ಗಿನ್ನಿಸ್‌ ದಾಖಲೆ ಬರೆದ ಶಾರುಖ್‌ ಅಭಿಮಾನಿಗಳು..!

Sharukh Khan Fans : ಬಾಲಿವುಡ್‌ನ ಸೂಪರ್‌ ಹಿಟ್‌ ನಟ ಶಾರುಖ್‌ ಖಾನ್‌ ಅವರು ನಟಿಸಿರುವ ʼಪಠಾನ್‌ʼ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಹಿನ್ನಲೆಯಲ್ಲಿ ಶಾರುಖ್‌ ಖಾನ್‌ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಗಿನ್ನಿಸ್‌ ದಾಖಲೆ ಬರೆದಿದ್ದಾರೆ.   

Written by - Savita M B | Last Updated : Jun 12, 2023, 05:06 PM IST
  • ʼಪಠಾನ್‌ʼ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ
  • ಶಾರುಖ್‌ ಖಾನ್‌ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಗಿನ್ನಿಸ್‌ ದಾಖಲೆ ಬರೆದಿದ್ದಾರೆ.
  • ಅತಿಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳಲ್ಲಿ ಸದ್ಯ ಈ ಸಿನಿಮಾ 5 ನೇ ಸ್ಥಾನದಲ್ಲಿದೆ
ಗಿನ್ನಿಸ್‌ ದಾಖಲೆ ಬರೆದ ಶಾರುಖ್‌ ಅಭಿಮಾನಿಗಳು..!  title=

Patan Movie : ಹಿಂದಿಯ ಜನಪ್ರಿಯ ವಾಹಿನಿ ಸ್ಟಾರ್‌ ಗೋಲ್ಡ್‌ ಪಠಾನ್‌ ಸಿನಿಮಾವನ್ನು ಪ್ರದರ್ಶೀಸುವ ಹಕ್ಕನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಇದೇ ಜೂನ್‌ 18ರಂದು ರಾತ್ರಿ 8 ಗಂಟೆಗೆ ಚಿತ್ರ ಸ್ಟಾರ್‌ ಗೋಲ್ಡ್‌ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಹಿನ್ನೆಲೆ ಕಳೆದ ಶನಿವಾರ 250ಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಶಾರುಖ್‌ ಖಾನ್‌ ನಿವಾಸದ ಎದುರು ಏಕಕಾಲಕ್ಕೆ ಶಾರುಖ್‌ ಖಾನ್‌ ಅವರ ಸೂಪರ್‌ ಹಿಟ್‌ ಪೋಸ್‌ನ್ನು ಪ್ರದರ್ಶಿಸಿದ್ದಾರೆ. 

ಇದರ ಜೊತೆಗೆ ಪಠಾನ್‌ ಸಿನಿಮಾದ ಝೂಮೇ ಜೋ ಪಠಾನ್‌.. ಮೇರಿ ಜಾನ್‌..ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಿಶೇಷ ಎಂದರೆ ಶಾರುಖ್‌ ಅವರು ಸಹ ಅಭಿಮಾನಿಗಳ ಜೊತೆ ಹೆಜ್ಜೆಹಾಕಿರುವುದು. ಕೈಚಾಚಿ ಪೋಸ್‌ ಕೂಡ ನೀಡಿದ್ದಾರೆ. 

ಇದನ್ನೂ ಓದಿ-ಒಳ ಉಡುಪಿಲ್ಲದೇ ಪೋಟೋ ತೆಗೆಸುವ ಧೈರ್ಯ ಸೌತ್‌ ನಟಿಯರಿಗಿಲ್ಲ ಹೇಳಿಕೆಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ಕೊಟ್ಟ ನಟಿ

ಒಟ್ಟಿಗೆ 250 ಅಭಿಮಾನಿಗಳು ಒಂದೇ ಸಲ ಶಾರುಖ್‌ ಅವರ ಜನಪ್ರಿಯ ಪೋಸ್‌ನ್ನು ಪ್ರದೃಶಿಸಿದ್ದು ಗಿನ್ನಿಸ್‌ ದಾಖಲೆಯ ಪುಟಕ್ಕೆ ಸೇರಿಕೊಂಡಿದೆ. ತಮ್ಮ ಜನಪ್ರಿಯ ಪೋಸ್‌ ಅನುಕರಿಸಿ ಗಿನ್ನಿಸ್‌ ದಾಖಲೆ ಬರೆದ ಫ್ಯಾನ್ಸ್‌ಗೆ ಶಾರುಖ್‌ ಕೂಡ ಧನ್ಯವಾದ ಹೇಳಿದ್ದಾರೆ. ಈ ವಿಶೇಷ ಕಾರ್ಯಕ್ರಮವನ್ನು ಸ್ಟಾರ್‌ ಗೋಲ್ಡ್‌ ಆಯೋಜಿಸಿತ್ತು. 

ಇನ್ನು ಈ ಪಠಾನ್‌ ಸಿನಿಮಾ ಭಾಕ್ಸಾಫಿಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿತ್ತು. ದಾಖಲೆಯನ್ನು ಸೃಷ್ಟಸಿತ್ತು. ಇದೇ ಸಿನಿಮಾ ಇದೀಗ ಮತ್ತೆ ತೆರೆಗೆ ಬರಲು ಸಜ್ಜಾಗಿದ್ದು, ಜುಲೈ 13 ರಂದು ರಷ್ಯಾ ಸೇರಿದಂತೆ 7 ಪ್ರಮುಖ ದೇಶಗಳ 3 ಸಾವಿರ ಪರದೆಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಜಾಗತಿಕವಾಗಿ ಅತಿಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾಗಳಲ್ಲಿ ಸದ್ಯ ಈ ಸಿನಿಮಾ 5 ನೇ ಸ್ಥಾನದಲ್ಲಿದೆ. ಮತ್ತು ಮೂರನೇ ಸ್ಥಾನಕ್ಕೇರುವ ನಿರೀಕ್ಷೆಯೂ ಸಿನಿ ತಂಡಕ್ಕಿದೆ. 

ಇದನ್ನೂ ಓದಿ-Bodyguards Salary: ಸ್ಟಾರ್ ನಟ - ನಟಿಯರ ಬಾಡಿಗಾರ್ಡ್‌ಗಳಲ್ಲಿ ಅತಿ ಹೆಚ್ಚು ಸ್ಯಾಲರಿ ಯಾರದ್ದು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News