ಗಡಿನಾಡು ಕನ್ನಡಿಗರಿಗೆ ನೀರಿನ ಹಾಹಾಕಾರ, ಪ್ರತಿಕ್ಷಣವೂ ಪರಿತಪಿಸುತ್ತಿರುವ ಜನರು..!

ಸದ್ಯ ರಾಜ್ಯಾದಾದ್ಯಂತ ಬರಗಾಲದ ಛಾಯೆ ನಿರ್ಮಾಣವಾಗಿದೆ, ಅದರಲ್ಲೂ ಕರ್ನಾಟಕಕ್ಕೆ ಗಡಿ ಹೊಂದಿರುವ ಮಹಾರಾಷ್ಟ್ರ ಜತ್ತ ತಾಲೂಕಿನ ನಾಲ್ಕು ಗ್ರಾಮಗಳ ಸ್ಥಿತಿ ಅಯೋಮಯವಾಗಿದ್ದು ಪ್ರತಿಕ್ಷಣವೂ ಹನಿಹನಿ ನೀರಿಗಾಗಿ ಜನ-ಜಾನುವಾರುಗಳು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 

Written by - Zee Kannada News Desk | Last Updated : Jan 14, 2024, 11:16 PM IST
  • ಗಡಿಯಲ್ಲಿ ನೆಲೆಸಿರುವ ಕನ್ನಡಿಗರಿಗೆ ಮಹಾ ಸರ್ಕಾರದಿಂದ ಇದೆಂತ ಅನ್ಯಾಯ
  • ಎಂಟು ದಿನಕ್ಕೆ ಒಮ್ಮೆ ನೀರು ಸರಬರಾಜು ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ.
 ಗಡಿನಾಡು ಕನ್ನಡಿಗರಿಗೆ ನೀರಿನ ಹಾಹಾಕಾರ, ಪ್ರತಿಕ್ಷಣವೂ ಪರಿತಪಿಸುತ್ತಿರುವ ಜನರು..! title=
ಸಾಂಧರ್ಭಿಕ ಚಿತ್ರ

ಚಿಕ್ಕೋಡಿ: ಸದ್ಯ ರಾಜ್ಯಾದಾದ್ಯಂತ ಬರಗಾಲದ ಛಾಯೆ ನಿರ್ಮಾಣವಾಗಿದೆ, ಅದರಲ್ಲೂ ಕರ್ನಾಟಕಕ್ಕೆ ಗಡಿ ಹೊಂದಿರುವ ಮಹಾರಾಷ್ಟ್ರ ಜತ್ತ ತಾಲೂಕಿನ ನಾಲ್ಕು ಗ್ರಾಮಗಳ ಸ್ಥಿತಿ ಅಯೋಮಯವಾಗಿದ್ದು ಪ್ರತಿಕ್ಷಣವೂ ಹನಿಹನಿ ನೀರಿಗಾಗಿ ಜನ-ಜಾನುವಾರುಗಳು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಹೌದು ಜತ್ತ ತಾಲೂಕಿನ ಬಸರಗಿ, ಉಮರಾಣಿ, ಸಿಂಧೂರ, ಗೂಗವಾಡ ಗ್ರಾಮಗಳಲ್ಲಿ ಹೆಚ್ಚಾಗಿ ಕನ್ನಡಿಗರೇ ನೆಲೆಸಿದ್ದಾರೆ, ಬರಗಾಲದ ಹಿನ್ನೆಲೆಯಲ್ಲಿ ಅಲ್ಲಿ ಕುಡಿಯುವ ನೀರಿನ ಜೊತೆಗೂ ದಿನಬಳಕೆ ನೀರಿಗೂ ಕೂಡ ಹಾಹಾಕಾರ ಉಂಟಾಗಿದ್ದು ಅಲ್ಲಿನ ಜನರು ಸಂಕಷ್ಟ ಹೇಳತೀರದಾಗಿದೆ. ಕಳೆದ ಆಗಸ್ಟ್ ನಿಂದಲೂ ಮಹಾರಾಷ್ಟ್ರ ಸರ್ಕಾರ ಅಲ್ಲಿರುವ ಜನರಿಗೆ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿದ್ದು, ಅದು ಯಾವುದಕ್ಕೂ ಸಾಲುತ್ತಿಲ್ಲ ಎಂದು ಅಲ್ಲಿನ ಜನರು ಮಹಾ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಪ್ರತಿ ವಾರಕ್ಕೆ ಒಮ್ಮೆ ಟ್ಯಾಂಕರ್ ಬರುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮತ್ತು ದಿನಬಳಕೆ ಯಾಗಿ ನೀರು ಯಾವುದಕ್ಕೂ ಸಾಲುತ್ತಿಲ್ಲ ಅಂದು ಅಲ್ಲಿನ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಕನ್ನಡಿಗರ ಮೇಲೆ ಮಲತಾಯಿ ಧೋರಣೆ ತೋರುತ್ತಿದ್ದು ಕರ್ನಾಟಕ ಸರ್ಕಾರ ನಮ್ಮ ನೆರವಿಗೆ ಬರುವಂತೆ ಅಲ್ಲಿನ ಕನ್ನಡಿಗರು ಕರ್ನಾಟಕ ಸರ್ಕಾರಕ್ಕೆ ಪರಿಪರಿಯಾಗಿ ಮನವಿ ಮಾಡುತ್ತಿದ್ದಾರೆ.

ಈ ನಾಲ್ಕು ಗ್ರಾಮಗಳ ಸುತ್ತಮುತ್ತಲು ಮಳೆ ಆಶ್ರಿತ ಇರೋದ್ರಿಂದ ಯಾವುದೇ ನೀರಿನ ಮೂಲ ಇಲ್ಲದೇ ಇರುವುದರಿಂದ ಸದ್ಯ ಈಗ ಬರಗಾಲದ ಹಿನ್ನೆಲೆಯಲ್ಲಿ ಹನಿ ಹನಿ ನೀರು ಕೂಡ ಸಂಕಷ್ಟ ಪಡುವಂತಾಗಿದೆ, ನೀರಿಲ್ಲದೆ ಎಲ್ಲಾ ಜಮೀನುಗಳು ಬರಡು ಬರಡಾಗಿ ಕಾಣುತ್ತಿದ್ದು, ಜನ- ಜಾನುವಾರುಗಳಿಗೆ ಮೇವಿನ ಕೊರತೆ ಎದ್ದು ಕಾಣುತ್ತಿದೆ, ಕೆಲವು ಸಲ ಸ್ನಾನಕ್ಕೆ ನೀರಿಲ್ಲದೆ ಎರಡೆರೆಡು ದಿನಕ್ಕೂ ಒಮೇ ಸ್ನಾನ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಲ್ಲಿ ಜನರ ಸ್ಥಿತಿ ಅಯೋಮಯವಾಗಿದೆ. ಕರ್ನಾಟಕ ಗಡಿ ಹೊಂದಿರುವ ನಾವು ಕರ್ನಾಟಕ ಸರ್ಕಾರ ನಮಗೆ ನೀರನ್ನು ಕೊಡಲಿ ಎಂದು ಅಲ್ಲಿನ ಕನ್ನಡಿಗರು ಸಿಎಂ ಸಿದ್ದರಾಮಯ್ಯ ಅವರಿಗೆ ಪರಿಪರಿಯಾಗಿ ಮನವಿ ಮಾಡುತ್ತಿದ್ದಾರೆ.

ಇದನ್ನೂ ಓದಿ-White Hair Tips: ಈ ಎಣ್ಣೆ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ, ಬಳಕೆಯ ವಿಧಾನ ಇಲ್ಲಿದೆ!

ಬಸರಗಿ ಗ್ರಾಮದ ಸ್ಥಳೀಯರಾದ ಅಪ್ಪಾಸಾಬ ಮುಲ್ಲಾ, ರಮೇಶ್ ಸೂತಾರ, ರಸೂಲ್ ಮಸರಗುಪ್ಪಿ, ಮಾತನಾಡಿ, ನಾವು ಮೂಲತಃ ಕನ್ನಡಿಗರೇ, ಆದರೆ ಭಾಷಾವಾರು ಪ್ರಾಂತ್ಯದ ವಿಭಜನೆ ಸಂದರ್ಭದಲ್ಲಿ ನಮಗೆ ಅನ್ಯಾಯವಾಗಿ ನಾವು ಇಲ್ಲೇ ಉಳಿದಿದ್ದೇವೆ, ಮಹಾರಾಷ್ಟ್ರ ಸರ್ಕಾರ ನಮಗೆ ಮೂಲಭೂತ ಸೌಕರ್ಯವನ್ನು ನೀಡುತ್ತಿಲ್ಲ, ಇಲ್ಲಿ ಕೆರೆ ಕಟ್ಟೆಗಳನ್ನು ತುಂಬುತ್ತಿಲ್ಲ, ಇದರಿಂದ ನೀರಾವರಿಗೆ ನಮಗೆ ತುಂಬಾ ತೊಂದರೆಯಾಗಿದೆ ಕುಡಿಯುವ ನೀರಿಗೂ ಜನ ದನಕರುಗಳು ಪರಿತಪಿಸುವಂತಾಗಿದೆ, ಎಂಟು ದಿನಕ್ಕೆ ಒಮ್ಮೆ ಮಹಾರಾಷ್ಟ್ರ ಸರ್ಕಾರ ನಮಗೆ ನೀರು ಸರಬರಾಜು ಮಾಡುತ್ತಿದ್ದು ಯಾವುದಕ್ಕೂ ಸಾಲುತ್ತಿಲ್ಲ, ದಿನಗಳಿಗೆ ಕುಡಿಯೋಕೂ ನೀರು ಸಿಗುತ್ತಿಲ ಇದರಿಂದ ನಮಗೆ ತೊಂದರೆ ಉಂಟಾಗಿದೆ, ಬರಗಾಲ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ ನಿಂದ ಈ ತೊಂದರೆ ಉದ್ಭವವಾಗಿದ್ದು ನರಕದಲ್ಲಿ ನಾವು ಕಾಲ ಕಳೆಯುವಂತೆ ಪರಿಸ್ಥಿತಿ ಭಾಸವಾಗಿದೆ, ನಮ್ಮ ಪಕ್ಕದ ಕರ್ನಾಟಕ ಗಡಿ ಕೋಹಳ್ಳಿ ಬಳ್ಳಿಗೇರಿ ಗ್ರಾಮದಲ್ಲಿ ಸಮೃದ್ಧಿ ನೀರಾವರಿಯಿಂದ ಅಲ್ಲಿನ ಗ್ರಾಮಸ್ಥರು ಸುಖಮಯ ಜೀವನ ನಡೆಸುತ್ತಿದ್ದಾರೆ, ಆದರೆ ನಮಗೆ ಇಲ್ಲಿನ ಸರ್ಕಾರ ಕೃಷಿ ಜಮೀನುಗಳಿಗಾಗಲಿ ಯಾವುದೇ ನೀರಾವರಿ ಯೋಜನೆಗಳನ್ನು ರೂಪಿಸದೆ ಅನ್ಯಾಯ ಮಾಡುತ್ತಿದೆ, ನಾವು ಕರ್ನಾಟಕಕ್ಕೆ ಬರುವುದಕ್ಕೆ ಸಿದ್ಧರಾಗಿದ್ದೇವೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮನ್ನು ಕರ್ನಾಟಕಕ್ಕೆ ತೆಗೆದುಕೊಳ್ಳಲಿ, ಅಥವಾ ಪಕ್ಕದ ಹಳ್ಳಿಗಳಿಂದ ನಮ್ಮಗೆ ನೀರನ್ನು ಹರಿಸಲಿ, ಅದೆಷ್ಟೋ ತಲೆಮಾರಿನ ಗಳಿಂದ ನಮ್ಮ ಭೂಮಿಗಳು ಬರಡಾಗಿದ್ದು ಕೃಷಿ ಚಟುವಟಿಕೆಗಳಿಲ್ಲದೆ ನಾವು ಆರ್ಥಿಕವಾಗಿ ತುಂಬಾ ಸೊರಗಿ ಹೋಗಿದ್ದೇವೆ ಈ ಸಂಕಷ್ಟಕ್ಕೆ ಕರ್ನಾಟಕ ಸರ್ಕಾರ ಏನಾದರೂ ಮಾರ್ಗದರ್ಶನ ನೀಡಲಿ ಎಂದು ಪರಿಪರಿಯಾಗಿ ಗಡಿನಾಡು ಕನ್ನಡಿಗರು ತಮ್ಮ ಮನದಾಳದ ಮಾತನ್ನು ಹಂಚಿಕೊಂಡ್ರು.

ವಿಷಯಕ್ಕೆ ಸಂಬಂಧಿಸಿದಂತೆ ಜತ್ತ ತಹಶೀಲ್ದಾರ್ ಜೀವನ ಬನಸೋಡೆ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ , ಬರಗಾಲ ಹಿನ್ನೆಲೆಯಲ್ಲಿ ನಾವು ಕೂಡ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿದ್ದೇವೆ, ಪ್ರತಿದಿನವೂ ಟ್ಯಾಂಕರ್ ಮುಖಾಂತರ ನೀರು ಸರಬರಾಜು ಮಾಡುತ್ತಿವೆ, ಪ್ರತಿ ಎಂಟು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿರುವುದು ನನ್ನ ಗಮನಕ್ಕೆ ಇಲ್ಲ, ಆ ರೀತಿ ಏನಾದರೂ ಸಮಸ್ಯೆ ಇದ್ದರೆ ಅಲ್ಲಿನ ಸ್ಥಳಿಯರು ಗ್ರಾಮ ಪಂಚಾಯಿತಿ ಮುಖಾಂತರ ಮನವಿ ಸಲ್ಲಿಸಬೇಕು, ಗ್ರಾಮ ಅಭಿವೃದ್ಧಿ ಅಧಿಕಾರಿಗಳು ನಮಗೆ ಮನವಿಯನ್ನು ಸಲ್ಲಿಸುತ್ತಾರೆ ನಂತರ ಆ ಸಮಸ್ಯೆಗೆ ಏನಾದ್ರು ಪರಿಹಾರ ಕಂಡುಕೊಳ್ಳಬಹುದು, ಈ ವಿಷಯ ನನ್ನ ಗಮನಕ್ಕೆ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಮಂಡ್ಯದ ಗದ್ದೆಯಲ್ಲಿ ಮಹಿಳೆಯ ಬೆತ್ತಲೆ ಶವ ಪತ್ತೆ

ಕನ್ನಡಪರ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ್ ಚಂದರಗಿ ಈಟಿವಿ ಭಾರತ ಜೊತೆ ದೂರವಾಣಿ ಮುಖಾಂತರ ಮಾತನಾಡಿ, ಗಡಿನಾಡು ಕನ್ನಡಿಗರಿಗೆ ಎಲ್ಲಾ ಸರ್ಕಾರಗಳು ಅನ್ಯಾಯವನ್ನು ಮಾಡಿಕೊಂಡು ಬಂದಿದೆ, ಸಿಎಂ ಬಸವರಾಜ್ ಬೊಮ್ಮಾಯಿ ಅವರ ಅಧಿಕಾರಿ ಅವಧಿಯಲ್ಲಿ ಜತ್ ಕನ್ನಡಿಗರ ಜೊತೆಯಾಗಿ ಬೆಳಗಾವಿಯಲ್ಲಿ ಭೇಟಿ ನೀಡಿ ಅವರ ಸಮಸ್ಯೆಗಳು ಕುರಿತು ಚರ್ಚೆ ನಡೆಸಲಾಗಿತ್ತು, ಬೆಂಗಳೂರಿನಲ್ಲೂ ಕೂಡ ಮುಖ್ಯಮಂತ್ರಿಗಳು ಒಂದು ಸಭೆ ನಡೆಸಿದರು, ಸರ್ಕಾರ ಬದಲಾಗುತ್ತಿದ್ದಂತೆ  ಪ್ರಸ್ತಾವನೆಗಳು ಮಠಕುಗೊಂಡ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಮತ್ತೊಮ್ಮೆ ಮನವಿ ಸಲ್ಲಿಸಿದ್ದು, ಕಳೆದ ನಾಲ್ಕು ತಿಂಗಳಿನಿಂದ ಜತ್ ಕನ್ನಡಿಗರ ಜೊತೆ ಸಭೆ ಮಾಡುವಂತೆ ಸಿಎಂ ಅವರಿಗೆ ಕಾಲಾವಕಾಶ ಕೇಳಿದರು ಇದುವರೆಗೆ ನೀಡುತ್ತಿಲ್ಲ, ಗಡಿ ಪ್ರದೇಶ ಪ್ರಾಧಿಕಾರ ಅಧ್ಯಕ್ಷರು ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದಾರೆ , ಗಡಿಭಾಗದ ಕನ್ನಡಿಗರಿಗೆ ನೀರಿಲ್ಲದೆ ಸಂಕಷ್ಟ ಪಡುವಂತಾಗಿದೆ ಸರ್ಕಾರಗಳು ತಕ್ಷಣವೇ ಎಚ್ಚೆತ್ತುಕೊಂಡು ಅವರಿಗೆ ನೀರು ಕೊಡುವ ವ್ಯವಸ್ಥೆಯನ್ನು ಮಾಡಬೇಕೆಂದು ನಿಮ್ಮ ಮುಖಾಂತರ ಅಗ್ರಹಿಸುತ್ತೇನೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News