Hanuman Movie :ʼಹನುಮಾನ್‌ʼ ಅಬ್ಬರಕ್ಕೆ ಸ್ಟಾರ್‌ ನಟರ ಸಿನಿಮಾಗಳೇ ಧೂಳಿಪಟ..! 100 ಕೋಟಿ ಕ್ಲಬ್‌ ಸೇರಿದ ಚಿತ್ರ

Hanuman movie box office : ಸಂಕ್ರಾಂತಿಯಂದು ಬಿಡುಗಡೆಯಾದ ಸೂಪರ್‌ ಸ್ಟಾರ್‌ಗಳ ಸಿನಿಮಾಗಳ ನಡುವೆ ಯುವ ನಟ ತೇಜ ಸಜ್ಜಾ ನಟನೆಯ ʼಹನುಮಾನ್‌ʼ ಸಿನಿಮಾ ಪಾಸಿಟಿವ್ ಟಾಕ್‌ನೊಂದಿಗೆ ಉತ್ತಮ ಪ್ರದರ್ಶನ ಪಡೆಯುತ್ತಿದೆ. ಇದೀಗ ಈ ಚಿತ್ರವು 100 ಕೋಟಿ ಕ್ಲಬ್ ಸೇರಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

Written by - Krishna N K | Last Updated : Jan 17, 2024, 01:08 PM IST
  • ತೇಜ ಸಜ್ಜಾ ನಟನೆಯ ಹನುಮಾನ್‌ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
  • ಹನುಮಾನ್‌ ಅಬ್ಬರಕ್ಕೆ ಗಂಟೂರು ಖಾರ, ಸೇರಿ ಎಲ್ಲಾ ಸಿನಿಮಾಗಳು ಉಢೀಸ್‌ ಆಗಿವೆ.
  • ಈ ಚಿತ್ರ 100 ಕೋಟಿ ಕ್ಲಬ್ ಸೇರಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
Hanuman Movie :ʼಹನುಮಾನ್‌ʼ ಅಬ್ಬರಕ್ಕೆ ಸ್ಟಾರ್‌ ನಟರ ಸಿನಿಮಾಗಳೇ ಧೂಳಿಪಟ..! 100 ಕೋಟಿ ಕ್ಲಬ್‌ ಸೇರಿದ ಚಿತ್ರ title=

Teja Sajja Hanuman movie : ಪ್ರಶಾಂತ್ ವರ್ಮಾ ನಿರ್ದೇಶನದ ತೇಜ ನಾಯಕನಾಗಿ ನಟಿಸಿದ ʼಹನುಮಾನ್ʼ ಚಿತ್ರ ಜನವರಿ 12 ರಂದು ಬಿಡುಗಡೆಯಾಯಿತು. ಈ ಚಿತ್ರದ ಜೊತೆಗೆ ಬಿಡುಗಡೆಯಾದ ಮಹೇಶ್ ಬಾಬು ಅಭಿನಯದ ʼಗುಂಟೂರು ಖಾರʼ ಭಾರಿ ಪೈಪೋಟಿ ನೀಡಿತ್ತು. ಆದ್ರೆ, ಹನುಮಾನ್‌ ಅಬ್ಬರಕ್ಕೆ ಮಹೇಶ್ ಬಾಬು ಚಿತ್ರ ಬಾಕ್ಸ್ ಆಫೀಸ್ ಅಷ್ಟಾಗಿ ಸದ್ದು ಮಾಡಲಿಲ್ಲ.

ಹನುಮಾನ್ ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಬಿಡುಗಡೆಯಾಗುತ್ತಿದ್ದಂತೆ, ಭಾರತದಾದ್ಯಂತ ಸಿನಿ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಚಿತ್ರಕ್ಕೆ ಎಲ್ಲಾ ಭಾಷೆಗಳ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಿಲೀಸ್‌ ಆಗಿ ನಾಲ್ಕು ದಿನ ಕಳೆದರೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿವೆ. ಅದರಲ್ಲೂ ಅಮೇರಿಕಾದಲ್ಲಿ ಸಂಚಲನ ಮೂಡಿಸುತ್ತಿರುವ ಈ ಚಿತ್ರ ಈಗ ಕಲೆಕ್ಷನ್ ವಿಚಾರದಲ್ಲಿ ಮತ್ತೊಂದು ಮೈಲಿಗಲ್ಲು ದಾಟಿದೆ.

ಇದನ್ನೂ ಓದಿ: ರಾಮ್ ಚರಣ್ ಬೇಬಿ ಜೊತೆ ಅಲ್ಲು ಅರ್ಜುನ್ ಮಗಳ ಕ್ಯೂಟ್‌ ಡ್ಯಾನ್ಸ್..! ವಿಡಿಯೋ ಇಲ್ಲಿದೆ

ಇದೀಗ ಹನುಮಾನ್ ಚಿತ್ರ 100 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ, ಚಿತ್ರತಂಡ ಅಧಿಕೃತವಾಗಿ ಪೋಸ್ಟರ್ ಮೂಲಕ ಪ್ರಕಟಿಸಿದೆ. ಹಲವು ಸಿನಿಮಾ ಟ್ರೇಡ್ ಸೆಲೆಬ್ರಿಟಿಗಳೂ ಹನುಮಾನ್ ಸಿನಿಮಾದ ಕಲೆಕ್ಷನ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ.

ಹಿಂದಿಯಲ್ಲೂ ಈ ಸಿನಿಮಾ ಜನಪ್ರಿಯತೆ ಗಳಿಸಿದೆ. ಈಗಾಗಲೇ ಅಲ್ಲಿ ಚಿತ್ರ 16 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಹನುಮಾನ್ ಚಿತ್ರವು ಅಮೇರಿಕಾದಲ್ಲಿ 3 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಮತ್ತೊಂದೆಡೆ, ಹನುಮಾನ್ ತೆಲುಗು ಆವೃತ್ತಿಯು 50 ಕೋಟಿ ವರೆಗೆ ಒಟ್ಟು ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಉಳಿದಂತೆ ದಕ್ಷಿಣ ರಾಜ್ಯಗಳಲ್ಲಿನ ಗಳಿಕೆ ಸೇರಿ 100 ಕೋಟಿ ಕ್ಲಬ್ ಸೇರಿದೆ.

ಇದನ್ನೂ ಓದಿ:ಹಾಲಿವುಡ್‌ ಸಿರೀಸ್‌ನ ಪ್ರೇರಣೆ ಪಡೆದ 'ಬ್ಯಾಚುಲರ್ ಪಾರ್ಟಿ'!

ಅಲ್ಲದೆ, 18ರ ವರೆಗೆ ಸಂಕ್ರಾಂತಿ ರಜೆ ಇದ್ದು, ಸಿನಿಮಾದ ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹಿಂದಿಯಲ್ಲೂ ಜನವರಿ 25ರವರೆಗೆ ಬೇರೆ ಚಿತ್ರಗಳು ಇಲ್ಲದ ಕಾರಣ ಅಲ್ಲಿಯೂ ಉತ್ತಮ ಹಣ ಗಳಿಕೆ ಮಾಡಲಿದೆ. ಒಟ್ಟಿನಲ್ಲಿ ಹನುಮಾನ್ ಸಿನಿಮಾ ಭಾರತದ ಜೊತೆಗೆ ಅಮೆರಿಕಾದಲ್ಲೂ ಕೂಡ ಸಖತ್‌ ಸದ್ದು ಮಾಡುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News