Prabhas Adipurush review : ರೆಬೆಲ್ ಸ್ಟಾರ್ ಪ್ರಭಾಸ್-ಬಾಲಿವುಡ್ ನಿರ್ದೇಶಕ ಓಂ ರಾವುತ್ ಕಾಂಬಿನೇಷನ್ ನಿರ್ದೇಶನದ ಚಿತ್ರ ಆದಿಪುರುಷ. ಪೌರಾಣಿಕ ಆ್ಯಕ್ಷನ್ ಹಿನ್ನೆಲೆಯಲ್ಲಿ ತಯಾರಾಗಿರುವ ಈ ಸಿನಿಮಾ ಇದೇ ತಿಂಗಳ 16ರಂದು ವಿಶ್ವದಾದ್ಯಂತ ಪ್ರೇಕ್ಷಕರ ಮುಂದೆ ಬರಲಿದೆ. ಬಿಡುಗಡೆಗೂ ಮುನ್ನವೇ ಬಾಲಿವುಡ್ ವಿಮರ್ಶನ ಎಂದು ಕೇಳಿಕೊಳ್ಳುವ ಉಮೈರ್ ಸಂಧು ಚಿತ್ರದ ಬಗ್ಗೆ ಬಹು ಕೆಟ್ಟದಾಗಿ ವಿಮರ್ಶೆ ಬರೆದುಕೊಂಡಿದ್ದಾರೆ.
ಹೌದು.. ಬಹುನಿರೀಕ್ಷಿತ ಆದಿಪುರುಷ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ರಾಘವ್ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರೆ, ಜಾನಕಿ ಪಾತ್ರದಲ್ಲಿ ಬಾಲಿವುಡ್ ಬೆಡಗಿ ಕೃತಿ ಸನನ್ ಕಾಣಿಸಿಕೊಂಡಿದ್ದಾರೆ. ಲಂಕೇಶ್ವರನಾಗಿ ಸೈಫ್ ಅಲಿ ಖಾನ್ ಅಭಿನಯಿಸಿದ್ದಾರೆ. ಈಗಾಗಲೇ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ.
ಇದನ್ನೂ ಓದಿ: ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ನಟ ಪ್ರಥಮ್; ಕಾರಣವೇನು ಗೊತ್ತಾ?
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಈ ಚಿತ್ರದ ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ತಿರುಪತಿಯಲ್ಲಿ ನಡೆದ ಪ್ರೀ ರಿಲೀಸ್ ಕಾರ್ಯಕ್ರಮ ಅಭಿಮಾನಿಗಳಿಂದ ತುಂಬಿ ತುಳುಕುತ್ತಿತ್ತು. ಆದಿಪುರುಷ ಚಿತ್ರದ ಮೂಲಕ ಪ್ರಭಾಸ್‌ಗೆ ಬ್ಲಾಕ್ ಬಸ್ಟರ್ ಹಿಟ್ ಸಿಗಲಿ ಎಂಬುದು ಅಭಿಮಾನಿಗಳ ಅಪೇಕ್ಷೆ. ಟ್ರೇಲರ್ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿರುವುದರಿಂದ ಬಿಡುಗಡೆ ದಿನಾಂಕವನ್ನು ಕಾತರದಿಂದ ಕಾಯಲಾಗುತ್ತಿದೆ.
First Review #Adipurush = 500 cr in the Dustbin 🤮. 3 Hours Torture with Fake VFX & Bad Performances by all Actors. Shame on Makers for ruining religious film.
⭐️⭐️ pic.twitter.com/FstwbV8nit
— Umair Sandhu (@UmairSandu) June 12, 2023
ಇತ್ತೀಚೆಗಷ್ಟೇ ಉಮೈರ್ ಸಂಧು ಎಂಬ ವ್ಯಕ್ತಿ ಆದಿಪುರುಷ ಮೊದಲ ವಿಮರ್ಶೆ ಎಂದು ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಸಾಗರೋತ್ತರ ಸೆನ್ಸಾರ್ ಮಂಡಳಿಯ ಸದಸ್ಯ ಎಂದು ಹೇಳಿಕೊಳ್ಳುವ ಈ ಉಮೈರ್ ಸಂಧು ಯಾವಾಗ್ಲೂ ತಮ್ಮ ಹೇಳಿಕೆಯ ಮೂಲಕ ವಿವಾದಕ್ಕೆ ಗುರಿಯಾಗುತ್ತಿದ್ದಾರೆ.
ಇದನ್ನೂ ಓದಿ: ಕೂರ್ಗನಲ್ಲಿ ಪುಟ್ಟಕ್ಕನ ಮಗಳು ಸ್ನೇಹಾ ಅಲಿಯಾಸ್ ಸಂಜನಾ ಪೋಟೋಸ್ ನೋಡಿ
ಆದಿಪುರುಷ ಚಿತ್ರದ ಮೊದಲ ವಿಮರ್ಶೆ ನೀಡಿದ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಉಮೈರ್ ಸಂಧು, 500 ಕೋಟಿ ರೂ. ತಿಪ್ಪಿಗೆ, ಮೂರು ಗಂಟೆಗಳ ಕಾಲ ಚಿತ್ರಹಿಂಸೆ.. ನಕಲಿ ವಿಎಫ್‌ಎಕ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲಾ ನಟರ ಅಭಿನಯ ತುಂಬಾ ಚೆನ್ನಾಗಿದೆ ಆದ್ರೆ, ಧಾರ್ಮಿಕ ಸಿನಿಮಾವನ್ನು ಹಾಳು ಮಾಡಿದ ನಿರ್ಮಾಪಕರಿಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ಪ್ರಭಾಸ್ ಫ್ಯಾನ್ಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.