ಈ ರೀತಿ ಮಾಡೋಕೆ ಈ ನಟಿ ಪಡೆಯುವ ಸಂಭಾವನೆ ಎಷ್ಟು ಗೊತ್ತೆ..? ತಿಳಿದ್ರೆ ಎದೆ ನಡುಗುತ್ತೆ..!

Bad News Movie : ಬಾಲಿವುಡ್‌ನ ಬೋಲ್ಡ್ ನಟಿ ತೃಪ್ತಿ ದಿಮ್ರಿ ಇದೀಗ ಬ್ಯಾಡ್ ನ್ಯೂಸ್ ಚಿತ್ರದ ಹಾಡಿನ ಮೂಲಕ ಮತ್ತೇ ಹುಡುಗರ ನಿದ್ದೆ ಕದಿಯುವ ಯತ್ನ ಮಾಡಿದ್ದಾರೆ. ನಟ ವಿಕ್ಕಿ ಕೌಶಲ್ ಟ್ರಿಪ್ತಿ ಡಿಮ್ರಿ ರೊಮ್ಯಾನ್ಸ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. ಅನಿಮಲ್‌ ಸಿನಿಮಾದ ನಂತರ ತೃಪ್ತಿ ದಿಮ್ರಿ ಮತ್ತೆ ಬೋಲ್ಡ್ ಸೀನ್ ಮಾಡಲು ತೆಗೆದುಕೊಂಡ ಹಣವೆಷ್ಟು ಗೊತ್ತಾ?  

Written by - Krishna N K | Last Updated : Jul 11, 2024, 04:02 PM IST
    • ನಟಿ ತೃಪ್ತಿ ದಿಮ್ರಿ ಇದೀಗ ಬ್ಯಾಡ್ ನ್ಯೂಸ್ ಚಿತ್ರದಲ್ಲಿ ನಟಿಸಿದ್ದಾರೆ.
    • ಈ ಸಿನಿಮಾದ ಹಾಟ್‌ ಸಾಂಗ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
    • ಬ್ಯಾಡ್‌ ನ್ಯೂಸ್‌ ಚಿತ್ರದ ರೊಮ್ಯಾಂಟಿಕ್‌ ಸಾಂಗ್‌ನಲ್ಲಿ ಬೋಲ್ಡ್‌ ಸೀನ್ಸ್‌
ಈ ರೀತಿ ಮಾಡೋಕೆ ಈ ನಟಿ ಪಡೆಯುವ ಸಂಭಾವನೆ ಎಷ್ಟು ಗೊತ್ತೆ..? ತಿಳಿದ್ರೆ ಎದೆ ನಡುಗುತ್ತೆ..!  title=
Triptii dimri, vicky kaushal,

Triptii dimri Bad news move : ನಟಿ ತ್ರಿಪ್ತಿ ಡಿಮ್ರಿ ಶೀಘ್ರದಲ್ಲೇ 'ಬ್ಯಾಡ್ ನ್ಯೂಸ್' ಮೂಲಕ ಬೆಳ್ಳಿತೆರೆಗೆ ಬರಲಿದ್ದಾರೆ. ತೃಪ್ತಿ 'ಬುಲ್ಬುಲ್' ಮತ್ತು 'ಕಾಲಾ' ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ರಣಬೀರ್ ಕಪೂರ್ ಅಭಿನಯದ ಅನಿಮಲ್‌ ಚಿತ್ರದ ಮೂಲಕ ಮುನ್ನಲೆಗೆ ಬಂದರು. ಈಗ ಮತ್ತೆ ಈ ಬ್ಯೂಟಿ ʼಬ್ಯಾಡ್ ನ್ಯೂಸ್ʼ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಅನಿಮಲ್ ಚಿತ್ರದ ಮೂಲಕ ತೃಪ್ತಿ ದಿಮ್ರಿ ರಾತ್ರೋರಾತ್ರಿ ಸ್ಟಾರ್ ಆದರು. ಈ ಸಿನಿಮಾದಲ್ಲಿ ರಣಬೀರ್ ಜೊತೆ ಬೋಲ್ಡ್ ಸೀನ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದ ನಂತರ ಆಕೆಯ ಜನಪ್ರಿಯತೆಯ ಜೊತೆಗೆ  ಸಂಭಾವನೆಯೂ ಹೆಚ್ಚಾಯಿತು. ಸಧ್ಯ ನಟಿ ‘ಬ್ಯಾಡ್ ನ್ಯೂಸ್’ ಸಿನಿಮಾದಲ್ಲಿ ಬೋಲ್ಡ್‌ ಪಾತ್ರದಲ್ಲಿ ನಟಿಸಲು ಎಷ್ಟು ಸಂಭಾವನೆ ತೆಗೆದುಕೊಂಡಿದ್ದಾರೆ ಗೊತ್ತಾ..?

ಇದನ್ನೂ ಓದಿ:ನನ್ನ ಹೊಡೆದರು, ಛೀ.. ದಪ್ಪಗಿದ್ದೀಯಾ ಅಂತ ಗೇಲಿ ಮಾಡಿದರು..! ನೋವು ತೋಡಿಕೊಂಡ ಸ್ಟಾರ್‌ ನಟಿ

ಅನಿಮಲ್ ನಂತರ ತೃಪ್ತಿ ದಿಮ್ರಿ ಈಗ 'ಬ್ಯಾಡ್ ನ್ಯೂಸ್' ಸಿನಿಮಾದ ಹಾಡಿನ ಮೂಲಕ ಸುದ್ದಿಯಲ್ಲಿದ್ದಾರೆ. ಈ ಚಿತ್ರದಲ್ಲಿ ತೃಪ್ತಿ ಮೊದಲ ಬಾರಿಗೆ ವಿಕ್ಕಿ ಕೌಶಲ್ ಜೊತೆ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೊಮ್ಯಾಂಟಿಕ್ ಸಾಂಗ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ವಿಕ್ಕಿ-ತೃಪ್ತಿ ಹಾಡಿನ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ನಟಿ ತೃಪ್ತಿ ಈಗ ಬಾಲಿವುಡ್ ನಲ್ಲಿ ಬೋಲ್ಡ್ ಬ್ಯೂಟಿಯಾಗಿ ಹೆಸರುವಾಸಿಯಾಗಿದ್ದಾರೆ. ಅನಿಮಲ್ ಚಿತ್ರದ ನಂತರ ತೃಫ್ತಿ ಡಿಮ್ರಿಗೆ ಆಫರ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಬೇಡಿಕೆ ಹೆಚ್ಚಾದಂತೆ ನಟಿಯ ಸಂಭಾವನೆಯೂ ಹೆಚ್ಚಾಗುತ್ತಿದೆ.

ಇದನ್ನೂ ಓದಿ:ಕತ್ರಿನಾ ಕೈಫ್ ಗರ್ಭಿಣಿಯೇ? ವೈರಲ್‌ ವಿಡಿಯೋದಿಂದ ರಿವೀಲ್‌ ಆಯ್ತು ಬಿಗ್‌ ಸಿಕ್ರೇಟ್!!‌

ಮಾಧ್ಯಮಗಳ ವರದಿ ಪ್ರಕಾರ ನಟಿ ತೃಪ್ತಿ ದಿಮ್ರಿ ಅನಿಮಲ್‌ ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 40 ಲಕ್ಷ ರೂ. ಸಂಭಾವನೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಸಧ್ಯ ಬ್ಯಾಡ್‌ ನ್ಯೂಸ್‌  ಚಿತ್ರಕ್ಕೆ 80 ಲಕ್ಷದಿಂದ ಒಂದು ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆದರೆ ಇದು ಅಧಿಕೃತವಲ್ಲ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News