ಮಂಡ್ಯ : ಲೋಕಸಭಾ ಚುನಾವಣೆ ಬಳಿಕ ರಾಜಕೀಯವಾಗಿ ಅಂತರ ಕಾಯ್ದುಕೊಂಡಿದ್ದ ಸುಮಲತಾ ಇಂದು ಮತ್ತೆ ಮಂಡ್ಯದ ಚಾಮುಂಡೇಶ್ವರಿ ನಿವಾಸಕ್ಕೆ ಬಂದಿದ್ದಾರೆ. ಜನವರಿ ನಂತರ ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದರೆ. ಸ್ವಲ್ಪ ರೆಸ್ಟ್ ಬೇಕಿತ್ತು ಹಾಗಾಗಿ ಗ್ಯಾಪ್ ತೆಗೆದುಕೊಂಡಿದ್ದೆ. ಚುನಾವಣೆಯಲ್ಲಿ ಮೋದಿ ಮಾತಿಗೆ ಬೆಲೆ ಕೊಟ್ಟು ಕ್ಷೇತ್ರಬಿಟ್ಟುಕೊಟ್ಟೆ. ಕಾಲಿನ ಸಮಸ್ಯೆಗೆ ಚಿಕಿತ್ಸೆ ಪಡೆದು ರೆಸ್ಟ್ ಮಾಡಿದ್ದೇನೆ. ಜನವರಿ ಬಳಿಕ ಮಂಡ್ಯದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಲಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ.
ಬಿಜೆಪಿ ನನ್ನನ್ನು ಕಡೆಗಣಿಸಿಲ್ಲ. ಅವಶ್ಯಕತೆ ಬಿದ್ದಾಗ ಪಕ್ಷದ ಕೆಲಸಕ್ಕೆ ಬಳಸಿಕೊಂಡಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಬಲಪಡಿಸಬೇಕು ಅಂತ ಹೈಕಮಾಂಡ್‌ಗೆ ತಿಳಿಸಿದ್ದೇನೆ. ಬಿಜೆಪಿ ಸ್ಟ್ರೆಂತ್ ಹೆಚ್ಚು ಮಾಡಬೇಕು ಅನ್ನೋದನ್ನು ತಿಳಿಸಿದ್ದೇನೆ. ನಾನು ಯಾವ ನಿರೀಕ್ಷೆ ಇಟ್ಟುಕೊಂಡು ಬಿಜೆಪಿಗೆ ಬಂದಿಲ್ಲ. ಬೆಂಬಲಿಗರು ಆಸೆ ಪಡೋದ್ರಲ್ಲಿ ತಪ್ಪೇನಿಲ್ಲ. ಮೂರು ನಾಲ್ಕು ತಿಂಗಳಲ್ಲೆ ಎಲ್ಲಾ ಆಗಬಿಡಬೇಕು ಅಂತ ಏನಿಲ್ಲ. ನಮಗೂ ಟೈಮ್ ಬೇಕು, ಅವ್ರಿಗೂ ಟೈಮ್ ಬೇಕು ಹೀಗಾಗಿ ನಾನು ಯಾವುದನ್ನೂ ನೆಗೆಟಿವ್ ಆಗಿ ನೋಡ್ತಿಲ್ಲ ಎಂದು ಸುಮಲತಾ ಹೇಳಿದ್ದಾರೆ.
ಇದನ್ನೂ ಓದಿ: 'ವಿದ್ಯಾಪತಿ' ಮೊದಲ ಹಾಡು ರಿಲೀಸ್... ಕರಾಟೆ ತರಗತಿಯಲ್ಲಿ ನಾಗಭೂಷಣನ ನಾನಾ ಕಿತಾಪತಿ !
ಕೊಲೆ ಪ್ರಕರಣದಲ್ಲಿ ೈಲ ಸೇರಿ ಜಾಮೀನ ಮೇಲೆಹೊರ ಬಂದ ದರ್ಶನ್ ಬಗ್ಗೆಯೂ ಇದೇ ವೇಳ ಸುಮಲತಾ ಮಾತನಡಿದ್ದಾರೆ. ದರ್ಶನ್ ಪತ್ನಿ ನನ್ನ ಟಚ್‌ನಲ್ಲಿ ಇದ್ದಾರೆ. ದರ್ಶನ್ ಆರೋಗ್ಯ ಸುಧಾರಿಸಬೇಕಿದೆ. ಸಾಕಷ್ಟು ಚಾಲೆಂಜಸ್ ಇದೆ. ಎಲ್ಲಾ ಆರೋಪ ಮುಕ್ತವಾಗಿ ದರ್ಶನ್ ಹೊರ ಬರುವ ನಂಬಿಕೆ ಇದೆ ಎಂದಿದ್ದಾರೆ.
ನಮ್ಮ ಸಂಬಂಧ ಹಾಗೆ ಇದೆ. ನನ್ನ ಲೈಫ್ ಇರೋ ವರೆಗೂ ದರ್ಶನ್ ನನ್ನ ಮಗನೆ. ಎಲ್ಲಾ ಒಳ್ಳೆದಾಗಬೇಕು ಅಂದುಕೊಳ್ಳುತ್ತಿದ್ದೇನೆ. ನಿಜ ಹೊರ ಬಂದು ನಿರಪರಾಧಿ ಆಗಬೇಕು ಅನ್ನೋದು ನನ್ನ ಆಸೆ. ವಕೀಲರು ನಿಜಾಂಶ ಏನು ಅನ್ನೋದನ್ನ ಪ್ರೂವ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಬೆನ್ನು ನೋವು ತುಂಬಾ ಇದೆ ಆದ್ರೆ ಸರ್ಜರಿಗೆ ಇಂಟ್ರಸ್ಟಿಲ್ಲ ಅಂತಿದ್ದಾರೆ ಎಂಬ ವಿಚಾರ ಗಮನಕ್ಕೆ ಬಂತು. ಸರ್ಜರಿ ಆದ್ರೆ ರಿಕವರಿಗೆ ತುಂಬ ಸಮಯ ಬೇಕಾಗತ್ತೆ. ಸಿನಿಮಾ ಇಂಡಸ್ಟ್ರಿಯಲ್ಲೂ ಸಾಕಷ್ಟು ನಷ್ಟ ಆಗಿದೆ. ದರ್ಶನ್ ಸುತ್ತ ಟೈಟ್ ಸೆಕ್ಯುರಿಟಿ ಇದೆ, ಪೋನ್ ಕೂಡ ಉಪಯೋಗಿಸ್ತಿಲ್ಲ. ದರ್ಶನ್ ಪತ್ನಿ ಅವರಿಂದ ಅಷ್ಟೇ ಮಾಹಿತಿ ಸಿಕ್ತಿದೆ ಎಂದಿದ್ದಾರೆ.
ದರ್ಶನ್ ಗೆ ದೇವರು ಕಾಪಾಡುತ್ತಾರೆ ಎಂಬ ನಂಬಿಕೆ ನನಗೆ ಇದೆ. ದರ್ಶನ್ ಗೆ ತಾಯಿಯಾಗಿ ನಾನು ಏನಾದರೂ ಹೇಳೋದಿದ್ರೆ ಪರ್ಸನಲ್ ಆಗಿ ಹೇಳ್ತಿನಿ, ಮೀಡಿಯಾ ಮುಂದೆ ಅಲ್ಲಾ. ದರ್ಶನ್ ಪರ ನಾನಂತೂ ಇದ್ದೇನೆ ಅಂತ ಹೇಳ್ತಿನಿ ಎಂದು ಸಮಲತಾ ಹೇಳಿದ್ದಾರೆ.
ಇದನ್ನೂ ಓದಿ: ಶಿವರಾಜ್‌ಕುಮಾರ್ ಗೆ ಕಾಡ್ತಿದೆ ಈ ಅನಾರೋಗ್ಯ.. ವಿದೇಶದಲ್ಲಿ ಟ್ರೀಟ್‌ಮೆಂಟ್ !
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.