Samantha: ತಮ್ಮ ಹೊಸ ಸಿನಿಮಾ ಬಗ್ಗೆ ಸಮಂತಾ ಹೇಳಿದ್ದೇನು ಗೊತ್ತಾ..?

ನಟಿ ಸಮಂತಾ ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಎಂಟ್ರಿಯಾಗಲು ಸಜ್ಜಾಗಿದ್ದು, ಬಿಗ್‌ ಸ್ಕ್ರೀನ್‌ ಮೇಲೆ ಮತ್ತೊಮ್ಮೆ ಎಲ್ಲರನ್ನೂ ಸೆಳೆಯಲು ಸಿದ್ಧರಾಗಿದ್ದಾರೆ.

Written by - Malathesha M | Edited by - Puttaraj K Alur | Last Updated : Feb 21, 2022, 07:36 PM IST
  • ಹೊಸ ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ‘ಪುಷ್ಪ’ ಬೆಡಗಿ ಸಮಂತಾ
  • ‘ಶಕುಂತಲಂ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡ ಸಮಂತಾ
  • ಪೌರಾಣಿಕ ಚಿತ್ರದ ಸಮಂತಾ ಅವತಾರ ಕಂಡು ಫಿದಾ ಆದ ಅಭಿಮಾನಿಗಳು
Samantha: ತಮ್ಮ ಹೊಸ ಸಿನಿಮಾ ಬಗ್ಗೆ ಸಮಂತಾ ಹೇಳಿದ್ದೇನು ಗೊತ್ತಾ..? title=
‘ಶಕುಂತಲಂ’ ಸಿನಿಮಾದಲ್ಲಿ ಸಮಂತಾ ಮಿಂಚಿಂಗ್

ನವದೆಹಲಿ: ಸಮಂತಾ ಈಗ ಏನೇ ಮಾಡಿದ್ರೂ ಸುದ್ದಿ. ಯಾಕಂದ್ರೆ ಅಲ್ಲು ಅರ್ಜುನ್‌ ಅಭಿನಯದ ‘ಪುಷ್ಪ’ ಸಿನಿಮಾದಲ್ಲಿ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಪಡ್ಡೆ ಹುಡುಗರ ಹೃದಯಲ್ಲಿ ಗುಲ್ಲೆಬ್ಬಿಸಿದ್ದಾರೆ ಸಮಂತಾ(Samantha Ruth Prabhu). ತಮ್ಮ ವಿವಾಹ ವಿಚ್ಛೇದನ ವಿಚಾರಕ್ಕೆ ಇಷ್ಟುದಿನ ಸುದ್ದಿಯಲ್ಲಿದ್ದ ಸಮಂತಾ ‘ಪುಷ್ಪ’ ಬಳಿಕ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ಹೊಸ ಸಿನಿಮಾ ಬಗ್ಗೆ ಸಮಂತಾ ಬಿಗ್‌ ಅಪ್‌ಡೇಟ್‌ ಕೂಡ ನೀಡಿದ್ದಾರೆ.

ಅಂದಹಾಗೆ ನಟಿ ಸಮಂತಾ ‘ಶಕುಂತಲಂ’ ಸಿನಿಮಾದ ಪೋಸ್ಟರ್‌(Shakuntalam First Look) ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ. ಹತ್ತಾರು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ಸಮಂತಾ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಸಮಂತಾ ಅವರ ಹೊಸ ಚಿತ್ರಕ್ಕಾಗಿ ಫ್ಯಾನ್ಸ್‌ ಕಾಯುತ್ತಿದ್ದು, ಇದೀಗ ‘ಶಕುಂತಲಂ’ ಈ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಇದನ್ನೂ ಓದಿAnchor Anushree: ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ಕೊಟ್ಟ ಆ್ಯಂಕರ್ ಅನುಶ್ರೀ..!

ಹೇಗಿರಲಿದೆ ಸಿನಿಮಾ..?

‘ಶಕುಂತಲಂ’ ಚಿತ್ರ(Shakuntalam Movie) ಪೌರಾಣಿಕ ಹಿನ್ನೆಲೆಯ ಚಿತ್ರವಾಗಿದ್ದು, ಸಮಂತಾ ಅವರ ನಟನೆಯ ವಿಚಾರದಲ್ಲಿ ಎರಡನೇ ಮಾತಿಲ್ಲ. ಎಂತಹ ಪಾತ್ರ ಸಿಕ್ಕಿದರೂ ಅದಕ್ಕೆ ಜೀವ ತುಂಬುವ ತಾಕತ್ತು ಸಮಂತಾ ಅವರ ನಟನೆಯಲ್ಲಿದೆ. ಹೀಗಾಗಿ ‘ಶಕುಂತಲಂ’ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯೋದು ಗ್ಯಾರಂಟಿ.

ಒಟ್ಟಾರೆ ಹೇಳೋದಾದರೆ ನಟಿ ಸಮಂತಾ(Samantha) ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಎಂಟ್ರಿಯಾಗಲು ಸಜ್ಜಾಗಿದ್ದು, ಬಿಗ್‌ ಸ್ಕ್ರೀನ್‌ ಮೇಲೆ ಮತ್ತೊಮ್ಮೆ ಎಲ್ಲರನ್ನೂ ಸೆಳೆಯಲು ಸಿದ್ಧರಾಗಿದ್ದಾರೆ. ಅಭಿಮಾನಿಗಳು ‘ಶಕುಂತಲಂ’ ಚಿತ್ರ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ಇದನ್ನೂ ಓದಿ: Kruti Shetty: ನಟಿ ಕೃತಿ ಶೆಟ್ಟಿ ಬಗ್ಗೆ ಶುರುವಾಯ್ತು ಹೊಸ ಗಾಸಿಪ್! ಏನಿದು ಆರೋಪ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News