್ಗೆ ನೀಡಿರುವ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಪ್ರಕಾರ ಅನುಷ್ಕಾ ಮದುವೆ 2023ರೊಳಗೆ ನಡೆಯುತ್ತದಂತೆ. ಅನುಷ್ಕಾ ವೃತ್ತಿಜೀವನದಲ್ಲಿ ತುಂಬಾ ಸಿನ್ಸಿಯರ್ ಆಗಿದ್ದಾರೆ. ಅವರ ಮುಖಭಾವ ನೋಡಿದರೆ ಸಿನಿಮಾ ಉದ್ಯಮದ ವ್ಯಕ್ತಿಗಿಂತ ಅನುಷ್ಕಾ ಹೊರಗಿನ ವ್ಯಕ್ತಿಯನ್ನೇ ಮದುವೆಯಾಗುತ್ತೆಂದು ಈ ಜ್ಯೋತಿಷಿಗಳು ಭವಿಷ್ಯ ಹೇಳಿದ್ದಾರಂತೆ.

ಇದನ್ನೂ ಓದಿ: ಕೊನೆಗೂ ತನ್ನ ಸುದೀರ್ಘ ಸಂಬಂಧದ ಬಗ್ಗೆ ಬಾಯ್ಬಿಟ್ಟ ಸಲ್ಮಾನ್ ಖಾನ್, ಹೆಸರು ಯಾರದ್ದು ಗೊತ್ತಾ?

‘ನಟಿ ಅನುಷ್ಕಾ ಶೆಟ್ಟಿಯವರದು Down to Earth ವ್ಯಕ್ತಿತ್ವ. ಅವರಲ್ಲಿ ಕೊಂಚವೂ ಅಂಹಕಾರವಿಲ್ಲ.  2023ರೊಳಗೆ ಅವರ ಮದುವೆ ನಡೆಯುತ್ತದೆ’ ಅಂತಾ ಪಂಡಿತರು ಭವಿಷ್ಯ ಹೇಳಿದ್ದಾರೆ. ಹೀಗಾಗಿ ಈ ಜ್ಯೋತಿಷಿಗಳು ನುಡಿದಿರುವ ಭವಿಷ್ಯ ಏನಾಗುತ್ತೆ ಅನ್ನೋ ಕುತೂಹಲ ಮೂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News