URVASHI ROUTELA: ಭಾರಿ ವೈರಲ್ ಆಗಿರುವ ಊರ್ವಶಿಯ ಈ ಹಾಡು ನೀವು ನೋಡಿ

ಖ್ಯಾತ ಬಾಲಿವುಡ್ ನಟಿ ಊರ್ವಶಿ ರೌತೆಲಾ ಅವರ ಹೊಸ ಅಲ್ಬಮ್ ಸಾಂಗ್ ವೊಂದು ಬಿಡುಗಡೆಯಾಗಿದ್ದು, ಸಾಮಾಜಿಕ ಮಾಧ್ಯಮ ಯುಟ್ಯೂಬ್ ಮೇಲೆ ಭಾರಿ ಹವಾ ಸೃಷ್ಟಿಸಿದೆ.

Last Updated : Jan 17, 2020, 07:36 PM IST
URVASHI ROUTELA: ಭಾರಿ ವೈರಲ್ ಆಗಿರುವ ಊರ್ವಶಿಯ ಈ ಹಾಡು ನೀವು ನೋಡಿ title=

ಮುಂಬೈ: ಖ್ಯಾತ ಬಾಲಿವುಡ್ ನಟಿ ಊರ್ವಶಿ ರೌತೆಲಾ ಅವರ ಹೊಸ ಅಲ್ಬಮ್ ಸಾಂಗ್ ವೊಂದು ಬಿಡುಗಡೆಯಾಗಿದ್ದು, ಸಾಮಾಜಿಕ ಮಾಧ್ಯಮ ಯುಟ್ಯೂಬ್ ಮೇಲೆ ಭಾರಿ ಹವಾ ಸೃಷ್ಟಿಸಿದೆ. ಜನವರಿ 16ರಂದು ಬಿಡುಗಡೆಯಾದ 'ಏಕ್ ಡೈಮಂಡ್ ಕಾ ಹಾರ್ ಲೇ ದೆ ಯಾರ್', ಈ ಹಾಡು ಕಳೆದ 24 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ.

ಊರ್ವಶಿ ರೌತೆಲಾ ಅವರ ಈ ಹಾಡಿನಲ್ಲಿ ಕೇವಲ ಉತ್ತಮ ಡಾನ್ಸ್ ಇರದೇ, ಅವರ ಲುಕ್ ಕೂಡ ಭಾರಿ ಬೋಲ್ಡ್ ಆಗಿ ಕಾಣಸಿಗಲಿದೆ.


ಸನಂ ರೆ, ದಿ ಗ್ರೇಟ್ ಗ್ರಾಂಡ್ ಮಸ್ತಿ, ಕಾಬಿಲ್, ಪಾಗಲ್ ಪಂತಿಗಳಂತಹ ಚಿತ್ರಗಳಲ್ಲಿ ಕಾಣಿಸಿಕೊಂಡ ಊರ್ವಶಿ ರೌತೆಲಾ ಅವರ ಗ್ರಾಮರಸ್ ಲುಕ್ ನ ಲಕ್ಷಾಂತರ ಅಭಿಮಾನಿಗಳಿದ್ದಾರೆ.

ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಅಲ್ಬಮ್ ಕುರಿತು ಮಾಹಿತಿ ನೀಡಿದ್ದಾರೆ.
ತನ್ನ ಹೊಸ ಅಲ್ಬಮ್ ನಲ್ಲಿನ ಗೆಟಪ್ ಕುರಿತು ಊರ್ವಶಿ ರೌತೆಲಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತೋರಿಸಿದ್ದಾರೆ.
ವಿಶೇಷ ಸಂದರ್ಭಗಳಲ್ಲಿ ಖ್ಯಾತ ನಟಿ ಊರ್ವಶಿ ತನ್ನ ಅಭಿಮಾನಿಗಳ ಮುಂದೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡು ಹುಚ್ಚೆಬ್ಬಿಸುತ್ತಾರೆ. 

Trending News