Adipurush: "600 ಕೋಟಿ ವ್ಯರ್ಥ, ನನಗೆ ಸಹಿಸಲಾಗಲಿಲ್ಲ.." ಆದಿಪುರುಷ ನೋಡಿ ಕೋಪಗೊಂಡ ನಟ!

Adipurush: ಭಾರತದಿಂದ ನೇಪಾಳದ ವರೆಗೂ ಆದಿಪುರುಷ ಸಿನಿಮಾದ ವಿಚಾರವಾಗಿ ಗಲಾಟೆ ನಡೆದಿದೆ. ಇತ್ತೀಚೆಗಷ್ಟೇ ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಲಕ್ಷ್ಮಣನಾಗಿ ನಟಿಸಿದ್ದ ಸುನೀಲ್ ಲಹರಿ ಸಿನಿಮಾ ನೋಡಿದ್ದು, ಇದೀಗ ಅವರ ಪ್ರತಿಕ್ರಿಯೆ ಮುನ್ನೆಲೆಗೆ ಬಂದಿದೆ.  

Written by - Chetana Devarmani | Last Updated : Jun 19, 2023, 09:24 PM IST
  • ರಮಾನಂದ್ ಸಾಗರ್ ಅವರ ರಾಮಾಯಣ
  • ಲಕ್ಷ್ಮಣನಾಗಿ ನಟಿಸಿದ್ದ ಸುನೀಲ್ ಲಹರಿ
  • ಆದಿಪುರುಷ ನೋಡಿ ಕೋಪಗೊಂಡ ನಟ!
Adipurush: "600 ಕೋಟಿ ವ್ಯರ್ಥ, ನನಗೆ ಸಹಿಸಲಾಗಲಿಲ್ಲ.." ಆದಿಪುರುಷ ನೋಡಿ ಕೋಪಗೊಂಡ ನಟ!  title=

Sunil Lahri Reaction on Adipurush: ಆದಿಪುರುಷ ಸಿನಿಮಾ ಜೂನ್‌ 16 ರಂದು ಬಿಡುಗಡೆಯಾಯಿತು. ಇದನ್ನು ನೋಡಿ ಕೆಲವರು ಚಿತ್ರವನ್ನು ಅದ್ಭುತವೆಂದು ಕೊಂಡಾಡಿದ್ದಾರೆ, ಕೆಲವರು ಅದನ್ನು ನೋಡುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಅವಮಾನಿಸದ್ದಾರೆ ಎಂದು ದೂಷಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ಸುನಿಲ್ ಲಹರಿ ಕೂಡ ಆದಿಪುರುಷ ಸಿನಿಮಾ ವೀಕ್ಷಿಸಿದ್ದು, ಕೋಪದಿಂದ ಪ್ರತಿಕ್ರಿಯಿಸಿದ್ದಾರೆ. 

ಸುನಿಲ್ ಲಹರಿ ಹೇಳಿದ್ದೇನು?

90ರ ದಶಕದಲ್ಲಿ ಬಂದ ರಮಾನಂದ್ ಸಾಗರ್ ಅವರ ರಾಮಾಯಣ ಸಾಕಷ್ಟು ಜನಪ್ರಿಯವಾಗಿದೆ. ಜನರು ಇದನ್ನು ಮೆಚ್ಚಿ ಕೊಂಡಾಡಿದ್ದರು. ಆದ್ದರಿಂದ ಅದರ ಪಾತ್ರಗಳನ್ನು ನಿಜವಾದ ದೇವರೆಂದು ಪರಿಗಣಿಸಿ ಪೂಜಿಸಲಾಯಿತು. ಸುನಿಲ್ ಲಹರಿ ಅವರು ಲಕ್ಷ್ಮಣನ ಪಾತ್ರದಲ್ಲಿ ನಟಿಸುವ ಮೂಲಕ ಪ್ರತಿ ಮನೆಯಲ್ಲೂ ಬಹಳ ಜನಪ್ರಿಯರಾದರು. ಈಗ ರಾಮಾಯಣವನ್ನು ಆಧರಿಸಿದ ಆದಿಪುರುಷ ಸಿನಿಮಾ ನೋಡಿದಾಗ ಸುನೀಲ್‌ ಅವರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಚಿತ್ರದ ಪಾತ್ರಗಳ ಲುಕ್‌ನಿಂದ ಹಿಡಿದು ಡೈಲಾಗ್‌ಗಳವರೆಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿಯನ್ನು ಆಧರಿಸಿದ ರಾಮಾಯಣ ಎಂದು ಚಿತ್ರದ ಆರಂಭದಲ್ಲೇ ಹೇಳಲಾಗಿದೆ, ಆದರೂ ಅದರಲ್ಲಿ ಇಂತಹ ಭಾಷೆ ಬಳಸಿರುವುದು ಖಂಡನೀಯ ಎಂದರು.

ಇದನ್ನೂ ಓದಿ: Allu Arjun: ಪುಷ್ಪ 2 ಸಿನಿಮಾದ ಬಿಗ್ ಆ್ಯಕ್ಷನ್ ಸೀನ್ ಲೀಕ್, ನದಿ ದಡದಲ್ಲಿ ನಡೆಯುತ್ತಿದೆ ಶೂಟಿಂಗ್‌.!

ಮಕ್ಕಳನ್ನು ದಾರಿ ತಪ್ಪಿಸುತ್ತಾರೆ

ಸುನಿಲ್ ಪ್ರಕಾರ ಇದೊಂದು ಸೂಪರ್ ಹೀರೋ ರೀತಿಯ ಫ್ಯಾಂಟಸಿ ಚಿತ್ರವಾದರೂ ರಾಮಾಯಣವಾಗಿ ಇದು ಮಕ್ಕಳ ದಾರಿ ತಪ್ಪಿಸುವುದು ಖಂಡಿತ. ಈ ಸಿನಿಮಾ ಮಾಡಲು ತುಂಬಾ ಖರ್ಚು ಮಾಡಿದರು, ಆದರೆ 600 ಕೋಟಿ ವ್ಯರ್ಥವಾಯಿತು. ಚಿತ್ರದ ಕ್ಲೈಮ್ಯಾಕ್ಸ್ ಅನ್ನು ಸಹಿಸಲಾಗುತ್ತಿಲ್ಲ ಎಂದು ಹೇಳಿದರು.

ಚಿತ್ರದ ಪಾತ್ರಧಾರಿಗಳ ಸಂಭಾಷಣೆಯ ಬಗ್ಗೆಯೂ ಸುನೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಹನುಮಂತ ಮತ್ತು ರಾವಣನ ಪಾತ್ರಗಳಿಗೆ ಸಂಭಾಷಣೆ ಬರೆದಿರುವ ಭಾಷೆಯ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ. ಅದರ ಬಗ್ಗೆ ಸುನೀಲ್ ಲಹರಿ ಕೂಡ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Saptami Gowda : ಅಪ್ಸರೆಯಂತೆ ಕಂಗೊಳಿಸುತ್ತಿರುವ ಯುವರಾಜನ ರಾಣಿ..ಪೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News