Vijay Prakash : 'ರಿಚ್ಮಂಡ್ ಗ್ರಾಬ್ರಿಯಲ್ ಯುನಿವರ್ಸಿಟಿಯಿಂದ ಗಾಯಕ ವಿಜಯ್ ಪ್ರಕಾಶ್‌ಗೆ ಗೌರವ ಡಾಕ್ಟರೇಟ್

Vijay Prakash : ಜನಪ್ರಿಯ ಬಹುಭಾಷಾ ಗಾಯಕ ವಿಜಯ್‌ ಪ್ರಕಾಶ್‌ ಅವರಿಗೆ ಕೆನಡಾದ ಟೊರೆಂಟೊದ ರಿಚ್ಮಂಡ್‌ ಗ್ಯಾಬ್ರಿಯಲ್‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ. 

Written by - Zee Kannada News Desk | Last Updated : Apr 22, 2024, 07:12 PM IST
  • ಜೈ ಹೋ ಹಾಡಿಗೆ 2008 ರಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.
  • ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆಗೆ ಕೆನಡಾದ ರಿಚ್ಮಂಡ್ ಗ್ರಾಬ್ರಿಯಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್‌ ನೀಡಿದ್ ಗೌರವಿಸಿದೆ.
  • ಇವರ ಜತೆಗೆ ತಮಿಳು ಗಾಯಕ ಶ್ರೀನಿವಾಸ್‌ ಅವರಿಗೂ ಗೌರವ ಡಾಕ್ಟರೇಟ್‌ ನೀಡಲಾಗಿದೆ.
Vijay Prakash : 'ರಿಚ್ಮಂಡ್ ಗ್ರಾಬ್ರಿಯಲ್ ಯುನಿವರ್ಸಿಟಿಯಿಂದ ಗಾಯಕ ವಿಜಯ್ ಪ್ರಕಾಶ್‌ಗೆ ಗೌರವ ಡಾಕ್ಟರೇಟ್ title=

ಹಿಂದಿ ಸೇರಿದಂತೆ, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಡುಗಳಲ್ಲಿ ಹಾಡುವ ಮೂಲಕ ತಮ್ಮದೇ ಆದ ಛಾಪನ್ನು ಮೂಡಿಸಿರುವ ವಿಜಯಪ್ರಕಾಶ್ ಹಲವಾರು ಹಾಡುಗಳ ಮೂಲಕ ಜನಮನ ಸೆಳೆದಿದ್ದರು. ಜೈ ಹೋ ಹಾಡಿನ ಮೂಲಕ ತಮ್ಮ ವೃತ್ತಿಜೀವನದಲ್ಲಿಯೇ ಹಲವಾರು ಬದಲಾವಣೆಗಳನ್ನು ಕಂಡಿದ್ದರು ವಿಜಯ ಪ್ರಕಾಶ. 

ಇದನ್ನು ಓದಿ : Earth day : ಭೂ ದಿನಕ್ಕೆ ಗೂಗಲ್ ಇಂದ ಹೊಸ ಡೂಡಲ್, ನೈಸರ್ಗಿಕ ಸೌಂದರ್ಯದ ಮೆಲುಕು

ಸಂಗೀತ ಕ್ಷೇತ್ರದಲ್ಲಿ ಇವರ ಸಾಧನೆಗೆ ಕೆನಡಾದ ರಿಚ್ಮಂಡ್ ಗ್ರಾಬ್ರಿಯಲ್ ಯುನಿವರ್ಸಿಟಿಯಿಂದ ಡಾಕ್ಟರೇಟ್‌ ನೀಡಿದ್ ಗೌರವಿಸಿದೆ. ಇವರ ಜತೆಗೆ  ತಮಿಳು ಗಾಯಕ ಶ್ರೀನಿವಾಸ್‌ ಅವರಿಗೂ ಗೌರವ ಡಾಕ್ಟರೇಟ್‌ ನೀಡಲಾಗಿದೆ. ಕೆನಡಾದ ರಿಚ್ಮಂಡ್ ಗ್ರಾಬ್ರಿಯಲ್ ಯುನಿವರ್ಸಿಟಿ ಸಂಗೀತ ಕಲಾ ಸಂಸ್ಥೆ ಗಾಯಕ  ವಿಜಯ್ ಪ್ರಕಾಶ್  ಅವರ ಸಾಧನೆಗೆ ಮೆಚ್ಚಿ ಡಾಕ್ಟರೇಟ್ ನೀಡಿ ಗೌರವಿಸಿದೆ.ಇಷ್ಟು ದಿನ ಗಾಯಕ  ವಿಜಯ್ ಪ್ರಕಾಶ್ ಆಗಿದ್ದ ಇವರು ಇನ್ಮುಂದೆ  ಡಾ ವಿಜಯ್ ಪ್ರಕಾಶ್ ಜನಮನ ಸೆಳೆಯಲಿದ್ದಾರೆ. 

ಮೂಲತಃ ವಿಜಯ ಪ್ರಕಾಶ ಮೈಸೂರಿನವರು.  ಭಾರತೀಯ ಹಿನ್ನೆಲೆ ಗಾಯಕ ಮತ್ತು ಕರ್ನಾಟಕದ ಸಂಗೀತ ನಿರ್ದೇಶಕರಾಗಿಯೂ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಕನ್ನಡ ಸಂಗೀತ ಮಾತ್ರವಲ್ಲದೆ, ಹಲವಾರು ಭಾಷೆಗಳಲ್ಲಿ ಹಾಡುವ ಮೂಲಕ ಸಂಗೀತ ರಂಗವನ್ನೆ ಉತ್ತುಂಗಕ್ಕೆ ತಲುಪಿಸದ್ದಾರೆ. 
 
ಜೈ ಹೋ ಹಾಡಿಗೆ 2008 ರಲ್ಲಿ ಅತ್ಯುತ್ತಮ ಮೂಲ ಗೀತೆಗಾಗಿ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಹಾಡಿನ ನಂತರ ತಮ್ಮ ವೃತ್ತಿ ಜೀವನವೇ ಬದಲಾಗುವಂತೆ ಮಾಡಿದ್ದೂ ಈ ಹಾಡು. ಹಿಂದಿಯ 'ಸರಗಮಪ' ಸೇರದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಗಮನಸೆಳೆದಿದ್ದ ಗಾಯಕ ವಿಜಯ್ ಪ್ರಕಾಶ್ ಅವರು ಸಾಕಷ್ಟು ಹಿಂದಿಯ ಆಲ್ಬಂ ಸಾಂಗ್‌ಗಳಿಗೂ ಧ್ವನಿಯಾಗಿದ್ದಾರೆ.

ಇದನ್ನು ಓದಿ : ಈ ಯುವಕನಿಗಾಗಿ ಆಂಕರ್ ಅನುಶ್ರೀ ಜೀವನ ಮುಡಿಪು !ನಿರೂಪಕಿಯ ಯಶಸ್ಸಿನಲ್ಲಿ ಈತನದ್ದೂ ಇದೆ ಬಹು ಪಾಲು

ಭಾರತದ ಅಲ್ಲದೆ ಕನ್ನಡದ ಗಾಯಕ ವಿಜಯ ಪ್ರಕಾಶ್, ಅದರಲ್ಲೂ ಕನ್ನಡದ ಗಾಯಕ ಎನ್ನುವದೇ ಒಂದು ಹೆಮ್ಮೆಯ ಸಂಗತಿ ಇವರಿಗೆ ಕೆನಡಾದ  ರಿಚ್ಮಂಡ್ ಗ್ರಾಬ್ರಿಯಲ್ ಯುನಿವರ್ಸಿಟಿ ಸಂಗೀತ ಕಲಾ ಸಂಸ್ಥೆ ಗಾಯಕ  ವಿಜಯ್ ಪ್ರಕಾಶ್ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಿದ್ದ, ನಮಗೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News