Temples that not allow men in India: ಭಾರತದಲ್ಲಿ ಮಹಿಳೆಯರ ಪ್ರವೇಶ ನಿಷೇಧಿಸಿರುವ ಅನೇಕ ಧಾರ್ಮಿಕ ಸ್ಥಳಗಳಿವೆ. ಆದರೆ ಕೆಲವೇ ಕೆಲವು ದೇವಾಲಯಗಳು ಮಾತ್ರ ಪುರುಷರ ಪ್ರವೇಶವನ್ನು ನಿಷೇಧಿಸಿದೆ. ಇದಕ್ಕೆ ಕಾರಣವೇನು? ಯಾವ ದೇವಾಲಯ? ಎಂಬುದನ್ನು ತಿಳಿಯೋಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕಾಮಾಕ್ಯ ದೇವಾಲಯ ಅಸ್ಸಾಂ: ಈ ದೇವಾಲಯವು ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿದೆ. ಕಾಮಾಕ್ಯ ದೇವಾಲಯವನ್ನು ನೀಲಾಚಲ ಪರ್ವತದ ಮೇಲೆ ನಿರ್ಮಿಸಲಾಗಿದ್ದು, ಶಕ್ತಿಪೀಠಗಳಲ್ಲಿ ಒಂದು ಎನ್ನಲಾಗುತ್ತದೆ. ಇನ್ನು ಈ ದೇವಾಲಯದಲ್ಲಿ ಸತಿ ದೇವಿಯ ಯೋನಿ ಭಾಗವನ್ನು ಪೂಜಿಸಲಾಗುತ್ತದೆ. ದೇವಿಯ ಎಲ್ಲಾ ಶಕ್ತಿಪೀಠಗಳಲ್ಲಿ ಅತ್ಯುನ್ನತ ಸ್ಥಾನವನ್ನು ಹೊಂದಿದೆ ಈ ದೇಗುಲ. ಅಂದಹಾಗೆ ತಾಯಿಯ ಋತುಸ್ರಾವದ ದಿನಗಳಲ್ಲಿ ಇಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನಗಳಲ್ಲಿ ಪುರುಷರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಇಲ್ಲಿನ ಪೂಜಾರಿಯೂ ಮಹಿಳೆಯೇ ಆಗಿರುತ್ತಾರೆ.
ಬ್ರಹ್ಮದೇವ ದೇವಾಲಯ: ಈ ದೇವಾಲಯವು ರಾಜಸ್ಥಾನದ ಪುಷ್ಕರ್ನಲ್ಲಿದೆ. ಇಡೀ ಭಾರತದಲ್ಲಿ ಬ್ರಹ್ಮ ದೇವರ ದೇವಾಲಯವನ್ನು ಇಲ್ಲಿ ಮಾತ್ರ ಕಾಣಬಹುದು. ಈ ದೇವಾಲಯವನ್ನು 14 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಇಲ್ಲಿ ವಿವಾಹಿತ ಪುರುಷರ ಪ್ರವೇಶ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸರಸ್ವತಿ ದೇವಿಯ ಶಾಪದಿಂದಾಗಿ ಯಾವುದೇ ವಿವಾಹಿತ ಪುರುಷರು ಇಲ್ಲಿಗೆ ಹೋಗುವಂತಿಲ್ಲ ಎಂಬುದು ನಂಬಿಕೆ. ಇದೇ ಕಾರಣದಿಂದ ಪುರುಷರು ಅಂಗಳದಲ್ಲಿ ಕೈ ಮುಗಿದು ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ.
ಭಗವತಿ ದೇವಿ ದೇವಾಲಯ: ಕನ್ಯಾಕುಮಾರಿಯ ಈ ದೇವಾಲಯದಲ್ಲಿ ತಾಯಿ ಭಗವತಿಯನ್ನು ಪೂಜಿಸಲಾಗುತ್ತದೆ. ಶಿವನನ್ನು ಪತಿಯನ್ನಾಗಿ ಪಡೆಯಲು ತಾಯಿ ಇಲ್ಲಿ ತಪಸ್ಸು ಮಾಡಲು ಬಂದಿದ್ದಳು ಎಂದು ಹೇಳಲಾಗುತ್ತದೆ. ಭಗವತಿ ತಾಯಿಯನ್ನು ಸನ್ಯಾಸ ದೇವಿ ಎಂದೂ ಕರೆಯುತ್ತಾರೆ. ಹೀಗಾಗಿ ಪುರುಷರು ಈ ದ್ವಾರದವರೆಗೆ ಮಾತ್ರ ಆಗಮಿಸಿ ತಾಯಿಯ ದರ್ಶನ ಪಡೆಯಬಹುದು.
ಅಟ್ಟುಕಲ್ ದೇವಿ ದೇವಾಲಯ: ಕೇರಳದ ಈ ದೇವಾಲಯದ ಹೆಸರು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಏಕೆಂದರೆ ಪೊಂಗಲ್ ಉತ್ಸವದಲ್ಲಿ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ಇಲ್ಲಿ ಆಗಮಿಸಿ, ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿದ್ದರು. ದೇವಾಲಯದಲ್ಲಿ ಭದ್ರಕಾಳಿ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಪೊಂಗಲ್ ಸಮಯದಲ್ಲಿ ತಾಯಿ ಭದ್ರಕಾಳಿ ದೇವಾಲಯದಲ್ಲಿ ಹತ್ತು ದಿನಗಳ ಕಾಲ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಆ ಸಂದರ್ಭದಲ್ಲಿ ಪುರುಷರು ದೇವಾಲಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.
ಚಕ್ಕುಲತುಕಾವು ದೇವಸ್ಥಾನ: ಕೇರಳದ ಚಕ್ಕುಲತುಕಾವು ದೇವಸ್ಥಾನದಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಪ್ರತಿ ವರ್ಷ ಪೊಂಗಲ್ ಹಬ್ಬದಂದು ಇಲ್ಲಿ ನಾರಿ ಪೂಜೆಯನ್ನು ನಡೆಸಲಾಗುತ್ತದೆ. ಇದು 10 ದಿನಗಳವರೆಗೆ ನಡೆಯುವ ಪೂಜೆಯಾಗಿದ್ದು, ಈ ಅವಧಿಯಲ್ಲಿ ಪುರುಷರು ಇಲ್ಲಿಗೆ ಪ್ರವೇಶಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪೂಜೆಯ ಕೊನೆಯ ದಿನದಂದು ಪುರುಷ ಅರ್ಚಕರು ಮಹಿಳೆಯರ ಪಾದಗಳನ್ನು ತೊಳೆಯುತ್ತಾರೆ.
ಸಂತೋಷಿ ಮಾತಾ ದೇವಾಲಯ: ಜೋಧ್ಪುರದಲ್ಲಿ ಸಂತೋಷಿ ಮಾತಾ ದೇವಾಲಯಕ್ಕೆ ಶುಕ್ರವಾರದಂದು ಪುರುಷರು ಹೋಗುವಂತಿಲ್ಲ. ಬೇರೆ ದಿನಗಳಲ್ಲಿ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಪಡೆಯಬಹುದು. ಆದರೆ ಪೂಜೆ ಮಾಡಿಸುವಂತಿಲ್ಲ. ಶುಕ್ರವಾರ ತಾಯಿ ಸಂತೋಷಿಯ ದಿನ ಮತ್ತು ಈ ವಿಶೇಷ ದಿನದಂದು ಮಹಿಳೆಯರು ಉಪವಾಸ ಆಚರಿಸುತ್ತಾರೆ. ಅದಕ್ಕಾಗಿಯೇ ಈ ದೇವಾಲಯಕ್ಕೆ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ