ಬಾಹುಬಲಿ ನಂತರ ಪ್ರಭಾಸ್‌ ಜೊತೆ Kalki 2898 ADಯಲ್ಲಿ ರಾಣಾ...! ಈ ಕುರಿತು ಕ್ಲಾರಿಟಿ ನಟ

Rana in Kalki 2898 AD : ಬಹುನಿರೀಕ್ಷಿತ ಕಲ್ಕಿ 2898 ಎಡಿ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಇದೀಗ ಈ ಕುರಿತು ಸ್ವತಃ ನಟ ಸ್ಪಷ್ಟನೆ ನೀಡಿದ್ದಾರೆ... 

Written by - Krishna N K | Last Updated : May 5, 2024, 10:06 PM IST
    • ಕಲ್ಕಿ 2898 ಎಡಿ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ
    • ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898 ಎಡಿ
    • ಇದೀಗ ಈ ಸುದ್ದಿಗೆ ನಟ ರಾಣಾ ಸ್ಪಷ್ಟನೆ ನೀಡಿದ್ದಾರೆ..
ಬಾಹುಬಲಿ ನಂತರ ಪ್ರಭಾಸ್‌ ಜೊತೆ Kalki 2898 ADಯಲ್ಲಿ ರಾಣಾ...! ಈ ಕುರಿತು ಕ್ಲಾರಿಟಿ ನಟ title=

Kalki 2898 AD updates : ಕಲ್ಕಿ 2898 ಎಡಿ ಪ್ರಸ್ತುತ ಪ್ಯಾನ್-ಇಂಡಿಯಾ ಪ್ರೇಕ್ಷಕರ ಬಹು ನಿರೀಕ್ಷಿತ ಚಿತ್ರ. ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇತ್ತೀಚಿಗೆ ಈ ಸಿನಿಮಾದಿಂದ ಹೊಸ ಅಪ್‌ಡೇಟ್‌ ಹೊರಬಿದ್ದಿದ್ದು, ರಾಣಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸುದ್ದಿಗೆ ನಾಯಕ ರಾಣಾ ಸ್ಪಷ್ಟನೆ ನೀಡಿದ್ದಾರೆ..

ಕಲ್ಕಿ 2898 ಎಡಿ ಮಹಾನಟಿ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದ ಮುಂಬರುವ ಬಿಗ್‌ ಬಜೆಟ್‌ ಪ್ಯಾನ್‌ ಇಂಡಿಯಾ ಸಿನಿಮಾ. ಈ ಚಿತ್ರದಲ್ಲಿ ಡಾರ್ಲಿಂಗ್‌ ಪ್ರಭಾಸ್ ನಟಿಸಿದ್ದಾರೆ. ಮೇ 9 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಆಂಧ್ರಪ್ರದೇಶ ಚುನಾವಣೆ ಮತ್ತು ಐಪಿಎಲ್‌ನಿಂದಾಗಿ ಮುಂದೂಡಲ್ಪಟ್ಟು ಜೂನ್‌ನಲ್ಲಿ ಬಿಡುಗಡೆಯಾಗಲಿದೆ. 

ಇದನ್ನೂ ಓದಿ:ಬಿಜೆಪಿಗರೇ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ, ಸುಮ್ಮನೆ ಇರ್ತಿದ್ರಾ..? ನಟಿ ಸ್ವರಾ ಬಾಸ್ಕರ್‌ ಆಕೋಶ

ಜೂನ್ 27 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಪ್ರಚಾರವನ್ನು ಚಿತ್ರತಂಡ ಇದೀಗ ಆರಂಭಿಸಿದೆ. ಅಮಿತಾಭ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದುಲ್ಕರ್ ಸಲ್ಮಾನ್, ದಿಶಾ ಪಟಾನಿ ಮುಂತಾದ ಅನೇಕ ತಾರೆಯರು ಕಲ್ಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇವರಲ್ಲದೆ ಇನ್ನೂ ಹಲವು ನಟರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಈ ಚಿತ್ರದಲ್ಲಿ ರಾಣಾ ಕೂಡ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ನಟ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ರಾಣಾ, ನಾಗ್ ಅಶ್ವಿನ್ ಮತ್ತು ನಾನು ಒಂದನೇ ತರಗತಿಯಿಂದಲೂ ಒಳ್ಳೆಯ ಸ್ನೇಹಿತರು. ನಾಗ್ ಅಶ್ವಿನ್ ಶೇಖರ್ ಕಮ್ಮುಲ ಅವರೊಂದಿಗೆ ಲೀಡರ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. ಹಾಗಾಗಿ ನಮ್ಮ ನಡುವೆ ಉತ್ತಮ ಸ್ನೇಹವಿದೆ. 

ಇದನ್ನೂ ಓದಿ:ಸೌಂದರ್ಯದಿಂದಲೇ ಸಿನಿರಂಗ ಆಳುತ್ತಿದ್ದಾಳೆ ಈ ಸುಂದರಿ..! ಈಕೆ ಧೋನಿ ಪಕ್ಕಾ ಫ್ಯಾನ್‌

ನಾವು ನಿಯಮಿತವಾಗಿ ಭೇಟಿಯಾಗುತ್ತೇವೆ ಮತ್ತು ಸಿನಿಮಾಗಳ ಬಗ್ಗೆ ಮಾತನಾಡುತ್ತೇವೆ. ಕಲ್ಕಿ ಖಂಡಿತವಾಗಿಯೂ ಭಾರತೀಯ ಚಿತ್ರರಂಗದ ಮುಖವನ್ನೇ ಬದಲಾಯಿಸುತ್ತದೆ. ಈ ಚಿತ್ರದ ಬಗ್ಗೆ ಇಡೀ ಜಗತ್ತಿಗೆ ತಿಳಿಸಲು ನಾವು ಕಾಮಿಕ್ ಕಾನ್ ಕಾರ್ಯಕ್ರಮಕ್ಕೆ ಹೋಗಿದ್ದೆವು. ಈ ಸಿನಿಮಾ ಅವೆಂಜರ್ಸ್ ಫಾರ್ ಇಂಡಿಯಾದಂತಿದೆ. ವಿಶ್ವಾದ್ಯಂತ ಬ್ಲಾಕ್‌ಬಸ್ಟರ್ ಆಗಲಿದೆ. ಆದರೆ ನಾನು ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ ಹೊರತು ಈ ಸಿನಿಮಾದಲ್ಲಿ ನಟಿಸುತ್ತಿಲ್ಲ ಅಂತ ಸ್ಪಷ್ಟ ಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News