South Star Naga Chaitanya: ಟಾಲಿವುಡ್ ಯಂಗ್ ಹೀರೋ ಅಕ್ಕಿನೇನಿ ನಾಗ ಚೈತನ್ಯ ನಾಗಾರ್ಜುನ ಅವರ ಪುತ್ರ ಎಂಬುದು ಎಲ್ಲರಿಗೂ ಗೊತ್ತು. ದಶಕಗಳ ಹಿಂದೆ ಮೊದಲ ಪತ್ನಿ ಲಕ್ಷ್ಮಿ ದಗ್ಗುಬಾಟಿಯಿಂದ ನಾಗ್ ಬೇರ್ಪಟ್ಟಿದ್ದರು. ನಾಗಾರ್ಜುನ ಅವರ ಮೊದಲ ಪತ್ನಿ ಲಕ್ಷ್ಮಿ ದಗ್ಗುಬಾಟಿ ಅವರ ಮಗ ನಾಗ ಚೈತನ್ಯ, ತಾಯಿಯಿಂದ ದೂರವಾಗಿ ತಂದೆಯೊಂದಿಗೆ ಬೆಳೆದರು.
ನಾಗಾರ್ಜುನ ಮೊದಲ ಪತ್ನಿ ಲಕ್ಷ್ಮಿ ಬೇರೆ ಯಾರೂ ಅಲ್ಲ, ಸಿನಿಮಾ ದಿಗ್ಗಜ, ನಿರ್ಮಾಪಕ ರಾಮಾನಾಯ್ಡು, ರಾಜೇಶ್ವರಿ ದಂಪತಿಯ ಪುತ್ರಿ ಮತ್ತು ವಿಕ್ಟರಿ ವೆಂಕಟೇಶ್ ಸಹೋದರಿ. ನಾಗಾರ್ಜುನ ಮತ್ತು ಲಕ್ಷ್ಮಿ 1984 ರಲ್ಲಿ ವಿವಾಹವಾದರು. ನಾಗ ಚೈತನ್ಯ ಈ ದಂಪತಿಗೆ 1986 ರಲ್ಲಿ ಜನಿಸಿದರು. ನಾಗ ಚೈತನ್ಯ ಹುಟ್ಟಿದ ನಾಲ್ಕು ವರ್ಷಗಳ ನಂತರ ಇಬ್ಬರೂ ಬೇರೆಯಾದರು.
ವಿಚ್ಛೇದನದ ನಂತರ ಲಕ್ಷ್ಮಿ ದಗ್ಗುಬಾಟಿ ತನ್ನ ಮಗನೊಂದಿಗೆ ಚೆನ್ನೈಗೆ ತೆರಳಿದರು. ನಾಗ ಚೈತನ್ಯ ಅವರು 18-19 ವರ್ಷ ವಯಸ್ಸಿನವರೆಗೂ ತಾಯಿಯೊಂದಿಗೆ ವಾಸಿಸುತ್ತಿದ್ದರು. ಇದೇ ಮಾತನ್ನು ಚೈತು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಬಾಲ್ಯ ಮತ್ತು ಶಾಲಾ ಜೀವನದಲ್ಲಿ ತಾಯಿಯ ನಿರ್ಧಾರಗಳೇ ನನ್ನ ಬದುಕನ್ನು ಬದಲಾಯಿಸಿದವು ಎನ್ನುತ್ತಾರೆ ನಾಗ ಚೈತನ್ಯ. ತಾಯಿ ಲಕ್ಷ್ಮಿ ತುಂಬಾ ಪ್ರಾಮಾಣಿಕತೆ ಹೊಂದಿದ್ದು, ಅವರಿಂದ ಹಲವಾರು ವಿಷಯಗಳನ್ನು ಕಲಿತಿದ್ದೇನೆ ಎಂದಿದ್ದರು..
ನಾಗಾರ್ಜುನ್‌ನಿಂದ ವಿಚ್ಛೇದನ ಪಡೆದ ನಾಗ ಚೈತನ್ಯ ಅವರ ತಾಯಿ ಲಕ್ಷ್ಮಿ ಅವರು ಸುಂದರಂ ಮೋಟಾರ್ಸ್‌ನ ಕಾರ್ಪೊರೇಟ್ ಎಕ್ಸಿಕ್ಯೂಟಿವ್ ಶರತ್ ವಿಜಯರಾಘವನ್ ಅವರನ್ನು ಎರಡನೇ ಮದುವೆಯಾಗಿದ್ದರು. ಅವರು ಯಶಸ್ವಿ ಉದ್ಯಮಿ. ಲಕ್ಷ್ಮಿ ದಗ್ಗುಬಾಟಿ ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. ಲಕ್ಷ್ಮಿ ಇಂಟೀರಿಯರ್ಸ್ ಸಂಸ್ಥಾಪಕಿ ಮತ್ತು ತನ್ನದೇ ಆದ ಕಂಪನಿಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ-Allu Arjun: ಸೌತ್ ಸ್ಟಾರ್ ಅಲ್ಲು ಅರ್ಜುನ್ ಮನೆ ಹೇಗಿದೆ ಗೊತ್ತಾ? ನೋಡಿದ್ರೆ ಕಣ್ಣು ತಿರುಗೋದು ಫಿಕ್ಸ್!!
ಎರಡನೇ ಮದುವೆಯಾದ ನಂತರ ಲಕ್ಷ್ಮಿ ದಗ್ಗುಬಾಟಿ ಅಮೆರಿಕದಲ್ಲಿ ನೆಲೆಸಿದ್ದರಿಂದ ಚೈ ತನ್ನ ತಾಯಿಯಿಂದ ದೂರವಾಗಿದ್ದಾನೆ ಎಂದು ವರದಿಯಾಗಿದೆ. ಆದರೆ ಅಮ್ಮನ ಜೊತೆ ಇರಲು ಏಕೆ ಸಾಧ್ಯವಿಲ್ಲ ಎನ್ನುವುದಕ್ಕೆ ಚೈತು ಉತ್ತರ ನೀಡಿದ್ದು, ಸಿನಿಮಾದಲ್ಲಿ ನಟಿಸಬೇಕು ಎಂಬ ಕಾರಣಕ್ಕೆ ಹೈದರಾಬಾದಿನಲ್ಲಿದ್ದೇನೆ.. ಅಮ್ಮ ಅಮೆರಿಕದಲ್ಲಿ ನೆಲೆಸಿದ್ದಾರೆ ಎಂದಿದ್ದಾರೆ.
ಹಲವು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿರುವ ಚೈತು ಮತ್ತು ಸಮಂತಾ ಟಾಲಿವುಡ್ ನಲ್ಲಿ ಸುಂದರ ಜೋಡಿಯಾಗಿದ್ದರು. ಸಮಂತಾ-ನಾಗ ಚೈತನ್ಯ 6 ಅಕ್ಟೋಬರ್ 2017 ರಂದು ವಿವಾಹವಾದರು. ಆದರೆ ಬಹಳ ವರ್ಷಗಳ ಕಾಲ ಇಬ್ಬರೂ ಒಟ್ಟಿಗೆ ಇರಲು ಸಾಧ್ಯವಾಗಲಿಲ್ಲ. ಕಾರಣಾಂತರಗಳಿಂದ ಇಬ್ಬರೂ ಬೇರೆಯಾಗಲು ಬಯಸಿ ಅಕ್ಟೋಬರ್ 2021 ರಲ್ಲಿ, ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ವಿಚ್ಛೇದನ ಪಡೆದು ಬೇರ್ಪಟ್ಟರು. ಸದ್ಯ ಈ ಜೋಡಿ ಮತ್ತೆ ಒಂದಾಗುತ್ತಾರೆಯೇ ಎಂದು ಹಲವರು ಕಾಯುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.