Kareena Kapoor: ‘ಹೀಗೆ ಮಾಡಿದರೆ ವಿಚ್ಛೇದನ ಪಡೆಯುತ್ತೇನೆ’ ಎಂದು ಕರೀನಾ ಕಪೂರ್ ಹೇಳಿದಾಗ..!

ಆರ್.ಬಲ್ಕಿ ನಿರ್ದೇಶನದ ಕಿ ಅಂಡ್ ಕಾ(Ki & Ka) ಸಿನಿಮಾದಲ್ಲಿ ಅರ್ಜುನ್ ಕಪೂರ್ ಜೊತೆಗೆ ಕರೀನಾ ಕಪೂರ್ ತುಂಬಾ ಬೋಲ್ಡ್ ಆಗಿ ನಟಿಸಿದ್ದರು.

Written by - Puttaraj K Alur | Last Updated : Oct 26, 2021, 05:24 PM IST
  • ಅರ್ಜುನ್ ಕಪೂರ್ ಜೊತೆ ಕಿ ಅಂಡ್ ಕಾ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಕರೀನಾ ಕಪೂರ್
  • ಚಿತ್ರದ ಪ್ರಚಾರದ ವೇಳೆ ಅರ್ಜುನ್ ಕಪೂರ್ ಗೆ ಕಿಸ್ ಮಾಡಲು ಕರೀನಾ ನಿರಾಕರಿಸಿದ್ದರು
  • ಅರ್ಜುನ್ ಕಪೂರ್ ಗೆ ಕಿಸ್ ಮಾಡಿದರೆ ನಾನು ವಿಚ್ಛೇದನ ಪಡೆಯಬೇಕಾಗುತ್ತದೆ ಎಂದು ನಟಿ ಹೇಳಿದ್ದರು
Kareena Kapoor: ‘ಹೀಗೆ ಮಾಡಿದರೆ ವಿಚ್ಛೇದನ ಪಡೆಯುತ್ತೇನೆ’ ಎಂದು ಕರೀನಾ ಕಪೂರ್ ಹೇಳಿದಾಗ..! title=
ಬಾಲಿವುಡ್ ನಟಿ ಕರೀನಾ ಕಪೂರ್ ದಂಪತಿ

ನವದೆಹಲಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್(Kareena Kapoor and Saif Ali Khan)ದೀರ್ಘಕಾಲ ಒಟ್ಟಿಗೆ ಇದ್ದಾರೆ. ‘ತಶನ್’ ಚಿತ್ರದ ಮೂಲಕ ಆರಂಭವಾದ ಈ ಜೋಡಿಯ ಪ್ರೇಮಕಥೆ ಇಂದಿಗೂ ಮುಂದುವರಿದಿದೆ. ಇವರಿಬ್ಬರೂ ಈಗ ಎರಡು ಮಕ್ಕಳ ಪೋಷಕರಾಗಿದ್ದಾರೆ. ಅವರ ಕಣ್ಣುಗಳಲ್ಲಿನ ಪ್ರೀತಿ ಹಿಂದಿನಂತೆಯೇ ಇಂದಿಗೂ ಗೋಚರಿಸುತ್ತದೆ. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲು ಬಯಸುವುದಿಲ್ಲ. ಇದಕ್ಕಾಗಿಯೇ ಕರೀನಾ ಒಮ್ಮೆ ಎಲ್ಲರ ಮುಂದೆ ಅರ್ಜುನ್ ಕಪೂರ್ ಗೆ ಚುಂಬಿಸಲು ನಿರಾಕರಿಸಿದ್ದರು.

ಕರೀನಾರ ಬೋಲ್ಡ್ ಸಿನಿಮಾ

ಸೈಫ್ ಮತ್ತು ಕರೀನಾ ಮದುವೆಯ ನಂತರ ತಮ್ಮ ಸಿನಿ ವೃತ್ತಿಯನ್ನು ಬಿಡಲಿಲ್ಲ. ಇಬ್ಬರು ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ಒಂದೆಡೆ ಸೈಫ್ ತಮ್ಮ ಸಿನಿಮಾಗಳಲ್ಲಿ ಪ್ರಯೋಗ ಆರಂಭಿಸಿದರೆ, ಇನ್ನೊಂದೆಡೆ ಕರೀನಾ ಆಯ್ಕೆಯೂ ಬದಲಾಯಿತು. ಬೋಲ್ಡ್ ಸ್ಟೆಪ್ಸ್ ಹಾಕಿದ ಕರೀನಾ ಮದುವೆಯ ನಂತರ ‘ಕಿ ಅಂಡ್ ಕಾ’  ಚಿತ್ರ(Ki & Ka Film)ಕ್ಕೆ ಸಹಿ ಹಾಕಿದ್ದರು. ಈ ಚಿತ್ರದಲ್ಲಿ ನಟ ಅರ್ಜುನ್ ಕಪೂರ್(Arjun Kapoor) ಜೊತೆ ಬೇಬೂ ತುಂಬಾ ಬೋಲ್ಡ್ ಆಗಿ ಕಾಣಸಿಕೊಂಡಿದ್ದರು. ಅಭಿಮಾನಿಗಳು ಕೂಡ ಈ ಜೋಡಿಯನ್ನು ಇಷ್ಟಪಟ್ಟಿದ್ದರು.

ಇದನ್ನೂ ಓದಿ: ಆರ್ಯಾನ್ ಖಾನ್ ಜೊತೆ ಸಿಗರೇಟ್ ವಿಚಾರ ಮಾತನಾಡುತ್ತಿದ್ದೆ ಎಂದ ಅನನ್ಯಾ ಪಾಂಡೆ

ಅರ್ಜುನ್ ಕಪೂರ್ ಗೆ ಕಿಸ್ ಮಾಡಲು ನೋ ಎಂದ ಕರೀನಾ..!

ಆರ್.ಬಲ್ಕಿ ನಿರ್ದೇಶನದ ಕಿ ಅಂಡ್ ಕಾ(Ki & Ka) ಸಿನಿಮಾದಲ್ಲಿ ಅರ್ಜುನ್ ಕಪೂರ್ ಜೊತೆಗೆ ಕರೀನಾ ಕಪೂರ್(Kareena Kapoor) ತುಂಬಾ ಬೋಲ್ಡ್ ಆಗಿ ನಟಿಸಿದ್ದರು. ಇದರಲ್ಲಿ ಬೇಬೂ ಅರ್ಜುನ್ ಕಪೂರ್ ಜೊತೆ ಸಾಕಷ್ಟು ಚುಂಬನದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಮದುವೆಯಾಗಿ ಇಬ್ಬರು ಮಕ್ಕಳ ತಾಯಿಯಾದ ನಂತರ ಕರೀನಾರ ಈ ಲುಕ್ ನೋಡಿ ಎಲ್ಲರೂ ಬೆಚ್ಚಿ ಬಿದ್ದಿದ್ದರು. ಚಿತ್ರದ ಪ್ರಚಾರದ ಸಂದರ್ಭದಲ್ಲಿ ಕರೀನಾಗೆ ಅರ್ಜುನ್ ಕಪೂರ್ ಅವರಿಗೆ ಕಿಸ್ ಮಾಡಲು ಕೇಳಲಾಗಿತ್ತು. ಇದಕ್ಕೆ ಅಸಮಾಧಾನಗೊಂಡ ಕರೀನಾ ನಾನು ಅರ್ಜುನ್‌ಗೆ ಕಿಸ್ ಮಾಡುವುದಿಲ್ಲ ಅಂತಾ ಖಂಡತುಂಡವಾಗಿ ಹೇಳಿಬಿಟ್ಟಿದ್ದರು. ‘ಒಂದು ವೇಳೆ ನಾನು ಅರ್ಜುನ್ ಕಪೂರ್ ಗೆ ಕಿಸ್ ಮಾಡಿದರೆ ವಿಚ್ಛೇದನ(Kareena Kapoor Divorce) ಪಡೆಯಬೇಕಾಗುತ್ತದೆ’ ಅಂತಾ ಎಲ್ಲರ ಎದುರೇ ಕರೀನಾ ಹೇಳಿದ್ದರು.

ಇದನ್ನೂ ಓದಿ: ಯಶ್, ವಿಜಯ್ ದೇವರಕೊಂಡ, ಅವರನ್ನು ಹಿಂದಿಕ್ಕಿ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ರಶ್ಮಿಕಾ ಮಂದಣ್ಣ

ಸೈಫ್ ಮತ್ತು ಕರೀನಾ ನಡುವೆ 10 ವರ್ಷಗಳ ವ್ಯತ್ಯಾಸ

ಕಿ ಅಂಡ್ ಕಾ ಚಿತ್ರದ ಶೂಟಿಂಗ್ ಸಮಯದಲ್ಲಿ ಕರೀನಾ ಗರ್ಭಿಣಿಯಾಗಿದ್ದರು. ಕೆಲವು ತಿಂಗಳ ನಂತರ ಅವರು ತೈಮೂರ್ ಗೆ ಜನ್ಮ ನೀಡಿದರು. ಕರೀನಾ ಮತ್ತು ಸೈಫ್ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ. ಇದು ಅವರ ಸಂಬಂಧ ಮತ್ತು ಪ್ರೀತಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಆದರೆ 10 ವರ್ಷಗಳ ಅಂತರವಿದ್ದರೂ ಮೊದಲ ಪತ್ನಿಯಿಂದ ದೂರವಾದ ಸೈಫ್ ಜೊತೆ ಕರೀನಾ ಮದುವೆಯಾಗಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News