ʼಹೃದಯವಿದು ಮೌನ, ನರಳುತಿದೆ ಪ್ರಾಣʼ..! ಖುಷಿ ಸಿನಿಮಾದ ಲವ್‌ ಫೆಲ್ಯೂರ್‌ ಸಾಂಗ್‌ ಔಟ್‌

Hrudayavidu Maounaa song : ʼಖುಷಿʼ ಚಿತ್ರತಂಡ ʼಹೃದಯವಿದು ಮೌನ, ನರಳುತಿದೆ ಪ್ರಾಣʼ ಎನ್ನುವ ಹಾಡನ್ನು ರಿಲೀಸ್‌ ಮಾಡಿದೆ. ಲಿರೀಕಲ್‌ ಸಾಂಗ್‌ ನೋಡಿದ್ರೆ ಇದೋಂದು ಲವ್‌ ಫೆಲ್ಯೂರ್‌ ಹಾಡು ಅಂತ ಗೊತ್ತಾಗುತ್ತದೆ. 

Written by - Krishna N K | Last Updated : Aug 18, 2023, 12:59 PM IST
  • ಬಹು ನಿರೀಕ್ಷಿತ ರೋಮ್ಯಾಂಟಿಕ್ ಸಿನಿಮಾ 'ಖುಷಿ' ಸಿನಿಮಾದ ಹಾರ್ಟ್‌ ಬ್ರೇಕಿಂಗ್‌ ಸಾಂಗ್‌ ಬಿಡುಗಡೆ.
  • ʼಖುಷಿʼ ಚಿತ್ರತಂಡ ʼಹೃದಯವಿದು ಮೌನ, ನರಳುತಿದೆ ಪ್ರಾಣʼ ಎನ್ನುವ ಹಾಡನ್ನು ರಿಲೀಸ್‌ ಮಾಡಿದೆ.
  • ಲಿರೀಕಲ್‌ ಸಾಂಗ್‌ ನೋಡಿದ್ರೆ ಇದೋಂದು ಲವ್‌ ಫೆಲ್ಯೂರ್‌ ಹಾಡು ಅಂತ ಗೊತ್ತಾಗುತ್ತದೆ.
ʼಹೃದಯವಿದು ಮೌನ, ನರಳುತಿದೆ ಪ್ರಾಣʼ..! ಖುಷಿ ಸಿನಿಮಾದ ಲವ್‌ ಫೆಲ್ಯೂರ್‌ ಸಾಂಗ್‌ ಔಟ್‌ title=

Kushi movie song : ಟಾಲಿವುಡ್‌ ನಟ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅಭಿನಯದ ಬಹು ನಿರೀಕ್ಷಿತ ರೋಮ್ಯಾಂಟಿಕ್ ಸಿನಿಮಾ 'ಖುಷಿ' ಸಿನಿಮಾದ ಹಾರ್ಟ್‌ ಬ್ರೇಕಿಂಗ್‌ ಸಾಂಗ್‌ ಒಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಟ್ರೈಲರ್ ಮೂಲಕ ಗಮನಸೆಳೆದಿದ್ದ ಚಿತ್ರ ಇದೀಗ ಹಾಡುಗಳ ಮೂಲಕ ಪ್ರೇಕ್ಷಕರಿಂದ ಅಪಾರ ಪ್ರೀತಿಯನ್ನು ಗಳಿಸುತ್ತಿದೆ.

ಇಂದು ʼಖುಷಿʼ ಚಿತ್ರತಂಡ ʼಹೃದಯವಿದು ಮೌನ, ನರಳುತಿದೆ ಪ್ರಾಣʼ ಎನ್ನುವ ಹಾಡನ್ನು ರಿಲೀಸ್‌ ಮಾಡಿದೆ. ಲಿರೀಕಲ್‌ ಸಾಂಗ್‌ ನೋಡಿದ್ರೆ ಇದೋಂದು ಲವ್‌ ಫೆಲ್ಯೂರ್‌ ಹಾಡು ಅಂತ ಗೊತ್ತಾಗುತ್ತದೆ. ಇದಕ್ಕೂ ಮುನ್ನ, ನಿರ್ಮಾಪಕರು ಸ್ವಾತಂತ್ರ್ಯ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಯೋಜಿಸಿದ್ದರು. ಇದೀಗ ಚಿತ್ರದ ನಾಲ್ಕನೇ ಸಿಂಗಲ್ ಬಿಡುಗಡೆ ಮಾಡಿದ್ದಾರೆ.

 

ಇದನ್ನೂ ಓದಿ: ಚಂದನ್ ಶೆಟ್ಟಿ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್‌ : ವರಮಹಾಲಕ್ಷ್ಮಿಹಬ್ಬಕ್ಕೆ ಸರ್‍ಪ್ರೈಸ್.!

ಈ ಹಾಡಿಗೂ ಮುನ್ನ ಬಿಡುಗಡೆಯಾದ 3 ಹಾಡುಗಳು 'ಖುಷಿ' ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದವು. ಸಧ್ಯ ʼಹೃದಯವಿದು ಮೌನ, ನರಳುತಿದೆ ಪ್ರಾಣʼ ಸಾಂಗ್‌ ಭರವಸೆಯ ಟ್ರ್ಯಾಕ್ ಆಗಿದ್ದು, ಸಂಪೂರ್ಣವಾಗಿ ಹೃದಯಸ್ಪರ್ಶಿಯಾಗಿದೆ. ಈ ಹಾಡಿನ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರು ಭಾವನಾತ್ಮಕ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದು, ಲವ್‌ ಫೆಲ್ಯೂರ್‌ಗಳಿಗೆ ಇಷ್ಟವಾಗದೇ ಇರದು.

ಇನ್ನು ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಪೋಸ್ಟ್‌ ಹಂಚಿಕೊಂಡಿದ್ದಾರೆ. ಖುಷಿ ನಾಲ್ಕನೇ ಸಿಂಗಲ್ ಈಗ ಔಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಾಡನ್ನು ಹರಿಚರಣ್‌ ಮತ್ತು ಭಾವನಾ ಅವರು ಹಾಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್‌ ಅವರು ಸಾಹಿತ್ಯ ಬರೆದಿದ್ದಾರೆ. ಹೇಶಮ್ ಅಬ್ದುಲ್ ವಹಾಬ್ ಸಂಗೀತ ನೀಡಿದ್ದಾರೆ. ಶಿವ ನಿರ್ವಾಣ ಬರೆದು ನಿರ್ದೇಶಿಸಿರುವ ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News