PUSHPA SAREE:ಮಾರುಕಟ್ಟೆಗೆ ಬಂತು ಶ್ರೀವಲ್ಲಿ ಸೀರೆ.. ಹೆಂಗಳೆಯರ ಮನ ಗೆಲ್ಲುತ್ತಾ ಪುಷ್ಪ ಸಾರೀ!

ನಟ ಅಲ್ಲು ಅರ್ಜುನ್ (Allu Arjun) ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Madanna) ಅಭಿನಯದ 'ಪುಷ್ಪ: ದಿ ರೈಸ್' ಚಿತ್ರವು ಭಾರತದಲ್ಲಿ ಅದ್ಭುತ ಯಶಸ್ಸನ್ನು ಗಳಿಸಿದೆ.

Edited by - Chetana Devarmani | Last Updated : Feb 15, 2022, 11:18 AM IST
  • ಮಾರುಕಟ್ಟೆಗೆ ಬಂತು ಶ್ರೀವಲ್ಲಿ ಸೀರೆ
  • ದೇಶದಾದ್ಯಂತ ಜನಪ್ರಿಯವಾಗುತ್ತಿದೆ ಪುಷ್ಪಾ ಸೀರೆ
  • ಪುಷ್ಪ ಪೋಸ್ಟರ್ ಬಳಸಿ ಮಾಡಿದ ಸೀರೆ
PUSHPA SAREE:ಮಾರುಕಟ್ಟೆಗೆ ಬಂತು ಶ್ರೀವಲ್ಲಿ ಸೀರೆ.. ಹೆಂಗಳೆಯರ ಮನ ಗೆಲ್ಲುತ್ತಾ ಪುಷ್ಪ ಸಾರೀ!  title=
ಪುಷ್ಪಾ ಸೀರೆ

ನವದೆಹಲಿ: ನಟ ಅಲ್ಲು ಅರ್ಜುನ್ (Allu Arjun) ಮತ್ತು ನಟಿ ರಶ್ಮಿಕಾ ಮಂದಣ್ಣ (Rashmika Madanna) ಅಭಿನಯದ 'ಪುಷ್ಪ: ದಿ ರೈಸ್' ಚಿತ್ರವು ಭಾರತದಲ್ಲಿ ಅದ್ಭುತ ಯಶಸ್ಸನ್ನು ಗಳಿಸಿದೆ. ಸಖತ್ ಡೈಲಾಗ್‌ಗಳಿರಲಿ ಅಥವಾ ಹೃದಯಸ್ಪರ್ಶಿ ಹಾಡುಗಳಿರಲಿ, ಎಲ್ಲರನ್ನೂ ಮೆಚ್ಚಿಸುವಲ್ಲಿ ಚಿತ್ರ ಯಶಸ್ವಿಯಾಗಿದೆ. 

ಇದನ್ನೂ ಓದಿ: ಈ ಹೊತ್ತಲ್ಲಿ ನೀರು ಕುಡಿದರೆ ವಿಷವಾಗಿ ಪರಿಣಮಿಸಬಹುದು, ಎಂದಿಗೂ ಈ ತಪ್ಪು ಮಾಡದಿರಿ

ಚಿತ್ರದ ಕ್ರೇಜ್ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಸೆಲೆಬ್ರಿಟಿಗಳು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಶ್ರೀವಲ್ಲಿ ಮತ್ತು ಸಾಮಿ-ಸಾಮಿ ಹಾಡುಗಳ ಮೇಲೆ Instagram ರೀಲ್ಸ್ ವಿಡಿಯೋಗಳನ್ನು ಮಾಡಿದರು.

ಮಾರುಕಟ್ಟೆಗೆ ಬಂತು ಶ್ರೀವಲ್ಲಿ ಸೀರೆ: 

'ಪುಷ್ಪ' (Pushpa) ಪಾತ್ರದಲ್ಲಿ ನಟಿಸಿದ್ದ ಅಲ್ಲು ಅರ್ಜುನ್‌ ಸಿಗ್ನೇಚರ್ ಸ್ಟೆಪ್ ನಕಲು ಮಾಡಿದವರು ಹಲವರು. ಹಾಡುಗಳಿಂದ ಹಿಡಿದು ಸಂಭಾಷಣೆಯವರೆಗೂ ಚಿತ್ರ ಎಲ್ಲ ರೀತಿಯಲ್ಲೂ ಹಿಟ್ ಆಯಿತು. ಇದೀಗ ಅನೇಕ ಫ್ಯಾಷನ್ ಡಿಸೈನರ್ ಗಳು ಕೂಡ ಚಿತ್ರದ ಪೋಸ್ಟರ್ ಗಳ ಜೊತೆಗೆ ಸೀರೆಗಳನ್ನು ಪ್ರಿಂಟ್ ಮಾಡಿಸಿ ಚಿತ್ರದ ಜನಪ್ರಿಯತೆಯನ್ನು ನಗದೀಕರಿಸಲು ಪ್ರಯತ್ನಿಸುತ್ತಿದ್ದಾರೆ. 

ಗುಜರಾತ್‌ನ ಸೂರತ್‌ನಲ್ಲಿ ಚಿತ್ರದ ಪೋಸ್ಟರ್‌ನೊಂದಿಗೆ ಮುದ್ರಿತ ಸೀರೆಗಳನ್ನು (Srivalli Saree) ಪ್ರದರ್ಶಿಸಿದ ವಿಡಿಯೋ ಟ್ವಿಟರ್‌ನಲ್ಲಿ ಕಾಣಿಸಿಕೊಂಡಿದೆ. ಚರಂಜಿತ್ ಕ್ರಿಯೇಷನ್ಸ್ ಹೆಸರಿನ ಸ್ಥಳೀಯ ಅಂಗಡಿಯೊಂದು ತಯಾರಿಸಿದ ವಿಶಿಷ್ಟ ಸೀರೆ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪುಷ್ಪ ಪೋಸ್ಟರ್ ಬಳಸಿ ಮಾಡಿದ ಸೀರೆ:

ಪುಷ್ಪಾ ಪೋಸ್ಟರ್‌ಗಳನ್ನು (Pushpa Poster) ಬಳಸಿಕೊಂಡು ಸೀರೆಗಳನ್ನು ತಯಾರಿಸುವ ಕಲ್ಪನೆಯನ್ನು ಮಾಲೀಕ ಚರಣ್‌ಪಾಲ್ ಸಿಂಗ್ ಅವರು ವ್ಯಕ್ತಪಡಿಸಿದ್ದಾರೆ. ಅವರು ಮುದ್ರಿತ ಸೀರೆಗಳ ಹಲವಾರು ಮಾದರಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದು ವೈರಲ್ ಆಗಿದೆ. 

ಇದನ್ನೂ ಓದಿ: ಕೆಪಿಸಿಸಿಯಿಂದ ಶಾಸಕ ಜಮೀರ್ ಅಹಮದ್ ಗೆ ಬಿಗ್ ಶಾಕ್!

ಶೀಘ್ರದಲ್ಲೇ, ಅನೇಕ ಗ್ರಾಹಕರು ಈ ಸೀರೆಯನ್ನು ಖರೀದಿಸುತ್ತಿದ್ದಾರೆ. ಮಾಲೀಕರಿಗೆ ದೇಶಾದ್ಯಂತದ ಜವಳಿ ವ್ಯಾಪಾರಿಗಳಿಂದ ಭಾರಿ ಬೇಡಿಕೆಗಳು ಬಂದಿವೆ. ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಪ್ರಮುಖ ರಾಜ್ಯಗಳ ಜನರು 'ಪುಷ್ಪ' ಸೀರೆಗಳನ್ನು ಆರ್ಡರ್ ಮಾಡುತ್ತಿದ್ದಾರೆ.

ಈ ಸೀರೆ ಹೆಂಗಳೆಯರ ಮನಸೆಳೆಯುತ್ತಿದೆ. ಇದರಿಂದಾಗಿ ಈಗ ಈ ಸೀರೆಗೆ ಮಹಿಳೆಯರಿಂದ ಭಾರೀ ಬೇಡಿಕೆ ಬಂದಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News