ಮೊದಲ ಪತ್ನಿಗೆ ಡಿವೋರ್ಸ್, ಮುರಿದುಬಿತ್ತು ಎರಡನೇ ಮದುವೆಯ ಎಂಗೇಜ್ಮೆಂಟ್‌... ಈಗ ಮೂರನೇ ಮ್ಯಾರೇಜ್ʼಗೆ ರೆಡಿ ಎಂದ ಖ್ಯಾತ ಖಳನಟ!

ಎನ್‌ʼಟಿಆರ್ ಪ್ಯಾನ್ ಇಂಡಿಯಾ ಸಿನಿಮಾ 'ದೇವರ'ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾಗಳ ಹೊರತಾಗಿ, ಶೈನ್ ಟಾಮ್ ಚಾಕೊ ಕಳೆದ ಕೆಲವು ವರ್ಷಗಳಿಂದ ಪ್ರೀತಿ ಮತ್ತು ಸಂಬಂಧದ ಸಮಸ್ಯೆಗಳಿಂದ ಸುದ್ದಿಯಲ್ಲಿದ್ದಾರೆ

Written by - Bhavishya Shetty | Last Updated : Aug 4, 2024, 08:12 PM IST
    • ಮಲಯಾಳಂನ ಜನಪ್ರಿಯ ನಟ ಶೈನ್ ಟಾಮ್ ಚಾಕೊ
    • ಈಗ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ
    • ಎನ್‌ʼಟಿಆರ್ ಪ್ಯಾನ್ ಇಂಡಿಯಾ ಸಿನಿಮಾ 'ದೇವರ'ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಮೊದಲ ಪತ್ನಿಗೆ ಡಿವೋರ್ಸ್, ಮುರಿದುಬಿತ್ತು ಎರಡನೇ ಮದುವೆಯ ಎಂಗೇಜ್ಮೆಂಟ್‌... ಈಗ ಮೂರನೇ ಮ್ಯಾರೇಜ್ʼಗೆ ರೆಡಿ ಎಂದ ಖ್ಯಾತ ಖಳನಟ! title=
File Photo

Shine Tom Chacko: ಮಲಯಾಳಂನ ಜನಪ್ರಿಯ ನಟ ಶೈನ್ ಟಾಮ್ ಚಾಕೊ ಈಗ ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ದಸರಾ ಚಿತ್ರದ ಮೂಲಕ ಟಾಲಿವುಡ್‌ʼಗೆ ಹೀರೋ ಕಮ್ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಆ ನಂತರ ನಾಗ ಶೌರ್ಯ ಅವರ ರಂಗಬಲಿಯಲ್ಲಿ ವಿಲನ್ ಆಗಿ ಇಂಪ್ರೆಸ್ ಮಾಡಿದ್ದರು.

ಇದನ್ನೂ ಓದಿ: ನಟಿ ದೀಪಿಕಾ ಪಡುಕೋಣೆ ತಂಗಿಯನ್ನು ನೋಡಿದ್ದೀರಾ? ಚಂದದಲ್ಲಿ ಅಕ್ಕನನ್ನೇ ಮೀರಿಸುವಷ್ಟು ಅಂದಗಾತಿ... ಇವರು ದೇಶದ ಪ್ರಖ್ಯಾತ ಆಟಗಾರ್ತಿ!

ಪ್ರಸ್ತುತ, ಎನ್‌ʼಟಿಆರ್ ಪ್ಯಾನ್ ಇಂಡಿಯಾ ಸಿನಿಮಾ 'ದೇವರ'ದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸಿನಿಮಾಗಳ ಹೊರತಾಗಿ, ಶೈನ್ ಟಾಮ್ ಚಾಕೊ ಕಳೆದ ಕೆಲವು ವರ್ಷಗಳಿಂದ ಪ್ರೀತಿ ಮತ್ತು ಸಂಬಂಧದ ಸಮಸ್ಯೆಗಳಿಂದ ಸುದ್ದಿಯಲ್ಲಿದ್ದಾರೆ. ತನುಜಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದ ಅವರು, ಈ ವರ್ಷದ ಜನವರಿಯಲ್ಲಿ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿ. ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ನಿಶ್ಚಿತಾರ್ಥದ ಫೋಟೋಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸದ್ಯದಲ್ಲೇ ಮದುವೆ ದಿನಾಂಕ ಘೋಷಣೆಯಾಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು.

ಆದರೆ ಇಂತಹ ಘಳಿಗೆಯಲ್ಲಿ ಟಾಮ್ ಚಾಕೋ ಶಾಕಿಂಗ್ ನ್ಯೂಸ್ ನೀಡಿದ್ದು ತನುಜಾ ಜೊತೆಗಿನ ಸಂಬಂಧವು ಕೊನೆಗೊಂಡಿದೆ ಎಂದು ಬಹಿರಂಗಗೊಳಿಸಿದ್ದಾರೆ. ಅದಕ್ಕೆ ಪುಷ್ಟಿ ನೀಡುವಂತೆ ತನುಜಾ ಜೊತೆಗಿನ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಅಳಿಸಿದ್ದಾರೆ.

ಶೈನ್ ಟಾಮ್ ಚಾಕೊ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನುಜಾ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೀಗ ಮತ್ತೆ 'ಸಿಂಗಲ್' ಎಂದು ಹೇಳುವ ಮೂಲಕ ತಮ್ಮ ಬ್ರೇಕಪ್ ಸುದ್ದಿಯನ್ನು ಖಚಿತಪಡಿಸಿದ್ದಾರೆ. "ತನುಜಾ ಜೊತೆಗಿನ ನನ್ನ ಸಂಬಂಧ ಕಡಿತಗೊಂಡಿದೆ. ಇಬ್ಬರ ನಡುವೆ ಪರಸ್ಪರ ಪ್ರೇಮವಿದ್ದರೂ ಒಟ್ಟಿಗೆ ಮುಂದುವರೆಯಲು ಸಾಧ್ಯವಾಗಲಿಲ್ಲ. ಇದೀಗ ನಾನು ಡೇಟಿಂಗ್ ಅಪ್ಲಿಕೇಶನ್‌ʼಗೆ ಮರಳಿದ್ದೇನೆ. ನನ್ನ ಆಯ್ಕೆಯ ಯುವತಿಯನ್ನು ಹುಡುಕುತ್ತಿದ್ದೇನೆ. ನನ್ನ ಮೆಚ್ಚಿನ ಹುಡುಗಿಯನ್ನು ಆಯ್ಕೆ ಮಾಡಿ ಆಕೆಯ ಮನವೊಲಿಸುವಲ್ಲಿ ಹಲವು ಸವಾಲುಗಳಿವೆ' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ಮೊಹಮ್ಮದ್‌ ಶಮಿ..ಭಾರತಕ್ಕೆ ಅಲ್ಲ ಮುಂಬರುವ ಪಂದ್ಯದಲ್ಲಿ ಇವರು ಆಡುವುಡು ʻಈʼ ತಂಡಕ್ಕೆ..!

ಅಂದಹಾಗೆ ಶೈನ್ ಟಾಮ್ ಚಾಕೋ ತಬಿತಾ ಮ್ಯಾಥ್ಯೂಸ್ ಎಂಬಾಕೆಯನ್ನು ಈ ಹಿಂದೆ ಮದುವೆಯಾಗಿದ್ದರು. ಆದರೆ ಇವರು ವಿಚ್ಛೇದನ ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News