ರಾಜಮೌಳಿ ಸಿನಿಮಾ ಆಫರ್ ರಿಜೆಕ್ಟ್‌ ಮಾಡಿದ ಸ್ಟಾರ್ ಹೀರೋಯಿನ್... ಕಾರಣ ಆ ಹಿರೋ?!

Actress Refused to Act in Rajmouli Movie: ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ಒಂದು ನಿಮಿಷ ಕಾಣಿಸಿಕೊಂಡರೆ ಸಾಕು ಎಂಬ ಭಾವನೆ ಹೊಂದಿರುವ ಅನೇಕ ನಟಿಯರಿದ್ದಾರೆ. ಆದರೆ ಸ್ಟಾರ್‌ ಹಿರೋಯಿನ್‌ ಒಬ್ಬರು ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕಂತಹ ಅವಕಾಶವನ್ನು ತಿರಸ್ಕರಿಸಿದ್ದಾರೆ.. 

Written by - Savita M B | Last Updated : Jun 16, 2024, 07:05 PM IST
  • ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ಒಂದು ನಿಮಿಷ ಕಾಣಿಸಿಕೊಂಡರೆ ಸಾಕು ಎಂದುಕೊಳ್ಳುವ ನಟರು ಬಹಳ ಮಂದಿ ಇದ್ದಾರೆ.
  • ಆದರೆ ಸ್ಟಾರ್‌ ಹಿರೋಯಿನ್‌ ಒಬ್ಬರು ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕಂತಹ ಅವಕಾಶವನ್ನು ತಿರಸ್ಕರಿಸಿದ್ದಾರೆ.
 ರಾಜಮೌಳಿ ಸಿನಿಮಾ ಆಫರ್ ರಿಜೆಕ್ಟ್‌ ಮಾಡಿದ ಸ್ಟಾರ್ ಹೀರೋಯಿನ್... ಕಾರಣ ಆ ಹಿರೋ?! title=

South Actress Trisha: ನಿರ್ದೇಶಕ ರಾಜಮೌಳಿ ಅವರ ಸಿನಿಮಾದಲ್ಲಿ ಒಂದು ನಿಮಿಷ ಕಾಣಿಸಿಕೊಂಡರೆ ಸಾಕು ಎಂದುಕೊಳ್ಳುವ ನಟರು ಬಹಳ ಮಂದಿ ಇದ್ದಾರೆ. ಆದರೆ ಸ್ಟಾರ್‌ ಹಿರೋಯಿನ್‌ ಒಬ್ಬರು ಅವರ ಸಿನಿಮಾದಲ್ಲಿ ನಟಿಸಲು ಸಿಕ್ಕಂತಹ ಅವಕಾಶವನ್ನು ತಿರಸ್ಕರಿಸಿದ್ದಾರೆ.. ಹಾಗಾದ್ರೆ ಆ ಸ್ಟಾರ್ ಹೀರೋಯಿನ್ ಯಾರು? ರಾಜಮೌಳಿ ಸಿನಿಮಾ ಆಫರ್ ತಿರಸ್ಕರಿಸಿದ್ದೇಕೆ ತ್ರಿಶಾ? ಅದು ಯಾವ ಸಿನಿಮಾ? 

ಸೌತ್‌ ಬ್ಯೂಟಿ ತ್ರಿಷಾ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ.. ಈ ನಟಿಗೆ ರಾಜಮೌಳಿ ನಿರ್ದೇಶನದ, ಸುನಿಲ್ ಅಭಿನಯದ ಮರ್ಯಾದಾರಾಮಣ್ಣ ಚಿತ್ರದ ಆಫರ್ ಮೊದಲು ಹೋಯಿತು.. ಆದರೆ ತ್ರಿಷಾ ಈಗಾಗಲೇ ಸ್ಟಾರ್ ಹೀರೋಯಿನ್ ಆಗಿದ್ದರಿಂದ ರಾಜಮೌಳಿ ಅವರ ಚಿತ್ರವೇ ಇರಲಿ, ಸ್ವಲ್ಪ ಖ್ಯಾತಿಯ ನಾಯಕನಿದ್ದರೆ ಮಾತ್ರ ಅವರು ಚಿತ್ರ ಮಾಡಲು ಬಯಸುತ್ತಾರೆ. ಅದರಲ್ಲಿಯೂ ಸುನಿಲ್ ಇನ್ನೂ ಕಾಮಿಡಿಯನ್ ಮಾತ್ರ. ಅದಕ್ಕೂ ಮುನ್ನ ಅವರು ನಾಯಕನಾಗಿ ಒಂದೇ ಒಂದು ಚಿತ್ರ ಮಾಡಿದ್ದರು. ಅದೂ ದೊಡ್ಡ ಹಿಟ್ ಆಗಲಿಲ್ಲ. ಆದ್ದರಿಂದ ತ್ರಿಶಾ ಈ ಸಿನಿಮಾವನ್ನು ತಿರಸ್ಕರಿಸಿದ್ದಾರೆ.. 

ಇದನ್ನೂ ಓದಿ-ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!

ಸರಿಯಾಗಿ 14 ವರ್ಷಗಳ ಹಿಂದೆ ರಿಲೀಸ್ ಆದ 'ಮರ್ಯಾದಾ ರಾಮಣ್ಣ' ನಿರೀಕ್ಷೆಗೂ ಮೀರಿದ ರೇಂಜ್‌ನಲ್ಲಿ ಹಿಟ್ ಮಾಡಿತ್ತು. ಈಗಾಗಲೇ 'ಸಿಂಹಾದ್ರಿ', 'ಛತ್ರಪತಿ', 'ವಿಕ್ರಮಾರ್ಕುಡು', 'ಮಗಧೀರ' ಮುಂತಾದ ಇಂಡಸ್ಟ್ರಿಯ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ರಾಜಮೌಳಿ ಸಿನಿಮಾವನ್ನು ತ್ರಿಷಾ ರಿಜೆಕ್ಟ್‌ ಮಾಡಿದ್ದು ಇದೀಗ ದೊಡ್ಡ ಹಾಟ್‌ ಟಾಫಿಕ್‌ ಆಗಿದೆ.. 

ವಾಸ್ತವವಾಗಿ ಈ ಸಿನಿಮಾ ಕೂಡ ಒಳ್ಳೆಯ ಲವ್ ಸ್ಟೋರಿ ಹೊಂದಿದೆ. ಸುನಿಲ್ ಮತ್ತು ಸಲೋನಿ ನಡುವಿನ ದೃಶ್ಯಗಳನ್ನು ಪ್ರೇಕ್ಷಕರು ಆನಂದಿಸಿದರು. ಈ ಸಿನಿಮಾದಿಂದ ಸುನಿಲ್ ಗೆ ಸಿಕ್ಕಾಪಟ್ಟೆ ಕ್ರೇಜ್.. ನಾಯಕಿ ಸಲೋನಿಗೂ ಒಳ್ಳೆ ಹೆಸರು ಬಂತು. 

ಇದನ್ನೂ ಓದಿ-ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ನಟ ದರ್ಶನ್ ಹಾಗೂ ಗ್ಯಾಂಗ್!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News