ʼರ‍್ಯಾಪರ್ ಆಲ್‌ ಒಕೆʼ ಅಲೋಕ್‌ನನ್ನು ವೇದಿಕೆ ಮೇಲಿಂದ ತಳ್ಳಿ ಎಸ್ಕೇಪ್‌ ಆದ ಅಪರಿಚಿತ..!

  ವೇದಿಕೆ ಮೇಲೆ ಹಾಡು ಹಾಡುತ್ತಿದ್ದ ರ‍್ಯಾಪರ್ ಆಲ್‌ ಒಕೆಯವರನ್ನು ವ್ಯಕ್ತಿಯೊಬ್ಬ ವೇದಿಕೆ ಮೇಲಿಂದ ತಳ್ಳಿ ಎಸ್ಕೇಪ್‌ ಆದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜರುಗಿದೆ ಎಂದು ಹೇಳಲಾಗಿದೆ.

Written by - Krishna N K | Last Updated : Feb 5, 2023, 04:08 PM IST
  • ರ‍್ಯಾಪರ್ ಆಲ್‌ ಒಕೆಯವರನ್ನು ವ್ಯಕ್ತಿಯೊಬ್ಬ ವೇದಿಕೆ ಮೇಲಿಂದ ತಳ್ಳಿ ಎಸ್ಕೇಪ್‌ ಆದ ವಿಡಿಯೋ ವೈರಲ್‌.
  • ಈ ಘಟನೆ ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜರುಗಿದೆ ಎಂದು ಹೇಳಲಾಗಿದೆ.
  • ಘಟನೆಯ ದೃಶ್ಯವನ್ನು ಸ್ಥಳಿಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ.
ʼರ‍್ಯಾಪರ್ ಆಲ್‌ ಒಕೆʼ ಅಲೋಕ್‌ನನ್ನು ವೇದಿಕೆ ಮೇಲಿಂದ ತಳ್ಳಿ ಎಸ್ಕೇಪ್‌ ಆದ ಅಪರಿಚಿತ..! title=

Rapper All Ok :  ವೇದಿಕೆ ಮೇಲೆ ಹಾಡು ಹಾಡುತ್ತಿದ್ದ ರ‍್ಯಾಪರ್ ಆಲ್‌ ಒಕೆಯವರನ್ನು ವ್ಯಕ್ತಿಯೊಬ್ಬ ವೇದಿಕೆ ಮೇಲಿಂದ ತಳ್ಳಿ ಎಸ್ಕೇಪ್‌ ಆದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜರುಗಿದೆ ಎಂದು ಹೇಳಲಾಗಿದೆ.

ಕಾರವಾರದಲ್ಲಿ ಕರುನಾಡು ಕರಾವಳಿ ಉತ್ಸವದಲ್ಲಿ ರ‍್ಯಾಪರ್ ಆಲ್‌ ಒಕೆ ಭಾಗವಹಿಸಿದ್ದರು. ಅದ್ಧೂರಿಯಾಗಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಎಕಾಏಕಿ ವ್ಯಕ್ತಿಯೊಬ್ಬ ವೇದಿಕೆ ಮೇಲೆ ಬಂದು ಗಾಯಕ್‌ ಅಲೋಕ್‌ ಅವರನ್ನು ತಬ್ಬಿಕೊಂಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಪೊಲೀಸ್‌ ನೋಡಿ ಹೆದರಿದಿ ಆಲ್‌ ಓಕೆ ಅಲೋಕ್‌ ಅಭಿಮಾನಿ ಅವರನ್ನು ತಳ್ಳಿ ಅಲ್ಲಿಂದ ಓಡಿ ಹೋಗಿದ್ದಾರೆ. ಘಟನೆಯ ದೃಶ್ಯವನ್ನು ಸ್ಥಳಿಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: 18 ವರ್ಷಗಳ ನಂತರ ಕಮಲ್‌ ರಜನಿ ನಡುವೆ ವಾರ್‌.. ʼಇಂಡಿಯನ್‌ 2ʼ ʼಜೈಲರ್‌ʼ ಯಾರ್‌ ಗೆಲ್ತಾರೆ..!

ಇನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ, ಕಲರ್‌ಫುಲ್ ಕಾರ್ಯಕ್ರಮದಲ್ಲಿ ಸಿಂಗರ್‌ ಅಲೋಕ್‌ ಅವರು ಮಾರಮ್ಮನ ಡಿಸ್ಕೋ ಹಾಡನ್ನು ಹಾಡುತ್ತಿದ್ದಾರೆ. ಈ ವೇಳೆ ವೇದಿಕೆ ಹತ್ತಿ ಬಂದ ವ್ಯಕ್ತಿಯೊಬ್ಬ ಅವರನ್ನು ಅಪ್ಪಿಕೊಳ್ಳುತ್ತಾನೆ. ಆಗ ಅಲ್ಲಿಗೆ ಪೊಲೀಸರು ಬರ್ತಾರೆ. ಇದರಿಂದ  ಗಾಬರಿಯಾದ ವ್ಯಕ್ತ ಹಿಂದು ಮಂದು ನೋಡದೇ ಆಲ್‌ ಒಕೆ ರ‍್ಯಾಪರ್ ಅಲೋಕ್‌ ಅವರನ್ನು ಪೊಲೀಸರ ಮೇಲೆ ತಳ್ಳುತ್ತಾನೆ. ಬಿದ್ದರೂ ಮತ್ತೆ ಮೇಲೆದ್ದ ಅಲೋಕ್ ಬಾಬು ನೋ ಪ್ರಾಬ್ಲಂ ಎನ್ನುತ್ತಾ ಮಾರಮ್ಮನ ಡಿಸ್ಕೋ ಹಾಡು ಮುಂದುವರಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News