ನ್ಯಾಯ ಒದಗಿಸಿ ಎಂದು ಅರೆಬೆತ್ತಲಾದ ಈಕೆ ಯಾರು?

ಸಲ್ವಾರ್ ಕಮೀಜ್ ಧರಿಸಿ ಶನಿವಾರ ತೆಲುಗು ಫೈಲನ್ ಚೇಂಬರ್ ಎದುರು ಬಂದ ಶ್ರೀ ರೆಡ್ಡಿ ಅವರು, ನಡುರಸ್ತೆಯಲ್ಲಿಯೇ ತಮ್ಮ ಬಟ್ಟೆಗಳನ್ನು ಕಳಚಿ ತೆಲುಗು ಚಿತ್ರೋದ್ಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Last Updated : Apr 7, 2018, 05:01 PM IST
ನ್ಯಾಯ ಒದಗಿಸಿ ಎಂದು ಅರೆಬೆತ್ತಲಾದ ಈಕೆ ಯಾರು? title=

ಹೈದರಾಬಾದ್: ತೆಲುಗು ಚಿತ್ರೋದ್ಯಮದಲ್ಲಿ ಲೈಂಗಿಕ ಶೋಷಣೆ ಹೆಚ್ಚಾಗಿದೆ. ಅವಕಾಶ ಬೇಡಿ ಬರುವ ನಟಿಯರು ಲೈಂಗಿಕ ಶೋಷಣೆಗೆ ತುತ್ತಾಗುತ್ತಿದ್ದಾರೆ ಎಂದು ತೆಲುಗು ಉದಯೋನ್ಮುಖ ನಟಿ ಶ್ರೀ ರೆಡ್ಡಿ ಆರೋಪಿಸಿದ್ದಾರೆ. 

ಸಲ್ವಾರ್ ಕಮೀಜ್ ಧರಿಸಿ ಶನಿವಾರ ತೆಲುಗು ಫಿಲ್ಮ್ ಚೇಂಬರ್ ಎದುರು ಬಂದ ಶ್ರೀ ರೆಡ್ಡಿ ಅವರು, ನಡುರಸ್ತೆಯಲ್ಲಿಯೇ ತಮ್ಮ ಬಟ್ಟೆಗಳನ್ನು ಕಳಚಿ ತೆಲುಗು ಚಿತ್ರೋದ್ಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಅವಕಾಶ ಕೇಳಿದರೆ ನಿರ್ದೇಶಕರು ನಿರ್ಮಾಪಕರು ನಗ್ನ ಚಿತ್ರಗಳನ್ನು ವೀಡಿಯೋಗಳನ್ನು ತೋರಿಸುವಂತೆ ಹೇಳುತ್ತಾರೆ. ಅದೆಲ್ಲವನ್ನೂ ಸಹಿಸಿಕೊಂಡು ಅವರು ಕೇಳಿದ್ದನ್ನು ನೀಡಿದ್ದೇನೆ. ಆದರೂ ಇದುವರೆಗೂ ಒಂದೂ ಅವಕಾಶ ಕೊಟ್ಟಿಲ್ಲ" ಎಂದು ಆರೋಪಿಸಿದರು. 

ಮುಂದುವರೆದು, "ಈಗಾಗಲೇ ಮೂರು ಚಿತ್ರಗಳಲ್ಲಿ ನಟಿಸಿದ್ದರೂ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ (ಎಂಎಎ) ತನಗೆ ಇನ್ನೂ ಸದಸ್ಯತ್ವ ನೀಡಿಲ್ಲ. ಈಗ ನನಗೆ ತೋಚುತ್ತಿರುವುದು ಇದೊಂದೇ ಮಾರ್ಗ, ಸಾರ್ವಜನಿಕವಾಗಿ ಬೆತ್ತಲಾಗಿ ಪ್ರತಿಭಟಿಸಬೇಕಾದ ಪರಿಸ್ಥಿತಿ ಎದುರಾಗಿದೆ. ತೆಲುಗು ನಟಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನೇ ಉದಾಹರಣೆ" ಎಂದು ಶ್ರೀರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. 

Trending News