IMDB ಟಾಪ್ 20ರಲ್ಲಿ ʼಕಬ್ಜʼಗೆ 7ನೇ ಸ್ಥಾನ : ಉಪ್ಪಿ-ಕಿಚ್ಚನ ಚಿತ್ರದ ಮೇಲೆ ಭಾರಿ ನಿರೀಕ್ಷೆ

2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಮ್‌ಡಿಬಿ ಬಿಡುಗಡೆಮಾಡಿದೆ. ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ ಮೊದಲ ಸ್ಥಾನದಲ್ಲಿದ್ದರೆ ಕನ್ನಡದ ಏಕಮಾತ್ರ ಸಿನಿಮಾ ಕಬ್ಜಾ 7ನೇ ಸ್ಥಾನದಲ್ಲಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕಿಚ್ಚ ಸುದೀಪ್‌ ನಟನೆಯ ಕಬ್ಜಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿದೆ. 

Written by - Krishna N K | Last Updated : Jan 9, 2023, 03:45 PM IST
  • 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಮ್‌ಡಿಬಿ ಬಿಡುಗಡೆ
  • ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ ಮೊದಲ ಸ್ಥಾನದಲ್ಲಿ
  • ಕನ್ನಡದ ಏಕಮಾತ್ರ ಸಿನಿಮಾ ಕಬ್ಜಾ 7ನೇ ಸ್ಥಾನದಲ್ಲಿದೆ
IMDB ಟಾಪ್ 20ರಲ್ಲಿ ʼಕಬ್ಜʼಗೆ 7ನೇ ಸ್ಥಾನ : ಉಪ್ಪಿ-ಕಿಚ್ಚನ ಚಿತ್ರದ ಮೇಲೆ ಭಾರಿ ನಿರೀಕ್ಷೆ title=

IMDB Top 20 Movies list : 2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಮ್‌ಡಿಬಿ ಬಿಡುಗಡೆಮಾಡಿದೆ. ಬಾಲಿವುಡ್‌ ಬಾದ್‌ ಶಾ ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾ ಮೊದಲ ಸ್ಥಾನದಲ್ಲಿದ್ದರೆ ಕನ್ನಡದ ಏಕಮಾತ್ರ ಸಿನಿಮಾ ಕಬ್ಜಾ 7ನೇ ಸ್ಥಾನದಲ್ಲಿದೆ. ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಕಿಚ್ಚ ಸುದೀಪ್‌ ನಟನೆಯ ಕಬ್ಜಾ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿದೆ. 

ಅಲ್ಲು ಅರ್ಜುನ ನಟನೆಯ ʼಪುಷ್ಪಾ 2ʼ ಐಎಮ್‌ಡಿಬಿ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಪ್ರಭಾಸ್‌ ನಟನೆಯ ʼಆದಿ ಪುರುಷ್‌ʼ ಹಾಗೂ ʼಸಲಾರ್‌ʼ ಕೂಡ ತಮ್ಮ ಸ್ಥಾನವನ್ನು ಕಾಯ್ದುಕೊಂಡಿದೆ. ತಮಿಳು ನಟ ಅಜಿತ್ ಕುಮಾರ್ ಅಭಿನಯದ ʼತುನಿವುʼ, ದಳಪತಿ ವಿಜಯ್ ನಟನೆಯ ʼವಾರಿಸುʼ, ಶಾರುಖ್ ಖಾನ್ ನಟನೆಯ ʼಜವಾನ್​ʼ ಸೇರಿದಂತೆ ಈ ವರ್ಷ ಹಲವು ದೊಡ್ಡ ಬಜೆಟ್​​ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

ಇದನ್ನೂ ಓದಿ: EXCLUSIVE : ʼಪ್ಯಾನ್‌ ವರ್ಲ್ಡ್ ಸಿನಿಮಾʼಗೆ ಯಶ್‌ ತಯಾರಿ.. ಮಾಸ್ಟರ್ ಪೀಸ್‌ ಬಿಗ್‌ ಪ್ಲಾನ್‌ ರಿವೀಲ್‌..!

ಲಾಂಗ್‌ ಗ್ಯಾಪ್‌ ನಂತರ ತೆರೆಮೇಲೆ ಮಿಂಚಲು ಶಾರುಖ್ ಖಾನ್ ರೆಡಿಯಾಗಿದ್ದಾರೆ. ವಿವಾದಗಳ ನಡುವೆಯೂ ʼಪಠಾಣ್​ʼ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಎರಡನೇ ಸ್ಥಾನದಲ್ಲಿ ʼಪುಷ್ಪ 2ʼ ಸಿನಿಮಾದ ಶೂಟಿಂಗ್ ಇನ್ನೂ ಸರಿಯಾಗಿ ಆರಂಭ ಆಗಿಲ್ಲ. ಈ ಚಿತ್ರ ಈ ವರ್ಷ ತೆರೆಗೆ ಬರುತ್ತೋ ಇಲ್ಲವೋ ಗೊತ್ತಿಲ್ಲ. ಈಗಾಗಲೇ ಕೆಜೆಎಪ್‌ 2 ಮೂಲಕ ಸ್ಟಾರ್‌ ಡೈರೆಕ್ಟರ್‌ ಆಗಿ ಹೊರಹೊಮ್ಮಿರುವ ಪ್ರಶಾಂತ್‌ ನೀಲ್‌ ಪ್ರಭಾಸ್‌ ಕಾಂಬಿನೇಷನ್‌ನಲ್ಲಿ ಸಲಾರ್‌ ಸಿನಿಮಾ ತೆರೆ ಮೇಲೆ ಅಬ್ಬರಿಸಲು ಸಿದ್ಧವಾಗಿದೆ.

ಕೆಜಿಎಫ್‌ 2, ಕಾಂತಾರ ಸೇರಿದಂತೆ 2022ರಲ್ಲಿ ಕನ್ನಡದ ಹಲವು ಚಿತ್ರಗಳು ದಾಖಲೆ ನಿರ್ಮಿಸಿದ್ದರು. ಆದ್ರೆ, ಈ ವರ್ಷ ಕನ್ನಡದ ಒಂದು ಸಿನಿಮಾ ಮಾತ್ರ ಐಎಂಡಿಬಿಯ ಟಾಪ್ 20ಯಲ್ಲಿ ಕಾಣಿಸಿಕೊಂಡಿದೆ. ಉಪೇಂದ್ರ ಹಾಗೂ ಸುದೀಪ್​ ನಟನೆಯ ʼಕಬ್ಜʼ ಏಳನೇ ಸ್ಥಾನದಲ್ಲಿದೆ. ಈಗಾಗಲೇ ಈ ಚಿತ್ರದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿರುವ ಕಬ್ಜಾ ಮೇಲೆ ಭಾರಿ ನೀರಿಕ್ಷೆ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News