Bigg Boss: ಬಿಗ್ ಬಾಸ್ ತಮಿಳು ಸೀಸನ್ 8 ಅಕ್ಟೋಬರ್ 6 ರಂದು ಪ್ರಾರಂಭವಾಯಿತು. ವಿಜಯ್ ಸೇತುಪತಿ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ.. ಸದ್ಯ 65 ದಿನ ಯಶಸ್ವಿಯಾಗಿ ಪ್ರಸಾರವಾದ ಈ ಶೋನಿಂದ ಸಾರ್ವಜನಿಕ ಮತಗಳ ಆಧಾರದ ಮೇಲೆ ಪ್ರತಿವಾದ ಒಬ್ಬೊಬ್ಬ ಸ್ಪರ್ಧಿ ಎಲಿಮಿನೇಟ್ ಆದರು.. ಆದರೆ ಕಳೆದ ವಾರವಷ್ಟೇ ಡಬಲ್ ಎಲಿಮಿನೇಷನಲ್ ಮಾಡಲಾಗಿತ್ತು.. ಇದರಲ್ಲಿ ಸಾಚನಾ ಹಾಗೂ ಆನಂದಿ ಮನೆಯಿಂದ ಹೊರಬಿದ್ದಿದ್ದರು..
ಬಳಿಕ ಈ ವಾರ ಬಿಗ್‌ಬಾಸ್ ಮನೆಯಲ್ಲಿ ಅಪರೂಪದ ಟಾಸ್ಕ್‌ವೊಂದನ್ನು ನೀಡಲಾಗಿತ್ತು.. ಅದು ಕೆಲಸಗಾರರ ಟಾಸ್ಕ್.. ಇದರಲ್ಲಿ ಕಾರ್ಮಿಕರು ದುಡಿದರೆ ಮಾತ್ರ ಮನೆಗೆ ಬೇಕಾದ ನೀರು, ಗ್ಯಾಸ್ ಸಿಗುತ್ತದೆ ಎಂಬ ಪರಿಸ್ಥಿತಿ ಇತ್ತು. ಎಂದಿನಂತೆ ಈ ಆಟದಲ್ಲಿಯೂ ಸಾಕಷ್ಟು ವಾಗ್ವಾದಗಳು ನಡೆದವು.. ಈ ಟಾಸ್ಕ್ ಕೊನೆಯ ಹಂತದಲ್ಲಿ ಮ್ಯಾನೇಜರ್ ತಂಡದಿಂದ ಉತ್ತಮ ಸ್ಪರ್ಧಿಯನ್ನು ಆಯ್ಕೆ ಮಾಡಿ.. ನಾಮಿನೇಷನ್ ಪಾಸ್ ನೀಡಲಾಯಿತು..
ಇದನ್ನೂ ಓದಿ-ಕ್ರಿಕೆಟ್ ಇತಿಹಾಸದಲ್ಲಿ ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯ ಸೋಲದೆ ವಿಶ್ವಕಪ್ ಗೆದ್ದ ಏಕೈಕ ತಂಡ ಯಾವುದು?
ಮ್ಯಾನೇಜರ್ ತಂಡದಿಂದ ಜೆಫ್ರಿ ಅತ್ಯುತ್ತಮ ಆಟಗಾರನಾಗಿ ಆಯ್ಕೆಯಾದರು.. ಇವರಿಗೆ ನಾಮಿನೇಷನ್ ಪಾಸ್ ನೀಡಲಾಯಿತು.. ಅದೇ ರೀತಿ ವರ್ಕರ್ಸ್ ತಂಡದಿಂದ ಉತ್ತಮ ಪ್ರದರ್ಶನ ನೀಡದ ಸ್ಪರ್ಧಿಯನ್ನು ಆಯ್ಕೆ ಮಾಡಿ ಮುಂದಿನ ವಾರದ ಎವಿಕ್ಷನ್ ಗೆ ನೇರವಾಗಿ ಆಯ್ಕೆ ಮಾಡಲಾಯಿತು..
ಸದ್ಯ ಬಿಗ್ ಬಾಸ್ ಶೋನಲ್ಲಿ 15 ಸ್ಪರ್ಧಿಗಳಿದ್ದು, ಈ ವಾರವೂ ಡಬಲ್ ಎವಿಕ್ಷನ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಂತೆ ಈ ವಾರದ ನಾಮಿನೇಷನ್ ನಲ್ಲಿ 9 ಸ್ಪರ್ಧಿಗಳಿದ್ದಾರೆ. ಅವರಲ್ಲಿ ಪವಿತ್ರಾ, ಜಾಕ್ವೆಲಿನ್ ಮತ್ತು ಅರುಣ್ ಗಮನಾರ್ಹ ಮತಗಳನ್ನು ಗಳಿಸಿರುವುದರಿಂದ ಎಲಿಮಿನೇಟ್ ಆಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗಿದೆ. ಅಂದಹಾಗೇ ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್ ಆಗಿರುವ ತರ್ಶಿಕಾ ಹಾಗೂ ವಿಜೆ ವಿಶಾಲ್ ಈ ವಾರದ ವೋಟಿಂಗ್ ನಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಹೀಗಾಗಿ ಈ ವಾರ ಡಬಲ್ ಎಲಿಮಿನೇಷನ್ ನಡೆದರೇ ಇವರಿಬ್ಬರು ಮನೆಯಿಂದ ಹೊರಹೋಗಬಹುದು. ಇಲ್ಲವಾದರೇ ತರ್ಶಿಕಾ ಎಲಿಮಿನೇಟ್ ಆಗಬಹುದು.. ಒಟ್ಟಿನಲ್ಲಿ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಈ ಪ್ರಣಯ ಜೋಡಿ ಈ ವಾರವೇ ಬೇರ್ಪಡುವುದು ಖಚಿತವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.