ತಂದೆ ಮತ್ತು ಮಗನ ಜೊತೆ ಮಲಗಿದ್ದ ಏಕೈಕ ನಟಿ ಈಕೆ-ಉಮೈರ್ ಸಂಧು ಟ್ವೀಟ್‌ಗೆ ನಟಿ ಗರಂ..!

Celina Jaitly : ಸೆಲಿನಾ ಜೇಟ್ಲಿ ಬಾಲಿವುಡ್ ಚಿತ್ರರಂಗದ ತಾರೆ. ಇವರು `ಗೋಲಮಾಲ್ ಒನ್ಸ ಮೋರ್' ಮತ್ತು `ನೋ ಎಂಟ್ರಿ' ಚಿತ್ರದಿಂದ ಪ್ರಸಿದ್ಧರಾಗಿದ್ದಾರೆ. ಕನ್ನಡದಲ್ಲಿ ಇವರು ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ `ಶ್ರೀಮತಿ' ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ಚಿತ್ರಗಳಲ್ಲಿ ತನ್ನ ನಟನೆ ಮತ್ತು ಸೌಂದರ್ಯಕ್ಕಾಗಿ ಹೆಸರು ಗಳಿಸಿದ್ದ ಈ ನಟಿಯನ್ನು ಯಾರು ಮರೆಯಲು ಸಾಧ್ಯವಿಲ್ಲ. 

Written by - Zee Kannada News Desk | Last Updated : Apr 14, 2023, 10:35 AM IST
  • ನಟಿ ಸೆಲಿನಾ ಜೇಟ್ಲಿ ಚಲನಚಿತ್ರ ಪರದೆಯಿಂದ ದೂರವಿದ್ದರೂ, ಸೆಲಿನಾ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.
  • ಈಗ ಉಮೈರ್ ಸಂಧು ಟ್ವಿಟರ್‌ನಲ್ಲಿ ನಟಿ ಸೆಲಿನಾ ಜೇಟ್ಲಿ ಖಾಸಗಿ ಜೀವನದ ಬಗ್ಗೆ ಟ್ವೀಟ್ ಮಾಡಿದ್ದಾರೆ.
  • ಈ ಟ್ವೀಟ್ ಸೆಲಿನಾ ಗಮನಕ್ಕೂ ಬಂದಿದ್ದು ಅವರು ಪ್ರತಿಕ್ರಿಯಿಸಿದ್ದಾರೆ.
ತಂದೆ ಮತ್ತು ಮಗನ ಜೊತೆ ಮಲಗಿದ್ದ ಏಕೈಕ ನಟಿ ಈಕೆ-ಉಮೈರ್ ಸಂಧು ಟ್ವೀಟ್‌ಗೆ ನಟಿ ಗರಂ..! title=

Umair Sandhu :  ನಟಿ ಸೆಲಿನಾ ಜೇಟ್ಲಿ ಚಲನಚಿತ್ರ ಪರದೆಯಿಂದ ದೂರವಿದ್ದರೂ, ಸೆಲಿನಾ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೀಗ ಇವರ ಬಗ್ಗೆ ಉಮೈರ್ ಸಂಧು ಅಶ್ಲೀಲವಾಗಿ ಬರೆದುಕೊಂಡಿರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದ್ದು, ಫರ್ದೀನ್ ಖಾನ್ ಮತ್ತು ಅವರ ತಂದೆ ಫಿರೋಜ್ ಅವರೊಂದಿಗೆ ಮಲಗಿದ ಏಕೈಕ ಬಿ-ಟೌನ್ ನಟಿ ಸೆಲಿನಾ ಜೇಟ್ಲಿ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರ ಆರೋಪಿಸಿದ್ದಾನೆ. 

ಉಮೈರ್ ಸಂಧು ಟ್ವಿಟರ್‌ನಲ್ಲಿ ನಟಿ ಸೆಲಿನಾ ಜೇಟ್ಲಿ ಖಾಸಗಿ ಜೀವನದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದು ಕೂಡ ನಿಜ ಅಥವಾ ಸುಳ್ಳು ಗೊತ್ತಿಲ್ಲ ಆದರೆ ಸೆಲಿನಾನೇ ಪ್ರತಿಕ್ರಿಯೆ ನೀಡಿರುವುದಕ್ಕೆ ನೆಟ್ಟಿಗರು ಮಿಶ್ರ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಉಮೈರ್‌ ವಿರುದ್ಧ ಉರಿದುರಿದು ಬಿದ್ದಿದ್ದಾರೆ.  ಈ ಟ್ವೀಟ್ ಸೆಲಿನಾ ಗಮನಕ್ಕೂ ಬಂದಿದ್ದು ಅವರು  ಪ್ರತಿಕ್ರಿಯಿಸಿದ್ದಾರೆ. 'ಡಿಯರ್ ಸಂಧು..ನಿನಗಿರುವ ಲೈಂಗಿಕ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಹಲವು ದಾರಿಗಳಿವೆ. ಸಮಯವಿದ್ದಾಗ ವೈದ್ಯರನ್ನು ಸಂಪರ್ಕಿಸು. ದಯವಿಟ್ಟು ಟ್ವಿಟರ್ ಸಂಸ್ಥೆ ಇಂತಹ ಹುಚ್ಚರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು' ಎಂದು ಸೆಲಿನಾ ಪ್ರತಿಕ್ರಿಯೆ ನೀಡಿದ್ದಾರೆ. 

 

ಇದನ್ನೂ ಓದಿ-ಮೂರು ವರ್ಷಗಳ ನಂತರ ಮತ್ತೇ ತೆರೆ ಮೇಲೆ ಬರುವ ಇಚ್ಚೆಯಲ್ಲಿದ್ದಾರಂತೆ ಈ ನಟಿ..!

2018ರಲ್ಲೂ ಸೆಲಿನಾ ಜೇಟ್ಲಿ ಸುದ್ದಿಯಲ್ಲಿದ್ದರು. ಹಿಂದೆ ಸಿನಿಮಾ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ, ಲೈಂಗಿಕ ಅಲ್ಪಸಂಖ್ಯಾತರ ಶೋಷಣೆಯ ವಿರುದ್ಧವಾಗಿ ಧ್ವನಿ ಎತ್ತಿ ಸದ್ದಾಗುತ್ತಿದ್ದ ಸೆಲಿನಾ ಅಂತಹುದೇ ರೀತಿಯ ವಿಷಯಕ್ಕೆ ಸಂಬಂಧಿಸಿದಂತೆ ಮುನ್ನೆಲೆಗೆ ಬಂದಿದ್ದಾರೆ. ಆದರೆ ಸ್ವರೂಪ ಮಾತ್ರ ಬೇರೆಯಷ್ಟೆ. ಪ್ರೆಗ್ನೆಂಟ್ ಅಗಿದ್ದ ಸೆಲಿನಾ ಬಾತ್‌ ಟಬ್‌ನಲ್ಲಿ ಮಲಗಿಕೊಂಡಿರುವ ಫೋಟೋ ಹಂಚಿಕೊಂಡು ಹೆಣ್ಣೊಬ್ಬಳಿಗೆ ತಾಯ್ತನ ಎನ್ನುವುದು ಬಹಳ ಮುಖ್ಯವಾದ ಸಂಗತಿ. ಆಕೆ ಗರ್ಭಿಣಿಯಾದ ಸಂದರ್ಭದಲ್ಲಿ ಆರೋಗ್ಯದ ಕಡೆ ಗಮನ ಕೊಡಬೇಕು. ಅದನ್ನು ಬಿಟ್ಟು ಮೂಢನಂಬಿಕೆಗಳಿಗೆ ಸಿಕ್ಕು ತೊಂದರೆ ತಂದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ-ಚಿತ್ರದ ಘೋಷಣೆಗೂ ಮುನ್ನವೇ ಶ್ರೀಲಂಕಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಭರ್ಜರಿ ಶೂಟಿಂಗ್ ಪ್ಲಾನ್...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News