ಕಿರುತೆರೆಯ ರಾಮ ಸೀತೆ ಇವರು..ಕನ್ನಡತಿ ಸಿರೀಯಲ್‌ನ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಹೇಳಿ..!

Kannadati Serial Harsha Bhuvi : ಕನ್ನಡತಿ ಸಿರೀಯಲ್‌ ಖ್ಯಾತಿಯ ಭುವಿ ಹಾಗೂ ಹರ್ಷ ಜೋಡಿಗೆ ಫಿದಾ ಆಗದೇ ಇರೋ ಮನಸ್ಸುಗಳೇ ಇಲ್ಲ. ಇದೀಗ ಇವರಿಬ್ಬರ ಪೋಸ್ಟ್‌ ಒಂದು ವೈರಲ್‌ ಆಗಿದ್ದು, ಇದು ರಿಯಲ್‌ ಆಗಬೇಕು ಅನ್ನೊದು ಅಭಿಮಾನಿಗಳ ಆಸೆ.   

Written by - Savita M B | Last Updated : Jun 23, 2023, 01:25 PM IST
  • ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸಿರೀಯಲ್‌ ʼಕನ್ನಡತಿʼ.
  • ಧಾರಾವಾಹಿ ಎಷ್ಟು ಜನಪ್ರಿಯವಾಗಿತ್ತೋ, ಅಷ್ಟೇ ಫೇಮಸ್‌ ಸಿರೀಯಲ್‌ನ ಹರ್ಷ ಭುವಿ ಜೋಡಿ.
  • ಇದೀಗ ಕನ್ನಡತಿ ಭುವಿ ಹಾಗೂ ಹರ್ಷ ರಾಮ ಸೀತೆಯಾಗಿದ್ದಾರೆ
ಕಿರುತೆರೆಯ ರಾಮ ಸೀತೆ ಇವರು..ಕನ್ನಡತಿ ಸಿರೀಯಲ್‌ನ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಹೇಳಿ..!  title=

Harsha Bhuvi in Rama Sita Getup : ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಸಿರೀಯಲ್‌ ʼಕನ್ನಡತಿʼ. ಈ ಧಾರಾವಾಹಿ ಎಷ್ಟು ಜನಪ್ರಿಯವಾಗಿತ್ತೋ, ಅಷ್ಟೇ ಫೇಮಸ್‌ ಸಿರೀಯಲ್‌ನ ಹರ್ಷ ಭುವಿ ಜೋಡಿ. ಈ ಧಾರಾವಾಹಿ ಬೇರೆ ಸಿರೀಯಲ್‌ಗಳಿಗಿಂತ ಸಖತ್‌ ಡಿಫ್ರೆಂಟ್‌ ಆಗಿತ್ತು. ಇನ್ನು ಎಲ್ಲ ಸಿರೀಯಲ್‌ಗಳಲ್ಲಿ ಕಾಮನ್‌ ಅಂದ್ರೆ ಅದು ಅತ್ತೆ ಸೊಸೆ ಜಗಳ ಆದರೆ ಈ ಸಿರೀಯಲ್‌ನಲ್ಲಿ ಅವರಿಬ್ಬರ ಬಾಂಧವ್ಯ ಎಷ್ಟು ಆತ್ಮೀಯತೆಯಿಂದ ಇರಬೇಕು ಎನ್ನುವುದನ್ನು ತೋರಿಸಿಕೊಟ್ಟ ಸಿರೀಯಲ್‌ ಇದು. 

ಈ ಸಿರೀಯಲ್‌ನ ಕಥಾಹಂದರವೇ ಎಲ್ಲರ ಕಣ್ಮನ ಸೆಳೆಯುವಂತಿತ್ತು. ಹೌದು ಎಲ್ಲಡೆಯೂ ಕಲಬೆರೆಕೆ ಕನ್ನಡವನ್ನು ಮಾತನಾಡುವ ಜಗತ್ತಿನಲ್ಲಿ ಸ್ವಚ್ಛ ಕನ್ನಡ ಮಾತನಾಡಿ ಎಲ್ಲರ ಮನೆಮಗಳಾದ ಕನ್ನಡತಿ ಭುವಿಯು ಈ ಸಿರೀಯಲ್‌ನ ಮೆರಗು. ಇನ್ನು ಈ ಜೋಡಿ ರೀಲ್‌ ಮಾತ್ರವಲ್ಲ ರಿಯಲ್‌ ಕಪಲ್‌ ಆಗಬೇಕು ಅನ್ನೊದು ಎಷ್ಟೋ ಅಭಿಮಾನಿಗಳ ಆಸೆ. ಇದೀಗ ಕನ್ನಡತಿ ಭುವಿ ಹಾಗೂ ಹರ್ಷ ಅಭಿಮಾನಿಯೊಬ್ಬನ ಕಲ್ಪನಾಲೋಕದಲ್ಲಿ ರಾಮ ಸೀತೆಯಾಗಿದ್ದಾರೆ. ಏನಿದು ಅಂತೀರಾ..? 

ಇದನ್ನೂ ಓದಿ-Puttakkana Makkalu : ಅತ್ತ ರಾಧಾ ಕಾಣೆ..ಇತ್ತ ತಾಳಿ ಕಟ್ಟಲು ನಿರಾಕರಣೆ..ಈಗಲಾದರೂ ಒಂದಾಗ್ತಾರಾ ಕಂಠಿ-ಸ್ನೇಹಾ ..!

ಕನ್ಫ್ಯೂಸ್‌ ಆಗ್ಬೇಡಿ.. ಆದಿಪುರುಷ್‌ ಸಿನಿಮಾ ರಿಲೀಸ್‌ ಆದಾಗಿನಿಂದಲೂ ರಾಮ ಸೀತೆ ವೇಷ ಧರಿಸಿ ರೀಲ್ಸ್‌ ಮಾಡೋದು ಪೋಸ್ಟ್‌ ಶೇರ್‌ ಮಾಡೋದು ಟ್ರೆಂಡ್‌ ಆಗಿದೆ. ಇನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರಿಗೆ ರಾಮ ಸೀತೆಯ ವೇಷ ನೀಡಿ ಖುಷಿಪಡುತ್ತಿದ್ದಾರೆ. ಇದೀಗ ಅಂತದ್ದೇ ಒಂದು ಪೋಸ್ಟ್‌ ವೈರಲ್‌ ಆಗಿದ್ದು, ಅದರಲ್ಲಿ ಭುವಿ ಹಾಗೂ ಹರ್ಷ ರಾಮ ಹಾಗೂ ಸೀತಾ ಮಾತೆಯ ಹಾಗೇ ಕಂಗೊಳಿಸುತ್ತಿದ್ದಾರೆ.

ಈ ಪೋಸ್ಟ್‌ನ್ನು ನೋಡಿದ ನೆಟ್ಟಿಗರು ಇವರಿಬ್ಬರು ರಾಮ ಸೀತೆಯೆ ಹೌದು, ಈ ಜೋಡಿ ರಿಯಲ್‌ ಜೋಡಿ ಆಗಬೇಕು, ಹೀಗೆ ಹಲವಾರು ಬೆಸ್ಟ್‌ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು ಕಳೆದ ಕೆಲವು ದಿನಗಳ ಹಿಂದೆ ಈ ಜೋಡಿಯು ಸಿರೀಯಲ್‌ನಲ್ಲಿ ಕಿಸ್‌ ಮಡಿರುವ ವಿಡಿಯೋ ಒಂದು ವೈರಲ್‌ ಆಗಿತ್ತು. ಇದೆಲ್ಲಾ ಒಂದುಕಡೆ ಆದರೆ ಇವರಿಬ್ಬರು ನಿಜವಾದ ಜೋಡಿಯಾಗಬೇಕು ಅನ್ನೋದು ಅವರ ಎಲ್ಲ ಅಭಿಮಾನಿಗಳ ದೊಡ್ಡ ಆಸೆ. 

ಇದನ್ನೂ ಓದಿ-Instagram ಲೈವ್‌ನಲ್ಲಿ ಬಟ್ಟೆ ಬದಲಿಸಿದ ಸೋಫಿಯಾ ಅನ್ಸಾರಿ.. ನೀವೂ ವಿಡಿಯೋ ನೋಡಿದ್ದೀರಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News