Pavitra Lokesh : ಲಿಪ್‌ಕಿಸ್‌ ಕೊಟ್ಟು ಪ್ಯಾನ್ಸ್‌ಗೆ ಸ್ವೀಟ್‌ ಸುದ್ದಿ ಹೇಳಿದ ನಟಿ ಪವಿತ್ರ - ನರೇಶ್‌..!

ಟಾಲಿವುಡ್‌ ನಟ ವಿಕೆ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಸಾಕಷ್ಟು ವಿವಾದದ ನಂತರ ಅಂತಿಮವಾಗಿ ಇಬ್ಬರು ಮದುವೆಯಾಗುತ್ತಿರುವ ವಿಚಾರನ್ನು ಬಹಿರಂಗ ಮಾಡಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ನರೇಶ್‌ ಭಾವಿ ಪತ್ನಿಗೆ ಲಿಪ್‌ಕಿಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಮ್ಯಾರೇಜ್‌ ಮ್ಯಾಟರ್‌ ತಿಳಿಸಿದ್ದಾರೆ.

Written by - Krishna N K | Last Updated : Dec 31, 2022, 03:40 PM IST
  • ಟಾಲಿವುಡ್‌ ನಟ ವಿಕೆ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.
  • ನರೇಶ್‌ ಭಾವಿ ಪತ್ನಿಗೆ ಲಿಪ್‌ಕಿಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಮ್ಯಾರೇಜ್‌ ಮ್ಯಾಟರ್‌ ತಿಳಿಸಿದ್ದಾರೆ.
  • ವಿ.ಕೆ.ನರೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಮದುವೆ ಬಗ್ಗೆ ಮಾಹಿತಿ ನೀಡಿದ್ದಾರೆ.
Pavitra Lokesh : ಲಿಪ್‌ಕಿಸ್‌ ಕೊಟ್ಟು ಪ್ಯಾನ್ಸ್‌ಗೆ ಸ್ವೀಟ್‌ ಸುದ್ದಿ ಹೇಳಿದ ನಟಿ ಪವಿತ್ರ - ನರೇಶ್‌..! title=

Pavitra Naresh lipkiss : ಟಾಲಿವುಡ್‌ ನಟ ವಿಕೆ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಸಾಕಷ್ಟು ವಿವಾದದ ನಂತರ ಅಂತಿಮವಾಗಿ ಇಬ್ಬರು ಮದುವೆಯಾಗುತ್ತಿರುವ ವಿಚಾರನ್ನು ಬಹಿರಂಗ ಮಾಡಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡಿರುವ ನರೇಶ್‌ ಭಾವಿ ಪತ್ನಿಗೆ ಲಿಪ್‌ಕಿಸ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಮ್ಯಾರೇಜ್‌ ಮ್ಯಾಟರ್‌ ತಿಳಿಸಿದ್ದಾರೆ.

ಸೂಪರ್‌ ಸ್ಟಾರ್‌ ಕೃಷ್ಟ ಅವರ ಮೊದಲ ಪತ್ನಿ ವಿಜಯನಿರ್ಮಲಾ ಅವರ ಪುತ್ರ, ನರೇಶ್ ಅವರು ಕನ್ನಡ ಸೇರಿದಂತೆ ತೆಲುಗು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಹೊಂದಿರುವ ಪವಿತ್ರಾ ಲೊಕೇಶ್‌ ಅವರನ್ನು ಮದುವೆಯಾಗುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಕಳೆದ ಒಂದು ವರ್ಷದಿಂದ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬುವುದಾಗಿ ಹಲವು ರೀತಿಯ ಸುದ್ದಿಗಳು ಹೊರಬಿದ್ದಿದ್ದವು. ಅಲ್ಲದೆ ಮೂರನೇ ಪತ್ನಿ ರಮ್ಯಾ ರಘುಪತಿ ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ ರಾದ್ಧಾಂತ ಮಾಡಿದ್ದರು.

ಇದನ್ನೂ ಓದಿ: BBK9 : ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ಔಟ್

ರಮ್ಯಾ ರಘುಪತಿ ಅವರು ಕೈಗೆ ನರೇಶ್‌ ಮತ್ತು ಪವಿತ್ರಾ ಮೈಸೂರಿನಲ್ಲಿ ಒಂದೇ ಕೊಠಡಿಯಲ್ಲಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ರಮ್ಯಾ ಮಾಧ್ಯಮಗಳ ಮುಂದೆ ರಮ್ಯಾ ರಂಪಾಟ ಮಾಡಿದ್ದರು. ಇದರಿಂದ ಪವಿತ್ರಾ ಮತ್ತು ನರೇಶ್‌ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು. ಆದರೆ ನರೇಶ್‌ ತಂದೆ ಕೃಷ್ಣ ಅವರ ಅಂತಿಮ ಸಂಸ್ಕಾರದ ವೇಳೆ ರಮ್ಯಾ ರಘುಪತಿ, ನರೇಶ್ ಮತ್ತು ಪವಿತ್ರಾ ಭಾಗವಹಿಸಿದ್ದರು. 

ಕಳೆದ ಕೆಲವು ದಿನಗಳ ಹಿಂದೆ ತಮ್ಮನ್ನು ಟ್ರೋಲ್‌ ಮಾಡುತ್ತಿದ್ದವರ ಮೇಲೆ ನರೇಶ್ ಪವಿತ್ರ ದೂರು ನೀಡಿದ್ದರು. ತಮ್ಮ ಬಗ್ಗೆ ಅಶ್ಲೀಲ ಲೇಖನಗಳನ್ನು ಬರೆಯಲಾಗುತ್ತಿದೆ ಎಂದು ಆರೋಪಿಸಿ ಕೆಲವು ಸುದ್ದಿ ಚಾನೆಲ್‌ಗಳು, ಯೂಟ್ಯೂಬ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳ ಮೇಲೆ ದೂರು ದಾಖಲಿಸಿದ್ದರು. ಆದರೆ ಅಂತಿಮವಾಗಿ 2023ರ ಹೊಸ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ವಿ.ಕೆ.ನರೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡುವ ಮೂಲಕ, ತಮ್ಮ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭವಾಗಿದೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News