OTT Release: ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದು, ಜಗತ್ತಿನಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್ 2 ಸಿನಿಮಾ ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಆ ಬಳಿಕ ಒಟಿಟಿ ಸೈಲೆಂಟ್ ಆಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಜೂನ್ ಮೊದಲ ವಾರದಲ್ಲಿ ಬೇರೆ ಬೇರೆ ಭಾಷೆಗಳ ಸಿನಿಮಾ ಹಾಗೂ ವೆಬ್ ಸಿರೀಸ್‌ಗಳು ಬಿಡುಗಡೆಯಾಗಲಿವೆ. ಜೂನ್ ಮೊದಲ ವಾರದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಸೇರಿದಂತೆ ವೆಬ್ ಸಿರೀಸ್‌ಗಳೂ ಕೂಡ ರಿಲೀಸ್ ಆಗುತ್ತಿವೆ.
ಇದನ್ನೂ ಓದಿ: ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಫೋಟೋಶೂಟ್ ಪ್ರಕರಣ: ಪೂನಂ ಪಾಂಡೆ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ
ಕೆಜಿಎಫ್ ಚಾಪ್ಟರ್ 2: ಬಾಕ್ಸಾಫೀಸ್ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಈಗಾಗಲೇ ಒಟಿಟಿಗೆ ಲಗ್ಗೆ ಇಟ್ಟಿದೆ. ಆದರೆ ಈ ಹಿಂದೆ ಅಮೆಜಾನ್ ಪ್ರೈಂನಲ್ಲಿ ಪೇ/ಪರ್ ವ್ಯೂ ಲೆಕ್ಕದಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಆದರೇ ಇನ್ಮುಂದೆ ಪ್ರೈಮ್ ಸಬ್‌ಸ್ಕ್ರಿಪ್ಷನ್ ಇರುವ ಯಾರಾದರೂ ಈ ಸಿನಿಮಾ ನೋಡಬಹುದು. ಸಿನಿಮಾ 50 ದಿನಗಳನ್ನು ಪೂರೈಸುತ್ತಿರುವ ಬೆನ್ನಲ್ಲೇ ಜೂನ್ 3 ರಿಂದ ಅಮೆಜಾನ್ ಪ್ರೈಂನಲ್ಲಿ ರೆಗ್ಯೂಲರ್ ಆಗಿ ಪ್ರೀಮಿಯರ್ ಆಗಲಿದೆ.
ಜನಗನಮನ: ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಮಲಯಾಳಂ ಸಿನಿಮಾ ಜನಗನಮನ ಕೂಡ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಕಾನೂನಿಗೆ ಸಂಬಂಧಿಸಿದ ಕಥೆ ಆಧರಿತ ಸಿನಿಮಾ ಇದಾಗಿದ್ದು, ಮಲಯಾಳಂನಲ್ಲಿ ರಿಲೀಸ್ ಆಗಿದೆ. ಇದೀಗ ಈ ಸಿನಿಮಾ ಜೂನ್ 2ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ.
ಆಶ್ರಮ್ ಸೀಸನ್ 3: ಇನ್ನೂ ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವೆಬ್ ಸಿರೀಸ್ ಆಶ್ರಮ್ ಸೀಸನ್-3, ಜೂನ್ 3 ರಂದು ಎಂಎಕ್ಸ್ ಪ್ಲೇಯರ್‌ನಲ್ಲಿ ಬಿಡುಗಡೆಯಾಗುತ್ತಿದೆ. ಈ ವೆಬ್ ಸಿರೀಸ್‌ನಲ್ಲಿ ಬಾಬಿ ಡಿಯೋಲ್, ದರ್ಶನ್ ಕುಮಾರ್, ಇಶಾ ಗುಪ್ತಾ, ತ್ರಿದಾ ಚೌಧರ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಇದನ್ನೂ ಓದಿ: ವೈರಲ್ ಆಗ್ತಾ ಇದೆ ಕಾರ್ತಿಕ್ ಜಯರಾಂ ಮತ್ತು ಅಪರ್ಣಾ ಫೋಟೋಗಳು...! ಅಸಲಿ ವಿಚಾರವೇನು ಗೊತ್ತೇ?
9 Hours: ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ವೆಬ್ ಸಿರೀಸ್ 9 Hours. ಇದು ಕೂಡ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಜಾಕೊಬ್ ವರ್ಗೀಸ್ ಹಾಗೂ ನಿರಂಜನ್ ಕೌಶಿಕ್ ನಿರ್ದೇಶನ ಮಾಡಿದ್ದಾರೆ.
ಅಶೋಕ ವಾನಮ್ಲೋ ಅರ್ಜುನ ಕಲ್ಯಾಣಂ: ಟಾಲಿವುಡ್‌ನ ರೊಮ್ಯಾಂಟಿಕ್ ಸಿನಿಮಾ ಅಶೋಕ ವಾನಮ್ಲೋ ಅರ್ಜುನ ಕಲ್ಯಾಣಂ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ವಿಶ್ವಕ್ ಸೇನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಮೇ 6ರಂದು ಬಿಡುಗಡೆಯಾಗಿತ್ತು. ಇದೀಗ ಜೂನ್ 03 ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.