ನಟ ದಿಗಂತ್, ಅನಂತ್ ನಾಗ್ ಅವ್ರಿಗೆ ಮೊಮ್ಮಗನಾಗ್ತಾನೆ ಗೊತ್ತಾ...?

ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡ ದಿಗಂತ್ ಮತ್ತೇ ಒಂದಾಗಿದ್ದಾರೆ. ಇವರಿಬ್ಬರೂ ತಾತ ಮೊಮ್ಮಗ ಅನ್ನೋ ಮ್ಯಾಟರ್ ನಿಮ್ಗೆ ಗೊತ್ತಿದ್ದೀಯಾ...? ಯೆಸ್ ʼತಿಮ್ಮಯ್ಯ ಆಂಡ್ ತಿಮ್ಮಯ್ಯʼ ಅನ್ನೋ ವಿಭಿನ್ನ ಟೈಟಲ್ ಹೊಂದಿರೋ ಚಿತ್ರದಲ್ಲಿ ಈ ಜಬರ್ದಸ್ತ್ ಜೋಡಿ ಒಂದಾಗಿದ್ದಾರೆ. ಅನಂತ್ ನಾಗ್ ಮತ್ತು ದಿಗಂತ್ ಜೋಡಿ ಸಿನಿಮಾದಲ್ಲಿ ಇದ್ರೆ ಆ ಚಿತ್ರ ಮಾತ್ರ ಭರ್ಜರಿ ಯಶ ಕಾಣೋದ್ರಲ್ಲಿ ಅನುಮಾನವೇ ಇಲ್ಲ ಬಿಡಿ.

Written by - YASHODHA POOJARI | Edited by - Krishna N K | Last Updated : Nov 12, 2022, 10:45 AM IST
  • ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡ ದಿಗಂತ್ ಮತ್ತೇ ಒಂದಾಗಿದ್ದಾರೆ
  • ಇವರಿಬ್ಬರೂ ತಾತ ಮೊಮ್ಮಗ ಅನ್ನೋ ಮ್ಯಾಟರ್ ನಿಮ್ಗೆ ಗೊತ್ತಿದ್ದೀಯಾ...?
  • ತಿಮ್ಮಯ್ಯ ಆಂಡ್ ತಿಮ್ಮಯ್ಯʼ ಚಿತ್ರದಲ್ಲಿ ಒಂದಾದ ಈ ಜಬರ್ದಸ್ತ್ ಜೋಡಿ
ನಟ ದಿಗಂತ್, ಅನಂತ್ ನಾಗ್ ಅವ್ರಿಗೆ ಮೊಮ್ಮಗನಾಗ್ತಾನೆ ಗೊತ್ತಾ...? title=

ಬೆಂಗಳೂರು : ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡ ದಿಗಂತ್ ಮತ್ತೇ ಒಂದಾಗಿದ್ದಾರೆ. ಇವರಿಬ್ಬರೂ ತಾತ ಮೊಮ್ಮಗ ಅನ್ನೋ ಮ್ಯಾಟರ್ ನಿಮ್ಗೆ ಗೊತ್ತಿದ್ದೀಯಾ...? ಯೆಸ್ ʼತಿಮ್ಮಯ್ಯ ಆಂಡ್ ತಿಮ್ಮಯ್ಯʼ ಅನ್ನೋ ವಿಭಿನ್ನ ಟೈಟಲ್ ಹೊಂದಿರೋ ಚಿತ್ರದಲ್ಲಿ ಈ ಜಬರ್ದಸ್ತ್ ಜೋಡಿ ಒಂದಾಗಿದ್ದಾರೆ. ಅನಂತ್ ನಾಗ್ ಮತ್ತು ದಿಗಂತ್ ಜೋಡಿ ಸಿನಿಮಾದಲ್ಲಿ ಇದ್ರೆ ಆ ಚಿತ್ರ ಮಾತ್ರ ಭರ್ಜರಿ ಯಶ ಕಾಣೋದ್ರಲ್ಲಿ ಅನುಮಾನವೇ ಇಲ್ಲ ಬಿಡಿ.

ಇದೀಗ ಮತ್ತೇ ಈ ಅದ್ಭುತ ಪೇರ್ ನಿಮ್ಮನ್ನ ನಗಿಸಲು, ಅಳಿಸಲು, ಮನರಂಜಿಸಲು ಮತ್ತು ಒಂದೊಳ್ಳೆ ಸಂದೇಶ ಕೊಡಲು ಡಿಸೆಂಬರ್‌ ಮೊದಲ ವಾರದಲ್ಲಿ ಸಿಲ್ವರ್ ಸ್ಕ್ರೀನ್ ಮೇಲೆ ಪ್ರತ್ಯಕ್ಷರಾಗುತ್ತಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಮಿಲಿಯನ್ ಗಟ್ಟಲೇ ವ್ಯೂಸ್ ಪಡ್ಕೊಂಡು ಜನಮೆಚ್ಚುಗೆ ಪಡ್ಕೊಂಡಿದೆ. ಟೀಸರ್‌ನಲ್ಲಿ ಅನಂತ್ ನಾಗ್ ಮತ್ತು ದಿಗ್ಗಿಯನ್ನ ನೋಡಿದ್ರೆ ಗೂಸ್ ಬಂಪ್ಸ್ ಬರ್ತಿದೆ ಅಂತ ಜನ ಕೂಡ ಬ್ಯಾಕ್ ಟು ಬ್ಯಾಕ್ ಕಾಮೆಂಟ್ ಮಾಡಿದ್ದಾರೆ. 

ಇದನ್ನೂ ಓದಿ: ತಪ್ಪು ಮಾಡ್ತೀದಿಯಾ ಅಂತ ಆಂಕರ್‌ ಕತ್ತಿಗೆ ಚಾಕು ಹಿಡಿದ ನಟಿ ಟಬು..!

ಅನಂತ್ ನಾಗ್ ಸರ್ ಕೂಡ ಯಾವುದೇ ಸಿನಿಮಾ ಒಪ್ಪಿಕೊಳ್ಳಬೇಕಾದ್ರೆ ನೋಡಿ ಸ್ಟೋರಿ ಚೆನ್ನಾಗಿದ್ರೆ ಮಾತ್ರ ನಟಿಸುತ್ತಾರೆ. ಇಲ್ಲೂ ಕೂಡ ಹಾಗೇ ಸ್ಟೋರಿ ಕೇಳಿದ ತಕ್ಷಣ ಒಪ್ಪಿದ್ದಾರೆ ಅಂದ್ರೆ ಈ ಸಿನಿಮಾ ಕೂಡ ಇತಿಹಾಸ ಸೃಷ್ಟಿಸೋದು ಕನ್ಫರ್ಮ್ ಆಗಿದೆ. ಸೋ ಜನ ಕೂಡ ತಿಮ್ಮಯ್ಯ ಆಂಡ್ ತಿಮ್ಮಯ್ಯ ಸಿನಿಮಾ ನೋಡಲು ಕುತೂಹಲದಿಂದ ಕಾದಿದ್ದಾರೆ. ತಾತ ಮೊಮ್ಮಗನಾಗಿರೋ ಈ ಜೋಡಿ ತೆರೆಮೇಲೆ ಯಾವ ರೀತಿ ಸಂಚಲನ  ಸೃಷ್ಟಿಸುತ್ತಾರೆ ಅನ್ನೋದನ್ನ ಕಾದುನೋಡೋಣ.

ದಿಗಂತ್ ಅವರಿಗೆ ಜೋಡಿಯಾಗಿ ಐಂದ್ರಿತಾ ರೇ ಅವರು ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ನಿಜ ಬದುಕಿನಲ್ಲೂ ಜೋಡಿಯಾಗಿರುವ ದಿಗಂತ್ ಮತ್ತು ಐಂದ್ರಿತಾ ರೇ, ಇದಕ್ಕೂ ಮುಂಚೆ ಮನಸಾರೆ, ಪಾರಿಜಾತ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಸಿನಿಮಾದಲ್ಲಿ ಶುಭ್ರಾ ಐಯ್ಯಪ್ಪ ಎರಡನೇ ನಾಯಕಿಯಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Kerebete: ಸ್ಯಾಂಡಲ್‌ವುಡ್‌ನ ಒಂದಿಷ್ಟು ಮಂದಿ ‘ಕೆರೆಬೇಟೆ’ಗೆ ಸಜ್ಜಾಗಿದ್ದು ಏಕೆ?

ಕಮರ್ಷಿಯಲ್ ಜಾಹಿರಾತು ನಿರ್ದೇಶಕರಾಗಿ ಕೆಲಸ ಮಾಡಿರುವ ಸಂಜಯ್ ಶರ್ಮಾ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಮೊದಲನೇ ಸಿನಿಮಾ. ತಿಮ್ಮಯ್ಯ ಆ್ಯಂಡ್‌ ತಿಮ್ಮಯ್ಯ ಸಿನಿಮಾದಲ್ಲಿ ಅನಂತ್ ನಾಗ್ ಅವರು ದಿಗಂತ್ ಅವರ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲಿ ಬೀರು ಬಿಟ್ಟ ಕುಟುಂಬದ ಕಥೆಯನ್ನು ಚಿತ್ರ ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News