ಬೆಳ್ಳಿತೆರೆಗೆ ಬರಲಿದೆ ಭಾರತದ ಕ್ರಿಕೆಟ್ ಮಹಾಗೋಡೆ ದ್ರಾವಿಡ್ ಬಯೋಪಿಕ್..!

 ಚಲನಚಿತ್ರವು ಮಾನವನ ಜೀವನದ ಆಂತರಿಕ ಪ್ರಪಂಚಗಳನ್ನು ಅನ್ವೇಷಿಸಲು ಅನನ್ಯವಾಗಿ ಅನುಮತಿಸುವ ಒಂದು ಮಾಧ್ಯಮವಾಗಿದೆ.ಅದರಲ್ಲೂ ಬಯೋಪಿಕ್ ಗಳು ವ್ಯಕ್ತಿ ಜೀವನ ಚರಿತ್ರೆಯ ವಿವಿಧ ಆಯಾಮಗಳ ಮೂಲಕ ಸಂಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತವೆ.

Last Updated : Jun 18, 2021, 04:28 PM IST
  • ಚಲನಚಿತ್ರವು ಮಾನವನ ಜೀವನದ ಆಂತರಿಕ ಪ್ರಪಂಚಗಳನ್ನು ಅನ್ವೇಷಿಸಲು ಅನನ್ಯವಾಗಿ ಅನುಮತಿಸುವ ಒಂದು ಮಾಧ್ಯಮವಾಗಿದೆ.
  • ಅದರಲ್ಲೂ ಬಯೋಪಿಕ್ ಗಳು ವ್ಯಕ್ತಿ ಜೀವನ ಚರಿತ್ರೆಯ ವಿವಿಧ ಆಯಾಮಗಳ ಮೂಲಕ ಸಂಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತವೆ.
ಬೆಳ್ಳಿತೆರೆಗೆ ಬರಲಿದೆ ಭಾರತದ ಕ್ರಿಕೆಟ್ ಮಹಾಗೋಡೆ ದ್ರಾವಿಡ್ ಬಯೋಪಿಕ್..!  title=

ನವದೆಹಲಿ: ಚಲನಚಿತ್ರವು ಮಾನವನ ಜೀವನದ ಆಂತರಿಕ ಪ್ರಪಂಚಗಳನ್ನು ಅನ್ವೇಷಿಸಲು ಅನನ್ಯವಾಗಿ ಅನುಮತಿಸುವ ಒಂದು ಮಾಧ್ಯಮವಾಗಿದೆ.ಅದರಲ್ಲೂ ಬಯೋಪಿಕ್ ಗಳು ವ್ಯಕ್ತಿ ಜೀವನ ಚರಿತ್ರೆಯ ವಿವಿಧ ಆಯಾಮಗಳ ಮೂಲಕ ಸಂಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತವೆ.

ಇದನ್ನೂ ಓದಿ: ಸುಳ್ಳು ಮಾಹಿತಿ ಹರಡಿದ್ದಕ್ಕಾಗಿ ಬಾಬಾ ರಾಮ್ ದೇವ್ ವಿರುದ್ಧ ಪ್ರಕರಣ ದಾಖಲು

ಈಗಾಗಲೇ ತೆಲುಗು ಫಿಲಂ ಇಂಡಸ್ಟ್ರಿ ಹಲವು ಬಯೋಪಿಕ್ ಗಳನ್ನು ಈಗಾಗಲೇ ನಿರ್ಮಿಸಿ ಗಮನ ಸೆಳೆದಿದೆ.ಅದರಲ್ಲೂ ಮುಖ್ಯವಾಗಿ ಯಾತ್ರಾ, ಎನ್‌ಟಿಆರ್, ಸೈ ರಾ ನರಸಿಂಹ ರೆಡ್ಡಿ, ಜಾರ್ಜ್ ರೆಡ್ಡಿ ಮತ್ತು ಮಲ್ಲೆಸಮ್‌ರಂತಹ ಬಯೋಪಿಕ್ ಚಿತ್ರಗಳು ಜನರ ಮೆಚ್ಚುಗೆಯನ್ನು ಗಳಿಸಿವೆ.

ಇದನ್ನೂ ಓದಿ: ಹಿಂದಿ ಎಲ್ಲಾ ಭಾರತೀಯರ ಮಾತೃಭಾಷೆ ಅಲ್ಲ: ಒವೈಸಿ

ಈಗ ಇತ್ತೀಚಿಗೆ ಬಂದಿರುವ ಸುದ್ದಿಯ ಪ್ರಕಾರ ಭಾರತದ ಕ್ರಿಕೆಟ್ ಗೋಡೆ ಎಂದೇ ಖ್ಯಾತಿಯಾದ ರಾಹುಲ್ ದ್ರಾವಿಡ್ ಕುರಿತಾದ ಸಿನಿಮಾ ತೆರೆಗೆ ಬರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.ರಾಹುಲ್ ದ್ರಾವಿಡ್ ಅವರ ಪಾತ್ರದಲ್ಲಿ ಸಿದ್ಧಾರ್ಥ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಚಿತ್ರದ ನಿರ್ದೇಶಕರು ಕಥೆಯನ್ನು ಸಿದ್ಧಪಡಿಸಿ ಅದನ್ನು ರಾಹುಲ್ ದ್ರಾವಿಡ್ (Rahul Dravid) ಅವರಿಗೆ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ನಿರ್ದೇಶಕರು ಬರೆದ ಕಥೆಗೆ ರಾಹುಲ್ ಅಚ್ಚರಿ ವ್ಯಕ್ತಪಡಿಸಿ ನಿರ್ದೇಶಕರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಕೊರೋನಾದ ಎಲ್ಲಾ ರೂಪಾಂತರಗಳ ವಿರುದ್ಧ Anti-COVID-19 drug 2-DG ಪರಿಣಾಮಕಾರಿ

ರಾಹುಲ್ ದ್ರಾವಿಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಿದ್ಧಾರ್ಥ್ ಸದ್ಯ ತಮ್ಮ ಮುಂಬರುವ ಆಕ್ಷನ್ ಫಿಲಂ ಮಹಾಸಮುದ್ರಂನಲ್ಲಿ ಬ್ಯುಸಿಯಾಗಿದ್ದಾರೆ.ಇದರಲ್ಲಿ ಶರ್ವಾನಂದ್, ಅದಿತಿ ರಾವ್ ಹೈಡಾರಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News