ಬೀದರ್ ನಲ್ಲಿ ಸಿಎಂಎಸ್ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ, ₹93 ಲಕ್ಷ ಲೂಟಿ: ವಾಚ್ ವಿಡಿಯೋ

Bank Robbery: ಹಣಕ್ಕಾಗಿ ಹೆಣ ಹಾಕಿದ ಹಂತಕರು, ಹಾಡು ಹಗಲೆ ಸಿನಿಮಾ ಸ್ಟೈಲ್ ನಲ್ಲಿ ರಾಬರಿ ಮಾಡಿದ ಖದೀಮರು, ಸಿಎಂಎಸ್ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆಗೈದು ಹಣದ ಬಾಕ್ಸ್ ಎಸ್ಟಕೇಪ್ ಮಾಡಿದ್ದಾರೆ. ಬೀದರ್ ನಗರದಲ್ಲಿ ನಡೆದ ಬ್ಯಾಂಕ್ ದರೋಡೆಯ ಕ್ರೈಂ ನ ಕಂಪ್ಲಿಟ್ ಸ್ಟೋರಿ ಇಲ್ಲಿದೆ.

Written by - Yashaswini V | Last Updated : Jan 16, 2025, 07:23 PM IST
  • ಬೆಳಿಗ್ಗೆ 10.55ರಿಂದ 11 ಗಂಟೆ ಸುಮಾರಿಗೆ ಬೀದರ್‌ ನಗರದ ಎಸ್‌ಬಿಐ ಮುಖ್ಯ ಕಚೇರಿ ಬಳಿ ದರೋಡೆ ನಡೆದಿದೆ.
  • ಎಟಿಎಂಗೆ ಹಣ ತುಂಬುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಒಬ್ಬರನ್ನು ಕೊಂದಿದ್ದಾರೆ.
  • ಮತ್ತೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದರ್ ನಲ್ಲಿ ಸಿಎಂಎಸ್ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ, ₹93 ಲಕ್ಷ ಲೂಟಿ: ವಾಚ್ ವಿಡಿಯೋ  title=

SBI Bank Robbery: ಸೆಕ್ಯೂರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ಅಪರಿಚಿತರು ಕಾರದ ಪುಡಿ ಎರಚಿ, ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೀದರ್ ನಗರದ ಹೃದಯ ಭಾಗದ ಜಿಲ್ಲಾಧಿಕಾರಿ ಕಚೇರಿಗೆ ಹೊಂದಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್.ಬಿ.ಐ) ಎಟಿಎಂ ಬಳಿ ಈ ಘಟನೆ ನಡೆದಿದೆ. 

ಬೆಳಿಗ್ಗೆ 10 ಗಂಟೆ ಸುಮಾರಿಗೆ  ಎಂದಿನಂತೆ ಸಿಎಂಎಸ್ ಸಂಸ್ಥೆಯ ವ್ಯಾನ್ ಹಣ ಲೋಡ್ ಮಾಡಿಕೊಂಡು ಕ್ಯಾಶಿಯರ್ ಗಳಾದ ಗಿರಿ ವೇಂಕೇಟಶ್, ಶಿವಕುಮಾರ್, ಗನಮ್ಯಾನ್ ಮತ್ತು ಡ್ರಾಯವರ್ ರಾಜು ಎಂಬಾತರು ಎಟಿಎಂ ನಲ್ಲಿ ಹಣ ಹಾಕಲು ಜಿಲ್ಲಾಧಿಕಾರಿ ಕಚೇರಿ ಬದಿಯ ಎಸ್‌ಬಿ‌ಐ ಬ್ಯಾಂಕ್ ಎಟಿಎಂ ಗೆ ಹಣ ಹಾಕಲು ವ್ಯಾನ್ ನಿಲ್ಲಿಸಿದ್ದಾರೆ. ಈ ವೇಳೆಯಲ್ಲಿ ಸ್ಕೇಚ್ ಹಾಕಿ ಕೂತ ಇಬ್ಬರು ಖದೀಮರು ಬೈಕ್ ಮೇಲೆ ಬಂದು ಒಮ್ಮಲೆ ಖಾರದ ಪುಡಿ ಹಾಕಿದ್ದಾರೆ. ಇದರಿಂದ ವಿಚಲಿತರಾದ ಸಿಬ್ಬಂದಿಗಳ ಮೇಲೆ ಮನ ಬಂದಂತೆ ಪಿಸ್ತೂಲ್ ತೆಗೆದು ಫೈರಿಂಗ್ ಮಾಡಿದ್ದಾರೆ. 

ಇದನ್ನೂ ಓದಿ- ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳರ ಕರಾಮತ್ತು: ಕೂಡಿಟ್ಟ ಹಣ, ಆಭರಣ ಖಾಲಿ-ಖಾಲಿ

ಈ ಘಟನೆಯಲ್ಲಿ ಸ್ಥಳದಲ್ಲೆ ಗಿರಿ ವೇಂಕಟೇಶ ಸಾವನಪ್ಪಿದ್ದಾರೆ. ಶಿವಕುಮಾರ್ ಎಂಬಾತನ ಎದೇ ಭಾಗದಲ್ಲಿ ಗುಂಡು ತಗುಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಇಷ್ಟೆಲ್ಲಾ ನಡೆದ್ರು ಖದೀಮರು ಹಣದ ಕಂತೆ ತುಂಬಿದ ಬಾಕ್ಸ್ ಬೈಕ್ ಮೇಲೆ ಇಟ್ಟ ಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಸಿ‌ಸಿ‌ಟಿ‌ವಿ ಕ್ಯಾಮರದಲ್ಲಿ ಸೆರೆಯಾಗಿದೆ. 

ಇದನ್ನೂ ಓದಿ- ಹಳಿ ಮೇಲೆ ಕುಳಿತು ಪಬ್ಜಿ ಆಡುತ್ತಿದ್ದ ಮೂವರು: ಮುಂದೆ ಆಗಿದ್ದೇನು?

ಈ ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದ್ದು ಜಿಲ್ಲೆಯ ಎಲ್ಲಾ ಚೇಕ್ ಪೊಸ್ಟ್ ಗಳಲ್ಲಿ ನಾಕಾ ಬಂದಿ ಹಾಕಿದ್ದಾರೆ. ಒಂದೊಂದು ವಾಹನದ ತಪಾಸಣೆ ನಡೆಸಿದ್ದಾರೆ. ಆರೋಪಿಗಳ ಹುಡುಕಾಟಕ್ಕೆ ಶೋಧ ನಡೆಸಿದ್ದಾರೆ. ಇತ್ತ ಘಟನೆಯಲ್ಲಿ ಮೃತಪಟ್ಟ ಗಿರಿ ವೇಂಕಟೇಶ ಕುಟುಂಬಸ್ಥರು ಕಣ್ಣಿರು ಹಾಕುತ್ತ ಕಂಬಿನಿ ಮಿಡಿದಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News