ಸಿನಿಮಾಗಿಂತ ರೋಚಕವಾಗಿದೆ ವಸಿಷ್ಠ ಸಿಂಹ- ಹರಿಪ್ರಿಯಾ ಲವ್ ಸ್ಟೋರಿ..

Vasishta Simha Haripriya Love Story: ಪ್ರೀತಿಯಲ್ಲಿ ಬಿದ್ದನಂತರ  ವಸಿಷ್ಠ ಸಿಂಹ, ಹರಿಪ್ರಿಯಾ ಒಬ್ಬರಿಗೆ ಒಬ್ಬರು ಅರ್ಥ ಮಾಡಿಕೊಂಡು ಈಗ ಮದುವೆ ಎಂಬ ಬಂಧನಕ್ಕೆ ಒಳಗಾಗಲು ರೆಡಿಯಾಗಿದ್ದಾರೆ.  ಅಲ್ಲದೆ ಇತ್ತೀಚಿಗಷ್ಟೇ ಈ ಜೋಡಿ ಮನೆಯವರ ಸಮ್ಮುಖದಲ್ಲಿ  ಕಲರ್ ಪುಲ್ ಆಗಿ  ಉಂಗುರ ಬದಲಿಸಿ ಕೊಳ್ಳುವ ಮೂಲಕ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ.

Written by - YASHODHA POOJARI | Edited by - Yashaswini V | Last Updated : Dec 9, 2022, 01:42 PM IST
  • ಎವರ್ ಸಿನಿಮಾದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅಭಿನಯಿಸುತ್ತಿದ್ದಾರೆ.
  • ಈ ಸಿನಿಮಾಗೂ ಮುಂಚೆ ಹರಿಪ್ರಿಯಾ, ವಸಿಷ್ಠ ಸಿಂಹ ಅವರಿಗೆ ಅಷ್ಟೊಂದು ಸ್ನೇಹ ಸಂಬಂಧ ಇರಲಿಲ್ಲ.
  • ಯಾವಾಗ ಈ ಚಿತ್ರದಲ್ಲಿ ಒಟ್ಟಿಗೆ ನಟಿಸೋಕ್ಕೆ ಶುರು ಮಾಡಿದರೋ ಆಗ ಇವರಿಬ್ಬ ನಡುವೆ ಸ್ನೇಹ ಶುರುವಾಯಿತು.
ಸಿನಿಮಾಗಿಂತ ರೋಚಕವಾಗಿದೆ ವಸಿಷ್ಠ ಸಿಂಹ- ಹರಿಪ್ರಿಯಾ ಲವ್ ಸ್ಟೋರಿ.. title=
Vasishta Simha Haripriya Love Story

Vasishta Simha Haripriya Love Story: ಕನ್ನಡ ಚಿತ್ರರಂಗದಲ್ಲಿ ಪ್ರಣಯ ಪಕ್ಷಿಗಳಂತೆ ಸ್ವಚ್ಛಂದವಾಗಿ ಓಡಾಡುತ್ತಿರೋ ಲವ್ ಬರ್ಡ್ಸ್ ತಾರ ಜೋಡಿ ಅಂದ್ರೆ ಕಂಚಿನ ಕಂಠದ ವಸಿಷ್ಠ ಸಿಂಹ ಮತ್ತು ನೀರ್ ದೋಸೆ ಬೆಡಗಿ ಹರಿಪ್ರಿಯಾ.‌ ಈ ಜೋಡಿ ನಡುವೆ ವಿಶಿಷ್ಟ ಪ್ರೇಮ ಕಥೆ  ಆರಂಭವಾಗಿರುವ ಸುದ್ದಿ ಸಖತ್ ವೈರಲ್ ಆಗಿತ್ತು. ಏತನ್ಮಧ್ಯೆ, ಈ ಜೋಡಿ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಆಗಿದೆ. ಎಂಗೇಜ್ಮೆಂಟ್ ಮಾಡಿಕೊಂಡ ಬಳಿಕ ಈ ಲವ್ ಬರ್ಡ್ಸ್ ಗಳು ತಾವು ಒಟ್ಟಿಗೆ ನಟಿಸಿರೋ ತಮ್ಮ ಪ್ರೀತಿಗೆ ಕಾರಣವಾದ ಎವರ್  ಚಿತ್ರದ ಕನ್ನಡ ರಿಮೇಕ್  ಚಿತ್ರಕ್ಕೆ  ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಒಟ್ಟಿಗೆ ತಮ್ಮ ಪಾತ್ರಗಳಿಗೆ ಡಬ್ಬಿಂಗ್ ಮಾಡಿದ್ದಾರೆ.

ಬೆಂಗಳೂರಿನ ಸ್ಟುಡಿಯೋವೊಂದರಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಒಟ್ಟಿಗೆ ಡಬ್ಬಿಂಗ್ ಮಾಡಿದ್ದಾರೆ. ಇನ್ನು ವಸಿಷ್ಠ ಸಿಂಹ ಜೊತೆ ಹರಿಪ್ರಿಯಾಗೆ ಪ್ರೀತಿ ಶುರುವಾಗೋದಕ್ಕೆ ಯಾರು ಕಾರಣ ಅಂತಾ ಸ್ವತಃ ಹರಿಪ್ರಿಯಾ ರಿವೀಲ್ ಮಾಡಿದರು. ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರ ಮಧ್ಯೆ ಪ್ರೇಮಾಂಕುರಕ್ಕೆ ಕಾರಣ ಕ್ರಿಸ್ಟಲ್ ಅಂತೆ. ಆ ಕ್ರಿಸ್ಟಲ್ ಯಾರು ಗೊತ್ತಾ?  ಅದೇ ಒಂದು ವರ್ಷದ ಹಿಂದೆ ನಟ ವಸಿಷ್ಠ ಸಿಂಹ ಹರಿಪ್ರಿಯಾಗೆ ಗಿಫ್ಟ್ ಆಗಿ ಕೊಟ್ಟಿದ್ದ ಮುದ್ದಾದ ನಾಯಿ ಮರಿ. ವಸಿಷ್ಠ ಸಿಂಹ ಕೊಟ್ಟ ಕ್ರಿಸ್ಟಲ್‌ನ ಎದೆಯ ಮೇಲೆ ಲವ್ ಸಿಂಬಲ್ ಹೊತ್ತು ತಂದಿದೆ. ಈ ನಾಯಿಮರಿ ಗಿಫ್ಟ್‌ನಿಂದ ಸ್ನೇಹ, ಪ್ರೀತಿಯಾಗಿ ಬೆಳೆದಿದ್ದು ಅಂತ ತಮ್ಮ ಲವ್ ಸೀಕ್ರೆಟ್ ನ್ನ ಹಂಚಿಕೊಂಡಿದ್ದರು.

ಇದನ್ನೂ ಓದಿ- ಮುದ್ದಾದ ನಾಯಿ ಮರಿ ವಿಡಿಯೋ ಶೇರ್ ಮಾಡಿ Love story ಹೇಳಿದ ʻಸಿಂಹಪ್ರಿಯೆʼ

ಆದರೆ ವಸಿಷ್ಠ ಸಿಂಹ-  ಹರಿಪ್ರಿಯಾ ಪ್ರೀತಿ ಶುರುವಾಗೋದಕ್ಕೆ‌‌‌ ಮೂಲ ಕಾರಣ ಕನ್ನಡಕ್ಕೆ ರಿಮೇಕ್ ಆಗುತ್ತಿರುವ ಎವರ್ ಸಿನಿಮಾ ಅಂತಾ ಇವರಿಬ್ಬರ ಆಪ್ತರ ಬಳಗದಲ್ಲಿ ಹೇಳಲಾಗುತ್ತಿದೆ. ಎವರ್  ಸಿನಿಮಾದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೂ ಮುಂಚೆ ಹರಿಪ್ರಿಯಾ, ವಸಿಷ್ಠ ಸಿಂಹ ಅವರಿಗೆ ಅಷ್ಟೊಂದು ಸ್ನೇಹ ಸಂಬಂಧ ಇರಲಿಲ್ಲ. ಯಾವಾಗ ಈ ಚಿತ್ರದಲ್ಲಿ ಒಟ್ಟಿಗೆ ನಟಿಸೋಕ್ಕೆ ಶುರು ಮಾಡಿದರೋ ಆಗ ಇವರಿಬ್ಬ ನಡುವೆ ಸ್ನೇಹ ಶುರುವಾಯಿತು. ಆ ಸಮಯದಲ್ಲಿ ವಸಿಷ್ಠ ಸಿಂಹ ಹರಿಪ್ರಿಯಾಗೆ ಕ್ರಿಸ್ಟಲ್ ಹೆಸರಿನ ನಾಯಿಮರಿಯನ್ನ ಗಿಫ್ಟ್ ಆಗಿ ತಂದುಕೊಟ್ಟಿದ್ದರು. ಅಲ್ಲಿಂದ ಸ್ನೇಹದ ಜೊತೆಗೆ ಪ್ರೀತಿ ಶುರುವಾಗಿದೆ.

 
 
 
 

 
 
 
 
 
 
 
 
 
 
 

A post shared by Vasishta N Simha (@imsimhaa)

ಇದನ್ನೂ ಓದಿ- ಹರಿಪ್ರಿಯಾ ಮೂಗು ಚುಚ್ಚಿಸಿಕೊಂಡಿದ್ದೇ ವಸಿಷ್ಠ ಸಿಂಹನಿಗಾಗಿ.. ಆಗಿದ್ರೆ ಮದುವೆ ಫಿಕ್ಸ್‌ ಆಯ್ತಾ..!

ಪ್ರೀತಿಯಲ್ಲಿ ಬಿದ್ದನಂತರ  ವಸಿಷ್ಠ ಸಿಂಹ, ಹರಿಪ್ರಿಯಾ ಒಬ್ಬರಿಗೆ ಒಬ್ಬರು ಅರ್ಥ ಮಾಡಿಕೊಂಡು ಈಗ ಮದುವೆ ಎಂಬ ಬಂಧನಕ್ಕೆ ಒಳಗಾಗಲು ರೆಡಿಯಾಗಿದ್ದಾರೆ.  ಅಲ್ಲದೆ ಇತ್ತೀಚಿಗಷ್ಟೇ ಈ ಜೋಡಿ ಮನೆಯವರ ಸಮ್ಮುಖದಲ್ಲಿ  ಕಲರ್ ಪುಲ್ ಆಗಿ  ಉಂಗುರ ಬದಲಿಸಿ ಕೊಳ್ಳುವ ಮೂಲಕ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಸದ್ಯ ಈಗ ಸಿಂಹ ಪ್ರಿಯ ಜೋಡಿಯ ನಿಶ್ಚಿತಾರ್ಥದ  ಸುಂದರವಾದ ಪೋಟೋಗಳು ಹಾಗೂ ವಿಡಿಯೋ ಅವರ ಅಭಿಮಾನಿಗಳನ್ನು ಮನಸೂರೆಗೊಳ್ಳುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News